ಮುಗಳಖೋಡ: ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಸಲುವಾಗಿ ಧರೆಗಿಳಿದು ಬಂದ ಕೃಷ್ಣ ಹಲವಾರು ರಾಕ್ಷಸರನ್ನು ಸಂಹರಿಸಿದ್ದಾನೆ. ಕೃಷ್ಣನಿಗೆ ಹಲವಾರು ಹೆಸರುಗಳ ಜೊತೆಗೆ ತಾನು ವಧಿಸಿದ ರಾಕ್ಷಸರ ಹೆಸರನ್ನು ಬಳಸಿ ಕೃಷ್ಣನಿಗೆ ಕರೆಯಲಾಗುತ್ತದೆ. ಕೃಷ್ಣನ ಅವತಾರದ ಬಗ್ಗೆ ಹಾಗೂ ಲೀಲೆಗಳ ಬಗ್ಗೆ ನಾವು ಹೆಚ್ಚು ಹೇಳುವ ಅವಶ್ಯಕತೆ ಇಲ್ಲ ಎಲ್ಲರಿಗೂ ತಿಳಿದಿರುವ ಹಾಗೆ ಕಷ್ಟ ಬಂದಾಗ 'ಕೃಷ್ಣ ಕೃಷ್ಣ ಹರೆ ಕೃಷ್ಣ ರಾಮ ರಾಮ ಹರೆ ರಾಮ' ಎಂದು ಶ್ರೀ ಕೃಷ್ಣನನ್ನು ನೆನೆದರೆ ಬಂದ ಕಷ್ಟಗಳು ಮಾಯವಾಗುತ್ತವೆ ಇದು ನನ್ನ ವೈಯಕ್ತಿಕ ಅನುಭವ ಕೂಡಾ ಹೌದು ಎಲ್ಲರೂ ಕೃಷ್ಣನನ್ನು ಭಕ್ತಿಯಿಂದ ಪೂಜಿಸಿ ನೆನೆದರೆ ಜೀವನ ಪಾವನ ವಾಗುವದೆಂದು ಮಾಜಿ ಜಿ.ಪಂ ಸದಸ್ಯ ಡಾ. ಸಿ.ಬಿ. ಕುಲಿಗೋಡ ಹೇಳಿದರು.
ಅವರು ಮುಗಳಖೋಡ ಪಟ್ಟಣದ ಚ.ವಿ.ವ ಸಂಘದ ರೈನಬೋ ಸೆಂಟ್ರಲ್ ಇಂಗ್ಲಿಷ್ ಮಾದ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದ ಅಧ್ಯಕ್ಷಸ್ಥಾನ ವಹಿಸಿ ಮಾತನಾಡಿದರು.ನಂತರ ರೈನಬೋ ಶಾಲೆಯ ಮುಖ್ಯೋಪಾಧ್ಯಾಯ. ಎಸ್.ಬಿ.ಬೋಬ್ಬೂರ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯಕ್ರಮದಲ್ಲಿ ಎಂ.ಕೆ. ಬಿಳಗಿ ಸೇರಿದಂತ್ತೆ ಬಂದ ಅತಿಥಿಗಳು ಕೃಷ್ಣನ ಪವಾಡ ಮತ್ತು ಲಿಲೆಗಳನ್ನು ಕುರಿತು ಹಾಡಿ ಕೊಂಡಾಡಿದರು.
ರೈನಬೋ ಶಾಲೆಯ ಎಲ್ಲ ಮಕ್ಕಳು ಶ್ರೀ ಕೃಷ್ಣನ ಮತ್ತು ರಾಧೆಯ ವೇಷ ಹಾಕಿ ಅವರಂತೆ ಬೆಣ್ಣೆ ಕದಿಯುವುದು, ಕೃಷ್ಣನಂತೆ ತರಲೆ ಮಾಡುವುದು, ಮೋಸರಿನ ಗಡಿಗೆ ಒಡೆಯುವುದು, ಕಥೆಗಳನ್ನು ಹೇಳುತ್ತಾ ಕೃಷ್ಣನ ಗೀತೆಗಳಿಗೆ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಆದಪ್ಪಗೋಳ, ಮಹಾವೀರ ಕುರಾಡೆ, ಎಂ.ಕೆ.ಬೀಳಗಿ, ಪ್ರಾಚಾರ್ಯ ಪಿ.ಸಿ. ಕಂಬಾರ, ಎಸ್.ಎಸ್ ಮಧಾಳೆ, ರವಿ ಹಳ್ಳೂರ, ಎಸ್.ಎಂ. ಕೊಪ್ಪದ ಹಾಗೂ ರೈನಬೋ ಸೆಂಟ್ರಲ್ ಶಾಲೆಯ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ಮುದ್ದು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Social Plugin