ಬನಹಟ್ಟಿಯಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟನೆ
ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದ ವಿದಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಾಲಯವನ್ನು ಬನಹಟ್ಟಿ ಹಿರೇಮಠದ ಶರಣ ಬಸವ ಶಿವಾಚಾರ್ಯರು ಹಾಗೂ ಶಾಸಕ ಸಿದ್ದು ಸವದಿ ಉದ್ಘಾಟಿಸಿದರು. 
ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಪ್ರಚಾರಕ್ಕೆ ಅನುಕೂಲವಾಗಲೆಂದು ಬಿಜೆಪಿ ಕಾರ್ಯಾಲಯವನ್ನು ಪ್ರಾರಂಭಿಸಲಾಗುತ್ತಿದ್ದು, ಪ್ರತಿಯೊಬ್ಬ ಕಾರ್ಯಕರ್ತನು ಪ್ರಮಾಣಿಕವಾಗಿ ಬಿಜೆಪಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು. 
ಈ ಸಂದರ್ಭದಲ್ಲಿ ಧರೆಪ್ಪ ಉಳ್ಳಾಗಡ್ಡಿ, ಸಿದ್ದನಗೌಡ ಪಾಟೀಲ, ಬಸವರಾಜ ತೆಗ್ಗಿ, ಸುರೇಶ ಚಿಂಡಕ, ಮುರಳಿ ಕಾಬರಾ, ಪ್ರಭಾಕರ ಮೊಳೇದ, ಶಿವಾನಂದ ಬುದ್ನಿ, ಗಟ್ಟು ಮಾಲಪಾಣಿ, ಶ್ರೀಶೈಲ ಯಾದವಾಡ, ಶಿವಾನಂದ ಕಾಗಿ, ಈಶ್ವರ ಪಾಟೀಲ, ವರ್ಧಮಾನ ಕೋರಿ, ಅಶೋಕ ರಾವಳ, ಬೀಮಶಿ ಪಾಟೀಲ, ಗೌರಿ ಮಿಳ್ಳಿ, ರತ್ನಾ ಕೊಳಕಿ, ದುರ್ಗವ್ವ ಹರಿಜನ, ವಿದ್ಯಾ ಧಬಾಡಿ, ಜಯಶ್ರೀ ಬಾಗೇವಾಡಿ, ಆನಂದ ಬಾಡಗಂಡಿ,ಶ್ರೀಶೈಲ ಗಸ್ತಿ, ಸದಾಶಿವ ಪರೀಟ, ಶ್ರೀಶೈಲ ಬೀಳಗಿ, ಶಂಕರ ಅಂಗಡಿ, ಗೋವಿಂದ ಡಾಗಾ, ಬಾಳಯ್ಯ ಪೂಜಾರಿ, ಚಿದಾನಂದ ಹೊರಟ್ಟಿ, ಲಿಂಗರಾಜ ನಾಯಕ, ಸದಾಶಿವ ದೆಸಟ್ಟಿ, ಪ್ರವೀಣ ಧಬಾಡಿ, ಮಲ್ಲು ಬೀಳಗಿ, ಜಯವಂತ ಹಳ್ಯಾಳ, ಶ್ರೀಧರ ಸುಣಧೋಳಿಮಠ, ರವಿ ದೇವಾಡಿಗ ಸೇರಿದಂತೆ ಅನೇಕರು ಇದ್ದರು.