ಕಾರ್ಯಕರ್ತರ ಅತ್ಯಾಭಿಮಾನದಿಂದ ಟಿಕೆಟ್ ನಿಶ್ಚಿತ-ನಾಡಗೌಡ
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವಲ್ಲಿ ಯಾವದೇ ತೊಡಕುಗಳಿಲ್ಲ. ಸ್ಥಳೀಯನಾಗಿ ಕೆಳಮಟ್ಟದಿಂದ ವರಿಷ್ಠರು ಹಾಗು ಹೈಕಮಾಂಡ್ ಹೇಳಿದಂತೆ ಚಾಚೂ ತಪ್ಪದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ತೇರದಾಳ ಟಿಕೆಟ್ ಆಕಾಂಕ್ಷಿ ಡಾ. ಪದ್ಮಜೀತ ನಾಡಗೌಡ ಪಾಟೀಲ ತಿಳಿಸಿದರು.
ರಬಕವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯರೆಂಬ ಕೂಗಿಗೆ ಸ್ಪಂದಿಸುವ ಮೂಲಕ ಬೇರು ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ವಿಶ್ವಾಸದಿಂದ ಕಾಂಗ್ರೆಸ್ ಬಲವರ್ಧನೆಗೆ ಕಾರಣನಾಗಿದ್ದೇನೆ. 
ಎಐಸಿಸಿ ಹಾಗು ವರಿಷ್ಠರು ಈ ಬಾರಿ ನನಗೆ ಆಶೀರ್ವಾದ ಮಾಡುವದು ನಿಶ್ಚಿತವೆಂದು ನಾಡಗೌಡ ವಿಶ್ವಾಸ ವ್ಯಕ್ತಪಡಿಸಿದರು.
*ಕಾರ್ಯಕರ್ತರು ಹೇಳಿದಂತೆ ನನ್ನ ನಡೆ
 ಈಚೆಗೆ ಕೆಲ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಹೇಳಿಕೆ ನೀಡಿ, ಪಕ್ಷವು ಸ್ಥಳೀಯ ಅಭ್ಯರ್ಥಿ ನಾಡಗೌಡರಿಗೆ ಮಣೆ ಹಾಕದಿದ್ದಲ್ಲಿ ಪಕ್ಷೇತರವಾಗಿಯಾದರೂ ನಾಮಪತ್ರದ ಮೊದಲ ದಿನವೇ ಸ್ಪರ್ಧೆಗಿಳಿಯುವದಾಗಿ ಎಂಬ ಹೇಳಿಕೆಗೆ ಉತ್ತರಿಸಿದ ನಾಡಗೌಡ, ಕಾರ್ಯಕರ್ತರು ಹಾಗು ಮುಖಂಡರು ನನಗೆ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ. 
ಅವರ ಮನಸಿಗೆ ನೋವಾಗದಂತೆ ನಡೆಯುವದು ನನ್ನ ಕರ್ತವ್ಯ. 
ಅವರು ಯಾವ ರೀತಿ ತೀರ್ಮಾಣಿಸುವರೋ ಅದಕ್ಕೆ ಬದ್ಧನಾಗಿದ್ದು, ಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟಿದ್ದು, ನನ್ನ ಗೆಲವೂ ಅಷ್ಟೇ ಸ್ಪಷ್ಟವಿದೆ ಎಂದು ನಾಡಗೌಡ ತಿಳಿಸಿದರು.