ಶಾಸಕ ಸಿದ್ದು ಸವದಿ ಬಿರುಸಿನ ಪ್ರಚಾರ
 ತೇರದಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಸಿದ್ದು ಸವದಿ ಬುಧವಾರ ಬೆಳಿಗ್ಗೆ ನಗರದ ಕೆಎಚ್‌ಡಿಸಿ ಕಾಲನಿಯಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ರೈತ ಹಾಗು ನೇಕಾರ ಬಾಂಧವರು ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿಸುವಲ್ಲಿ ಕಾತುರತೆಯಲ್ಲಿದ್ದಾರೆ.
 ಕೆಎಚ್‌ಡಿಸಿ ನಿಗಮದ ಅಧ್ಯಕ್ಷನಾಗಿ ಹಾಗು ಕ್ಷೇತ್ರದ ಶಾಸಕನಾಗಿ ನೇಕಾರರಿಗೆ ದೊರಕಬೇಕಾದ ಹಲವಾರು ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದೇನೆ. ಮುಂದೆಯೂ ಕೂಡ ನೇಕಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಮತ್ತೊಂದು ಸಲ ಅವಕಾಶ ನೀಡಬೇಕೆಂದರು.
ಈಗಾಗಲೇ ಕ್ಷೇತ್ರಾದ್ಯಂತ ಒಂದು ಸುತ್ತು ಪ್ರಚಾರ ನಡೆಸಿದ್ದಾಗಿದೆ. ಮನೆ ಮನೆಗೆ ಪ್ರಚಾರ ಇದೀಗ ಕೈಗೊಂಡಿದ್ದು, ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ನೂರಕ್ಕೆ ನೂರು ಮಾಡಲಿದ್ದಾರೆಂಬ ಆಶಾಭಾವನೆಯಿದೆ ಎಂದು ಸವದಿ ವಿಶ್ವಾಸ ವ್ಯಕ್ತಪಡಿಸಿದರು.
ಚಿದಾನಂದ ಹೊರಟ್ಟಿ, ಶಿವಾನಂದ ಬುದ್ನಿ, ರೇವಪ್ಪ ಗುಣಕಿ, ಆನಂದ ಬಾಡಗಂಡಿ, ಸಿದ್ದಪ್ಪ ಗಂವಾರ, ವೀರಭದ್ರ ಕುಂಚನೂರ, ಸುರೇಶ ಮಠದ,ನಾಗಪ್ಪ ಬಾವಲತ್ತಿ, ಶಿವಾನಂದ ಕಾಗಿ, ಶಂಕರ ಕುರಂದವಾಡ, ಗೋವಿಂದ ಡಾಗಾ, ಶ್ರೀಶೈಲ ಯಾದವಾಡ ಸೇರಿದಂತೆ ಅನೇಕರಿದ್ದರು.