ಕಳೆದೆರಡು ತಿಂಗಳಿಂದ ಬಿಜೆಪಿ ಪಡಸಾಲೆಯಲ್ಲಿ ಏಕಾಏಕಿ ಆಕಾಂಕ್ಷಿಗಳ ಪಟ್ಟಿ ನಿರೀಕ್ಷೆಗೂ ಮೀರಿ ಬೆಳೆದಿದ್ದು, ಸ್ಥಳೀಯ ಹಾಗು ನೇಕಾರವೆಂಬ ಕೂಗು ಹಾಲಿ ಶಾಸಕ ಸಿದ್ದು ಸವದಿಯವರಿಗೆ ಕಂಟಕವಾಗುವಲ್ಲಿ ಕಾರಣವಾಗಿದೆ.
ವರಿಷ್ಠರ ಮಟ್ಟದಲ್ಲಿ ತೇರದಾಳ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ತೀವ್ರ ಲಾಭಿ ನಡೆಸುವ ಮೂಲಕ ಸ್ಥಳೀಯರಿಗೆ ಅದರಲ್ಲೂ ನೇಕಾರರಿಗೆ ಈ ಬಾರಿ ಟಿಕೆಟ್ ನೀಡಲೇಬೇಕೆಂಬ ಒತ್ತಾಯ ತೀವ್ರವಾಗಿರುವ ಹಿನ್ನಲೆ ಹೈಕಮಾಂಡ್‌ಗೂ ತಲೆನೋವಾಗುವಲ್ಲಿ ಕಾರಣವಾಗಿದೆ.
ಈ ಕುರಿತು ಯಾವದೇ ಹೇಳಿಕೆ ನೀಡದ ಹಾಲಿ ಶಾಸಕ ಸಿದ್ದು ಸವದಿ, ಸಾಮಾನ್ಯವಾಗಿ ಚುನಾವಣೆಯ ತಯಾರಿ ಹಾಗು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿದ್ದು, ಪಕ್ಷದ ಆಂತರಿಕ ವಿರೋಧಿಗಳ ಬಗ್ಗೆ ಯಾವದೇ ಹೇಳಿಕೆ ಅಥವಾಮಾತುಗಳನ್ನಾಡದೆ ಮೌನಕ್ಕೆ ಜಾರಿದ್ದಾರೆ.
ಈಚೆಗಷ್ಟೇ ತೇರದಾಳ ಕ್ಷೇತ್ರದ ಮುಖಂಡ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬಲಿ ಬೆಂಗಳೂರಿನಲ್ಲಿ ವರಿಷ್ಠರ ಮುಂದೆ ವಿಷದ ಬಾಟಲಿ ಹಾಗು ಹಗ್ಗ ಹಿಡಿದು ಸ್ಥಳೀಯ ನೇಕಾರರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದು ಗಮನ ಸೆಳೆದಿದೆ.
ಅಲ್ಲದೆ ಬಂಡಾಯವಾಗಿ ಸವದಿ ವಿರುದ್ಧ ಸಮರ ಸಾರಿರುವ ತೇರದಾಳದ ವೈದ್ಯ ಡಾ. ಮಹಾವೀರ ದಾನಿಗೊಂಡ ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀಮಶಿ ಮಗದುಮ್, ಕಿರಣಕುಮಾರ ದೇಸಾಯಿ, ಬಸವರಾಜ ಬಾಳಿಕಾಯಿ ಸವದಿ ಟಿಕೆಟ್ ತಪ್ಪಿಸುವದರೊಂದಿಗೆ ಸ್ಥಳೀಯರಿಗೆ ಮಣೆ ಹಾಕುವಲ್ಲಿ ಹೈಕಮಾಂಡ್‌ಗೆ ತೀವ್ರ ಒತ್ತಡ ಹೇರಿದ್ದಾರೆ.

Social Plugin