ನಾಡಗೌಡ, ಬೆಳಗಲಿ ಸ್ವಾಭಿಮಾನಿ ರ‍್ಯಾಲಿಯಲ್ಲಿ ಭಾರಿ ಜನಸ್ತೋಮ
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಪಕ್ಷದಷ್ಟೇ ಪ್ರಬಲವಾಗಿ ಪಕ್ಷೇತರರು ಅಖಾಡಕ್ಕಿಳಿಯಲು ಸನ್ನದ್ಧರಾಗಿ ಸ್ವಾಭಿಮಾನದ ಕಹಳೆ ಮೊಳಗಿಸುವಲ್ಲಿ ಗುರುವಾರ ಕಾರಣವಾಯಿತು.
ಬನಹಟ್ಟಿಯ ದೇವರ(ಜೇಡರ) ದಾಸಿಮಯ್ಯನವರ ಸಮುದಾಯ ಭವನದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾದ ಡಾ.ಪದ್ಮಜೀತ ನಾಡಗೌಡ ಪಾಟೀಲ ಹಾಗು ಡಾ. ಎ.ಆರ್. ಬೆಳಗಲಿಯವರಿಂದ ಸುಮಾರು 3 ಕಿ.ಮೀನಷ್ಟು ಬೃಹತ್ರ‍್ಯಾಲಿ ನಡೆಯಿತು. ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾದ ಮೆರವಣಿಗೆಯು ಬನಹಟ್ಟಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶೀಲ್ದಾರ ಕಚೇರಿವರೆಗೆ ನಡೆಯಿತು.
 ಸುಮಾರು 8 ಸಾವಿರಕ್ಕೂ ಅಧಿಕ ಜನರು ಅದರಲ್ಲೂ ಮಹಿಳಾಮಣಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವದು ವಿಶೇಷವಾಗಿತ್ತುರ‍್ಯಾಲಿ ನಂತರ ಮಾತನಾಡಿದ ಡಾ. ಪದ್ಮಜೀತ ನಾಡಗೌಡ ಪಾಟೀಲ, ಕಾಂಗ್ರೆಸ್ ಪಕ್ಷ ಮಾಡಿದ ಅನ್ಯಾಯಕ್ಕೆ ಕ್ಷೇತ್ರದ ಮತದಾರರು ಒಕ್ಕೊರಲಿನಿಂದ ನಮ್ಮ ಧ್ವನಿಯಾಗಿ ಕಣಕ್ಕಿಳಿಯಲು ಒತ್ತಾಯಿಸುತ್ತಿದ್ದಾರೆ. 
ಇದೇ ಕಾರಣದಿಂದ ಚುನಾವಣಾ ಅಖಾಡಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಇಳಿಯುವದು ನಿಶ್ಚಿತವಾಗಿದ್ದು, ಕ್ಷೇತ್ರದ ಜನತೆ ಈ ಬಾರಿ ನನಗೆ ಆಶೀರ್ವದಿಸಲಿದ್ದಾರೆಂದರು.
 ಡಾ, ಎ.ಆರ್. ಬೆಳಗಲಿ ಮಾತನಾಡಿ, ಇಷ್ಟೊಂದು ಜನಸ್ತೋಮ ನಮ್ಮೊಂದಿಗೆ ಎಂಬುದು ನನಗೆ ತಿಳಿದಿರಲಿಲ್ಲ. ಇಂದು ನಡೆದ ಮೆರವಣಿಗೆ ಅಭೂತಪೂರ್ವವಾಗಿದ್ದು, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗು ಕಾಂಗ್ರೆಸ್ ಅಭ್ಯರ್ಥಿಗಳಿಗೆ ನಡುಕ ಹುಟ್ಟಿಸುವಲ್ಲಿ ಕಾರಣವಾಗಿದೆ ಎಂದರು.
ತಂಪು ಪಾನೀಯಕ್ಕೆ ಮೊರೆ
 ಬಿಸಿಲಿನ ತಾಪಕ್ಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನತೆ ತಂಪು ಪಾನೀಯಕ್ಕೆ ಮೊರೆ ಹೋಗುವಲ್ಲಿ ಕಾರಣವಾಗಿ, ಅಲ್ಲಲ್ಲಿ ಮಜ್ಜಿಗೆ ಹಾಗು ಶರಬತ್ ಪಾನೀಯ ವ್ಯವಸ್ಥೆ ಮಾಡಲಾಗಿತ್ತು.