ರಬಕವಿ-ಬನಹಟ್ಟಿ ತಾಲೂಕಿನ ಅರಣ್ಯ ಪ್ರದೇಶದ ಪರಿಸ್ಥಿತಿ ಅವಲೋಕಿಸಿದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ನೇತೃತ್ವದ ತಂಡ.

ಅರಣ್ಯ ಭೂಮಿ ಮೇಲೆ ಸರ್ಕಾರದ ದುರ್ಬೀನು
ರಬಕವಿ-ಬನಹಟ್ಟಿ,ಆ19: ರಬಕವಿ-ಬನಹಟ್ಟಿ ಹಾಗು ಜಮಖಂಡಿ ತಾಲೂಕಿನಾದ್ಯಂತ ಅರಣ್ಯ ಪ್ರದೇಶದ ಮೇಲೆ ಜಿಲ್ಲಾಡಳಿತದ ನೆರಳು ಬಿದ್ದ ಹಿನ್ನಲೆ ಶುಕ್ರವಾರ ಏಕಾಏಕಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ನೇತೃತ್ವದ ತಂಡ ಭೆಟ್ಟಿ ನೀಡಿ ಉಭಯ ತಾಲೂಕಿನಾದ್ಯಂತ ಡಿ-ಫಾರೆಸ್ಟ್, ಒತ್ತುವರಿ ಹಾಗು ಸದ್ಯದ ಪರಿಸ್ಥಿತಿಯಲ್ಲಿರುವ ಅರಣ್ಯ ಜಾಗೆ ಕುರಿತಾದ ಸಮಗ್ರ ಮಾಹಿತಿ ಪಡೆಯುವಲ್ಲಿ ಕಾರಣವಾಯಿತು.
 ನಿನ್ನೆ ಗುರುವಾರದಂದು ನಗರಸಭೆ, ಕಂದಾಯ ಹಾಗು ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಎರಡು ಎಕರೆಯಷ್ಟು ಭೂಮಿಯಲ್ಲಿ ಅನಧಿಕೃತ ಕಾರ್ಯಗಳನ್ನು ತೆರವುಗೊಳಿಸುವ ಮೂಲಕ ಎಲ್ಲ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿತ್ತು. 
 ಶುಕ್ರವಾರ ದಿಢೀರ್ ಆಗಮಿಸಿದ ಜಿಲ್ಲಾಧಿಕಾರಿಯವರು ಸಾವಿರಾರು ಎಕರೆಯಷ್ಟು ಅರಣ್ಯ, ಒತ್ತುವರಿ ಹಾಗು ಡಿ-ಫಾರೆಸ್ಟ್ ಪ್ರದೇಶವನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುವಲ್ಲಿ ಕಾರಣವಾಯಿತು.
 ಅರಣ್ಯ ಒತ್ತುವರಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಈ ಭಾಗದಲ್ಲಿ ಬಹಳಷ್ಟು ಅರಣ್ಯ ಭೂಮಿ ಒತ್ತುವರಿಯಾಗಿದ್ದುನಿಜ. ಇದರ ಬಗ್ಗೆ ಸಮಗ್ರ ಪರಿಶೀಲನೆ ಮೂಲಕ ಒಟ್ಟಾರೆ ಅರಣ್ಯ ಇಲಾಖೆಯ ಪ್ರಸಕ್ತ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ಮಾಹಿತಿ ಒದಗಿಸಿದ ನಂತರ ಸರ್ಕಾರ ಮಟ್ಟದಲ್ಲಿ ಇದರ ನಿರ್ಧಾರ ಸ್ಪಷ್ಟವಾಗಲಿದೆ ಎಂದರು.
 ಉಪವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೋಳ್ಳಿ, ತಹಶೀಲ್ದಾರ ಸಂಜಯ ಇಂಗಳೆ, ಪೌರಾಯುಕ್ತ ಅಶೋಕ ಗುಡಿಮನಿ, ಅರಣ್ಯಾಧಿಕಾರಿ ಕೆ.ಎಲ್. ಕಾಳಪ್ಪಗೋಳ ಸೇರಿದಂತೆ ಅನೇಕ ಅಧಿಕಾರಿಗಳ ತಂಡ ಹಾಜರಿತ್ತು.
 `ಸರ್ಕಾರಿ ಪ್ರದೇಶ ಒತ್ತುವರಿ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾದೀತು. ಅರಣ್ಯ ಪ್ರದೇಶದಲ್ಲಿ ಮನೆ ಸೇರಿದಂತೆ ಇತರೆ ಖಾಸಗಿ ಚಟುವಟಿಕೆಗಳನ್ನು ನಡೆಸಬಾರದು. ಅಕ್ರಮ ಚಟುವಟಿಕೆಗಳಲ್ಲಿ ಎಂಥವರೇಯಾಗಿರಲಿ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ’.----ಪಿ.ಸುನೀಲ್ ಕುಮಾರ, ಜಿಲ್ಲಾಧಿಕಾರಿ, ಬಾಗಲಕೋಟೆ.