ವಚನ ಪಿತಾಮಹ ಜೀವನ ಚರಿತ್ರೆ ಮರಾಠಿ ಅನುವಾದ ಪುಸ್ತಕ ದಾನಿ ಶ್ರೀ ಅಶೋಕ್ ಕುಳ್ಳಿ 
ಬೆಂಗಳೂರು19: ವಚನ ಪಿತಾಮಹ ಶ್ರೀಯುತ ಫ.ಗು.ಹಳಕಟ್ಟಿ (ಫಕೀರಪ್ಪ ಹಳಕಟ್ಟಿ)ಯವರು ೨ನೇ ಜೂಲೈ ೧೮೮೦ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪ ಹಳಕಟ್ಟಿ ತಾಯಿ ದಾನಾದೇವಿ. ಹಳಕಟ್ಟಿ. ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ ಸಾಹಿತಿಗಳಾಗಿ ಸಾಕಷ್ಟು ಹೆಸರುಗಳಿಸಿದ್ದರು. ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ "ವಾಗ್ಭೂಷಣ"ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಹೀಗಾಗಿ ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಒಲಿದು ಬಂದಿತ್ತು ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡ ಉದ್ಧಾರವಾಗದೆಂದು ಆ ಕ್ಷಣವೇ ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗಾಗಿ ದುಡಿಯಲು ವಿದ್ಯಾರ್ಥಿ ದಿಸೆಯಲ್ಲೇ ದೃಢಸಂಕಲ್ಪ ಮಾಡಿದರು. ಇಂದು ನಮ್ಮ ಸಮಾಜದಲ್ಲಿ ವಿಶೇಷ ಸೇವೆಯನ್ನು ಸಲ್ಲಿಸಿರುವ ಅನೇಕ ಜಗದ್ಗುರುಗಳು, ಅಧಿಕಾರಿಗಳು, ಉದಾರ ದಾನಿಗಳೂ, ಸಾಹಿತಿಗಳೂ ಇದ್ದಾರೆ. ಕರ್ನಾಟಕ ಕಟ್ಟುವ ಕೆಲಸ ಪ್ರಾರಂಭದಿಂದ ಇವರು ಸರ್ವರಿಗೂ ಸ್ಫೂರ್ತಿದಾಯಕರಾಗಿದ್ದು, ಇಂದಿನ ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ಮೈಸೂರು ಕರ್ನಾಟಕ ಹೀಗೆ ಕರ್ನಾಟಕದ ಪ್ರತಿ ಮೂಲೆ ಮೂಲೆಯಲ್ಲೂ ಅವರ ಕಾರ್ಯಚಟುವಟಿಕೆಗಳ ಬಗ್ಗೆ ಯುವಕ-ಯುವತಿಯರಲ್ಲಿ ಸರ್ವರಿಗೂ ಸಲ್ಲುವ ಮೂರ್ತಿ ಶ್ರೀಯತ ಫ.ಗು ಹಳಕಟ್ಟಿ ಅವರಾಗಬೇಕಾಗಿದ್ದು, ಅವರನ್ನು ಬರಿ ವಚನ ಪಿತಾಮಹನೆಂದು ಕರೆದು ಕೇವಲ ಒಂದು ಜಿಲ್ಲೆಗೆ ಸೀಮಿತಗೊಳಿಸದೇ ಅವರ ಬಗ್ಗೆ ಹೆಮ್ಮೆಯಿಂದ ನಮ್ಮ ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ , ಒಕ್ಕೂರಲಿನಿಂದ ಸರ್ಕಾರಕ್ಕೆ ಅವರನ್ನು , ಅವರ ಕಾರ್ಯಗಳನ್ನು ಜೀವಂತವಿರಿಸುವತ್ತ ಹೆಜ್ಜೆಇರಿಸಲು ಒತ್ತಾಯಿಸುವ ಕಾರ್ಯ ಈಗಾಗಲೇ ಶುರುವಾಗಿದೆ. ಅದರ ಜೊತೆಗೆ 23ರಂದು ಜರುಗಲಿರುವ ಬಸವ ಜಯಂತಿ ಪ್ರಯುಕ್ತ ಮಹಾರಾಷ್ಟ್ರದಲ್ಲಿರುವ ಹಟಗಾರ ಸಮಾಜದ ಬಾಂಧವರಿಗೆ "ವಚನ ಪಿತಾಮಹ ಡಾಕ್ಟರ ಫ ಗು ಹಳಕಟ್ಟಿ ಯವರ ಜೀವನ ಚರಿತ್ರೆ ಮರಾಠಿ ಅನುವಾದ ೩೦೦ ಪುಸ್ತಕಗಳನ್ನು. ದಾನ ಮಾಡಿದ ಮಾನ್ಯ ಶ್ರೀ ಅಶೋಕ್ ಕುಳ್ಳಿ ಬೆಂಗಳೂರು ಇವರಿಗೆ ಕರ್ನಾಟಕ ರಾಜ್ಯ ಹಟಗಾರ ಸಮಾಜದ ಪರವಾಗಿ ಹೃದಯಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.