ಮದ್ದಾನೆಗಳ ಕಾಳಗ ವೀಕ್ಷಿಸಿದ-ಲಕ್ಷಾಂತರ ಜನಸ್ಥೋಮ
ಅಂತರಾಷ್ಟ್ರ ಮಟ್ಟದ ಜಂಗೀ ನಿಕಾಲಿ ಕುಸ್ತಿಯಲ್ಲಿ ದಿಲ್ಲಿಯ ಪೈ.ಸತ್ತೇಂದ್ರ ಮುಕ್ರೀಯಾ ವಿಜಯಶಾಲಿ 
ತೇರದಾಳ : ಪಟ್ಟಣದ ಕ್ಷೇತ್ರಾಧಿಪತಿ ಶ್ರೀ ಅಲ್ಲಮಪ್ರಭು ದೇವರ ಜಾತ್ರೆಯ ಅಂಗವಾಗಿ ಮಂಗಳವಾರ ಶ್ರೀ ಅಲ್ಲಮಪ್ರಭು ದೇವರ ತಾಲೀಮ ಕಮೀಟಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ಲಕ್ಷಾಂತರ ಜನರ ಮೈ ಮನ ಪುಳಕಿತ ಗೊಳ್ಳುವಂತೆ ಮಾಡಿತು. ಈ ಜಂಗೀ ನಿಕಾಲಿ ಕುಸ್ತಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ದಿಲ್ಲಿ ರಾಜ್ಯಗಳ ಹಾಗೂ ಇರಾನ್ ದೇಶದ ಖ್ಯಾತ ಕುಸ್ತಿ ಮಲ್ಲರು ಭಾಗವಹಿಸಿ ತಮ್ಮ ಕೈಚಳಕ ತೋರಿ ಕುಸ್ತಿಪ್ರೇಮಿಗಳಿಗೆ ಖುಷಿ ಕೊಟ್ಟರು. ಬಿಡಿ ಕುಸ್ತಿಗಳು ಕುಸ್ತಿ ಪ್ರೇಮಿಗಳಲ್ಲಿ ನಿರಾಸೆಯನ್ನು ಮಾಡಿತು.
 ಲಕ್ಷಾಂತರ ಕುಸ್ತಿಪ್ರೇಮಿಗಳ ಸಂಭ್ರಮದ ನಡುವೆ ನಡೆದ ಕುಸ್ತಿಗಳು ಮದ್ದಾನೆ ಕಾಳಗದಂತೆ ಗೋಚರಿಸಿದ್ದು ನಿಜ! ಮದ್ಯಾನ್ಹ ಆರಂಭಗೊಂಡ ಕುಸ್ತಿ ರಾತ್ರಿ 9 ಗಂಟೆವರೆಗೂ ನಡೆದವು. ದಿಲ್ಲಿ ಏರ್ ಫೋರ್ಸ್‍ನ ಪೈ.ಸತ್ತೇಂದ್ರ ಮುಕ್ರೀಯಾ ಹಾಗೂ ಇರಾನ್ ದೇಶದ ಪೈ.ಸೇನಾ ಮೈದಾನಕ್ಕೆ ಇಳಿಯುತ್ತಿದ್ದಂತೆ ಜನಸ್ಥೋಮದ ಕರತಾಡನ ಆರಂಭವಾಯಿತು. ಈ ಕುಸ್ತಿ ಸಂದರ್ಭದಲ್ಲಿ ಕುಸ್ತಿ ಪ್ರೇಮಿಗಳ ತವಕ, ಹರ್ಷೋದ್ಗಾರ ಎಲ್ಲೆ ಮೀರಿತ್ತು. ಎಲ್ಲರ ಚಿತ್ತ ಇವರಿಬ್ಬರ ಮೇಲೆ ನೆಟ್ಟು, ಸೆಣಸುತ್ತಿರುವ ಆ ಕುಸ್ತಿಪಟುಗಳಿಗೆ ಪ್ರೋತ್ಸಾಹಿಸಲು ಆಗಾಗ ಸಿಳ್ಳೆ, ಚಪ್ಪಾಳೆ, ಘೋಷಣೆಗಳು ಮುಗಿಲು ಮುಟ್ಟಿದಂತೆ ಭಾಸವಾಯಿತು. ಈ ಜೋಡಿ ಸುಮಾರು ಒಂದು ಗಂಟೆಗಳ ಕಾಲ ಮೈದಾನದಲ್ಲಿ ಸೆನಸಾಡಿ ಕೊನೆಗೆ ದಿಲ್ಲಿ ಪೈ.ಸತ್ತೇಂದ್ರ ಮುಕ್ರೀಯಾ ಇರಾನ್ ದೇಶದ ಪೈ.ಸೇನಾನ್ನು ಚಿತ್ತ ಮಾಡಿದಾಗ ಪ್ರೇಕ್ಷಕರಲ್ಲಿ ಅಸಮಾಧಾನ ಉಂಟುಮಾಡಿತು. ಇವರಿಬ್ಬರ ಆಟದ ಫಲಿತಾಂಶವು ಪ್ರೇಕ್ಷರಲ್ಲಿ ಗೊಂದಲವನ್ನುಂಟು ಮಾಡಿತು. ದಿಲ್ಲಿ ಪೈ.ಸತ್ತೇಂದ್ರ ಮುಕ್ರೀಯಾಗೆ ಕಮೀಟಿಯವರು ಕೊಡಮಾಡಿದ ಬಹುಮಾನಗಳನ್ನು ಹಾಗೂ ಬೆಳ್ಳಿಯ ಗದೆಯನ್ನು ಪಡೆದುಕೊಂಡನು. ಬಹಳಷ್ಟು ನಿರೀಕ್ಷೆಯಿಟ್ಟಿದ್ದ ಪೈ.ಕಾರ್ತಿಕ್ ಕಾಟೆ ಹಾಗೂ ಪೈ.ವಿಷ್ಣುಕೋಷೆ ಫಲಿತಾಂಶವು ಬಿಡಿ ಕುಸ್ತಿಗಳಾದಾಗ ಪ್ರೇಕ್ಷಕರಲ್ಲಿ ನಿರಾಸೆಯುಂಟು ಮಾಡಿತು.
