ಕಣದಿಂದ ಹಿಂದೆ ಸರಿದ ಶಿವಶಂಕರ ಶ್ರೀ
 ರಾಜ್ಯ ರಾಜಕಾರಣದಲ್ಲಿ ವಿಶೇಷ ಸದ್ದು ಮಾಡಿದ್ದ ಹಳೇ ಹುಬ್ಬಳ್ಳಿಯ ವೀರ ಭೀಕ್ಷಾವ್ರತಿ ಮಠದ ಪೀಠಾಧ್ಯಕ್ಷ ಶಿವಶಂಕರ ಶ್ರೀಗಳು ತೇರದಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದನ್ನು ಹಿಂಪಡೆದು ಕಣದಿದ ಹಿಂದೆ ಸರಿಯುವಲ್ಲಿ ಕಾರಣವಾಯಿತು.
ನಾಮಪತ್ರ ಹಿಂಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನ್ಯಾಸಿ ಧರ್ಮ, ಗುರು, ಪೀಠ ಹಾಗು ಸಮಾಜದ ನಂತರ ರಾಜಕೀಯವಿದೆ. 
ಇದನ್ನು ಗಮನಿಸದೆ ಕುರುಹಿನಶೆಟ್ಟಿ ಹಾಗು ಹಟಗಾರ ಸಮುದಾಯಗಳ ಹಿರಿಯರ, ಹಿಂದುಳಿದ ವರ್ಗ, ದೀನ ದಲಿತರ ಒತ್ತಡಕ್ಕೆ ಹಾಗು ನೇಕಾರರಿಗೆ ಆದ ಅನ್ಯಾಯ ಸಹಿಸಿಕೊಳ್ಳಲಾಗದೆ ಸ್ಪರ್ಧೆಗೆ ನಿಲ್ಲುವಂತೆ ಒತ್ತಾಯಿಸಿದ ಕಾರಣ ನಾಮಪತ್ರ ಸಲ್ಲಿಸಿದ್ದೆ, ಇದೀಗ ಕೊಲ್ಹಾಪುರ ಕಣೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ಆದೇಶದಂತೆ ಹಾಗು ವಯಕ್ತಿಕವಾಗಿ ನನಗೂ ಬೇಸರವಾದ ನಿಟ್ಟಿನಲ್ಲಿ ನಾಮಪತ್ರ ಹಿಂಪಡೆಯಲು ಕಾರಣವಾಗಿದೆ ಎಂದು ಸ್ಪಷ್ಟಪಡಿಸಿದರು.
ಸ್ಪರ್ಧೆ ವೇಳೆ ಕೆಲ ಹಿರಿಯರ ಹಾಗು ಮಠಾಧೀಶ ಪ್ರಭುಗಳ ಅನುಮತಿ ಪಡೆಯದಿರುವದು ತಪ್ಪಾಗಿದೆ. 

ಒಟ್ಟಾರೆ ರಾಜಕೀಯ ಕ್ಷೇತ್ರ ನನಗಿಷ್ಟವಿಲ್ಲವೆಂದ ಶ್ರೀಗಳು, ಭಕ್ತರು ಹಾಗು ನನಗೆ ಬೆಂಬಲಿಸುವ ಎಲ್ಲ ಸಮಾಜಗಳ ಹಿರಿಯರಿಗೆ ತಪ್ಪು ಸಂದೇಶ ಹೋಗಬಾರದು.
 ತಮಗೆ ಆಯಾ ಪಕ್ಷ ಹಾಗು ಪಕ್ಷೇತರ ಮಾರ್ಗಗಳಂತೆ ರಾಜಕೀಯ ಮುನ್ನಡೆಸಲು ಸೂಚಿಸಿದ್ದೇನೆಂದರು.