ಮುಗಳಖೋಡ: ಪಟ್ಟಣದ ಚವಿವ ಸಂಘದ ಆವರಣದಲ್ಲಿರುವ ಶ್ರೀ ಸಾಯಿಬಾಬಾರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ 4ನೇ ಗುರುವಾರದಂದು ಬಾಬಾರ ಮೂರ್ತಿಗೆ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ವತಿಯಿಂದ ಅತೀ ವಿಜೃಂಭಣೆಯಿಂದ ಪೂಜೆ ನೇರವೆರಿಸಲಾಯಿತು.
ಪಟ್ಟಣದ ಪದವಿ ಮಹಾವಿದ್ಯಾಲಯದ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಸೇರಿಕೊಂಡು ಸಾಯಿಬಾಬಾ ಮೂರ್ತಿಗೆ ಅಭಿಷೇಕ, ಪುಷ್ಪಾರ್ಪಣೆ, ಮಂಗಳಾರತಿ ಮಾಡಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ವಿದ್ಯಾರ್ಥಿಗಳು ಸಾಯಿ ಮಂದಿರವನ್ನು ಹೂವಿನಿಂದ ಅಲಂಕಾರ ಮಾಡಿ ಬಂದ ಭಕ್ತಾದಿಗಳಿಗೆ ಸಿಹಿ ಪ್ರಸಾದ ಹಂಚಿ ಸಾಯಿಬಾಬಾರ ಕೃಪೆಗೆ ಪಾತ್ರರಾದರು. ಪ್ರೊ.ಸಂಗಮೇಶ ಹಿರೇಮಠ ಪೂಜೆಯನ್ನು ನೇರವೆರಿಸಿಕೊಟ್ಟರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಪಿ.ಸಿ.ಕಂಬಾರ, ಬಿ.ಎಂ.ಹಿಪ್ಪರಗಿ, ಎಂ.ಕೆ.ಬಿಳಗಿ, ಎಸ್.ಎಸ್ ಮಧಾಳೆ, ಆರ್.ಎಸ್.ಶೇಗುಣಸಿ, ಗುರು ಜಂಬಗಿ, ಪ್ರದೀಪ್ ನಾಯಿಕ, ಪಿ.ಬಿ.ಕೋರವಿ, ಡಾ.ವಿ.ಕೆ.ನಿಡೋಣಿ, ವಿವೇಕಾನಂದ ಹುಂಡರಗಿ, ಶ್ರೀಮತಿ ಶಿವಲೀಲಾ ಪಾರ್ವತಿ, ಸಂಗಣ್ಣ ತೇಲಿ, ಹುಸೇನ್ ಯಲಿಗಾರ ಸೇರಿದಂತೆ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು ಸಿಬ್ಬಂದಿಯವರು ಹಾಗೂ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Social Plugin