ಕುಸ್ತಿಯಲ್ಲಿ ವಿಜಯಶಾಲಿಯಾದ ಪ್ರಮುಖ ಪೈಲ್ವಾನರು : ಸಾಂವಾಗಾಂವದ ಪೈ.ಶಿವಯ್ಯ ಕಂಕಣವಾಡಿ, ಬೇಳಗಾವಿಯ ಪೈ.ಅಪ್ಪಾಶಿ ಇಂಗಳಗಿ, ಕೋಲ್ಹಾಪೂರದ ಪೈ.ಸಂಜು ಇಂಗಳಗಿ, ಇಂಚಲಕರಂಜಿಯ ಪೈ.ಪೈ.ಗಣೇಶ ಡೇಳೇಕರ, ದಾವಣಗೇರಿಯ ಪೈ.ಬಸವರಾಜ ಯಲ್ಲಟ್ಟಿ, ಕೋಲ್ಹಾಪೂರದ ಪೈ. ಸೋನಬಾಳು ಲವಟೆ, ತೇರದಾಳದ ಪೈ. ಸಿದ್ಧಾರ್ಥ ತೇರದಾಳ, ಕೋಲ್ಹಾಪೂರದ ಪೈ.ನಾನಾ ಪವಾರ, ಹಾರೂಗೇರಿಯ ಪೈ.ಸಂತೋಷ ಹಾರುಗೇರಿ, ಹಾರುಗೇರಿಯ ಪೈ. ಬಸು ಜಗದಾಳ ಸೇರಿದಂತೆ 20ಕ್ಕೂ ಹೆಚ್ಚು ಕುಸ್ತಿಪಟುಗಳು ವಿಜಯಶಾಲಿಯಾಗಿ ಬಹುಮಾನವನ್ನು ಪಡೆದುಕೊಂಡರು. ಬಿಡಿಕುಸ್ತಿಗಳಾಗಿ ಕೋಲ್ಹಾಪೂರದ ರಾಮಚಂದ್ರ ಡುಮಕನಾಳ, ಕೋಲ್ಹಾಪೂರದ ಪೈ. ಪ್ರಕಾಶ ಇಂಗಳಗಿ, ಕೋಲ್ಹಾಪೂರದ ಪೈ.ಕಾಳಿಚರನ ಸೋಲಕರ, ಅಥಣಿಯ ಪೈ. ಮಹೇಶ ಅಥಣಿ, ಹನಗಂಡಿಯ ಪೈ. ಗಜಾನನ ಹನಗಂಡಿ, ಸಾಂಗಲಿಯ ಪೈ. ಶರದ ಪವಾರ, ಚಿಂಚಲಿಯ ಪೈ. ಶ್ರೀಶೈಲ ಪಾಟೀಲ, ಶಾಹುಪುರಿಯ ಪೈ.ಅನೀಶ ಗೋಪ ಸೇರಿದಂತೆ ಇನ್ನು ಅನೇಕ ಕುಸ್ತಿ ಪಟುಗಳು ಬಿಡಿ ಕುಸ್ತಿಗಳಾಗಿ ಬಹುಮಾನವನ್ನು ಪಡೆದರು. 
  ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಕಲ್ಲಪ್ಪ ಶಿರೋಳ, ಸಂಜು ಹಾರುಗೇರಿ, ರಮೇಶ ಮುಕರಿ, ಹನಮಂತ ಪುರಾಣಿಕ, ಬಸಪ್ಪ ಮುಕರಿ, ಜಿನ್ನಪ್ಪ ಸವದತ್ತಿ, ನಿಂಗಪ್ಪ ಕಂಟಿಕಾರ ನಿರ್ಣಾಯಕರಾಗಿದ್ದರು.
   ಸ್ಥಳೀಯ ಹಿರೇಮಠದ ಬಸವರಾಜ ಹಿರೇಮಠ, ವಿರಕ್ತಮಠದ ಶಿವುಕುಮಾರ ದೇವರು, ತೇರದಾಳ ಮತಕ್ಷೇತ್ರ ಶಾಸಕ ಸಿದ್ದು ಸವದಿ, ಜೆಡಿಎಸ್ ಧುರೀಣರು ಬಸವರಾಜ ಕೊಣ್ಣೂರ, ವಿಜಯಮಹಾಂತ ನಾಡಗೌಡ, ಪ್ರವೀಣ ನಾಡಗೌಡ, ಶ್ರೀಶೈಲ ದಳವಾಯಿ, ಡಾ. ಎಮ್.ಎಸ್.ದಾನಿಗೊಂಡ, ಅಂಬಾದಾಸ್ ಕಾಮೂರ್ತಿ, ಡಾ. ಪದ್ಮಜೀತ ನಾಡಗೌಡ ಪಾಟೀಲ, ಡಾ.ಎ.ಆರ್.ಬೆಳಗಲಿ, ರಂಗನಗೌಡ ಪಾಟೀಲ, ಸಿದ್ದು ಕೊಣ್ಣೂರ, ಸ್ಥಳಿಯ ಪುರಸಭೆಯ ಮುಖ್ಯಾಧಿಕಾರಿ ವಿಜಯಲಕ್ಷ್ಮಿ, ಶ್ರೀ ಅಲ್ಲಮಪ್ರಭು ದೇವರ ತಾಲೀಮ ಕಮೀಟಿ ಅಧ್ಯಕ್ಷರು ಪದಾಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ತಾಲೂಕಾ ಹೋರಾಟ ಸಮೀತಿಯ ಅಧ್ಯಕ್ಷ ಬುಜಬಲ್ಲಿ ಕೆಂಗಾಲಿ ಸೇರಿದಂತೆ ಪಟ್ಟಣದ ಧುರೀಣರು, ಜನ ಪ್ರತಿನಿಧಿಗಳು ಹಾಗೂ ಪುರಸಭೆಯ ಸರ್ವ ಸದಸ್ಯರು, ಮುಖಂಡರು, ಭಾಗವಹಿಸಿದ್ದರು.
 ಪ್ರಮುಖ ಪೈಲ್ವಾನರಿಗೆ ಕಮೀಟಿಯವರು ನಗದು ಹಣ ಹಾಗೂ ಸನ್ಮಾನ ನೀಡಿ ಗೌರವಿಸಿದರು. ಉಳಿದಂತೆ ಸಮೀರವಾಡಿಯ ಗೋದಾವರಿ ಶುಗರ್ಸ್‍ ನವರು, ಸಿದ್ದಾಪುರದ ಶ್ರೀಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ, ನಿರಾಣಿ ಶುಗರ್ಸ್ ಮುಧೋಳ, ಸ್ಥಳೀಯ ಸಾವರಿನ್ ಶಗರ್ಸ್, ವಿವಿಧ ಸಂಘ ಸಂಸ್ಥೆಗಳು ಬಹುಮಾನ ಪ್ರೋತ್ಸಾಹಧನ, ಸಹಾಯ ಸಹಕಾರ ನೀಡಿದರು. ಎಲ್ಲ ಫೈಲ್ವಾನರಿಗೆ ಗೌರವಧನ ನೀಡಿ ಕುಸ್ತಿ ಕಮೀಟಿಯವರು ಪ್ರೋತ್ಸಾಹಿಸಿದರು. ರಾಜ್ಯ ಹೊರರಾಜ್ಯಗಳಿಂದ ಬಂದ ಕುಸ್ತಿಪಟುಗಳು ಅಷ್ಟೇ ಖುಷಿಯಿಂದ ಮರಳಿದರು!!
    ಸ್ಥಳೀಯ ಪಿಎಸ್‍ಐ ರವಿ ಪವಾರ ಹಾಗೂ ಮಹಾಲಿಂಗಪೂರದ ಪಿಎಸ್‍ಐ ವಿಜಯ ಕಾಂಬಳೆ, ಬನಹಟ್ಟಿ ಪಿಎಸ್‍ಐ ರಾಕೇಶ ಬಗಲಿ ಹಾಗೂ ಸಿಬ್ಬಂದಿ ಶಾಂತಿ ಸುವ್ಯವಸ್ಥೆಗೆ ಕ್ರಮಕೈಗೊಂಡಿದ್ದರು.