ಇಂದು ಹಿಡಕಲ್ಲ ಹೆಸ್ಕಾಂ ಕಚೇರಿಗೆ ಗ್ರಾಮಸ್ಥರಿಂದ ಮುತ್ತಿಗೆ;
ಮುಗಳಖೋಡ: ಸಮೀಪದ ಹಿಡಕಲ್ಲ ಗ್ರಾಮದಲ್ಲಿ 110 ಕೆ.ವಿ ಹೆಸ್ಕಾಂ ಕಚೇರಿಗೆ ಇಂದು ಮಂಗಳವಾರ ದಿನಾಂಕ: 23 ಮುಂಜಾನೆ 10 ಗಂಟೆಗೆ ವಿದ್ಯುತ್ ಪೂರೈಕೆಯ ನಿಮಿತ್ಯ ಮುತ್ತಿಗೆ ಹಾಕಲಿದ್ದಾರೆ.
ರೈತರು ಕಳೆದ ಮೂರು ನಾಲ್ಕು ದಿನಗಳಿಂದ ಗ್ರಾಮದಲ್ಲಿ ರಾತ್ರಿ ವೇಳೆ ವಿದ್ಯುತ್ ಪೂರೈಕೆ ಸಮರ್ಪಕವಾಗಿ ಆಗದ ಕಾರಣ ಗ್ರಾಮದ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.
ಇದರಿಂದ ವಿದ್ಯಾರ್ಥಿಗಳಿಗೆ ಓದಲು, ಬರೆಯಲು ಹಾಗೂ ರೈತರಿಗೆ ತುಂಬಾ ಅನಾನುಕೂಲ ಉಂಟಾಗುತ್ತಿರುವುದರಿಂದ ಇಂದು ಮುಂಜಾನೆ 10:00 ಗಂಟೆಗೆ ಗ್ರಾಮದ ಯುವಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಸೇರಿಕೊಂಡು ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹಿಡಕಲ್ಲ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
====================

Social Plugin