ತೇರದಾಳದ ಶ್ರೀಅಲ್ಲಮಪ್ರಭು ದೇವಸ್ಥಾನಕ್ಕೆ ನಿವೃತ್ತ ಪೋಲಿಸ್ ಮಹಾನಿರ್ದೇಶಕರಾದ ಶಂಕರ ಬಿದರಿ ಭೇಟಿ ನೀಡಿ ದರ್ಶನಾರ್ಶೀವಾದ ಪಡೆದರು.
ತೇರದಾಳ : ಪಟ್ಟಣದ ಆರಾಧ್ಯ ದೈವ ಶ್ರೀಅಲ್ಲಮಪ್ರಭು ದೇವರ ದೇವಸ್ಥಾನಕ್ಕೆ ನಿವೃತ್ತ ಪೋಲಿಸ್ ಮಹಾನಿರ್ದೇಶಕರಾದ ಶಂಕರ ಬಿದರಿ ಶ್ರಾವಣ ಮಾಸದ ಮೊದಲನೆಯ ಸೋಮವಾರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು.
ಅವರು ತಮ್ಮ ಮನೆದೇವರಾದ ಶ್ರೀಅಲ್ಲಮಪ್ರಭು ದೇವರ ದೇವಸ್ಥಾನಕ್ಕೆ ಬಾಲ್ಯದಲ್ಲಿ ತಪ್ಪದೇ ಶ್ರಾವಣ ಮಾಸದಲ್ಲಿ ದೇವಸ್ಥಾನಕ್ಕೆ ತಮ್ಮ ಮಾತೋಶ್ರೀಯವರ ಜೊತೆ ಬರುತ್ತಿದ್ದರು. ಅದನ್ನು ಮರೆಯದೇ ಈಗಲೂ ಶ್ರಾವಣ ಮಾಸದಲ್ಲಿ ತಮ್ಮ ಊರಿಗೆ ಬಂದಾಗ ದೇವಸ್ಥಾನಕ್ಕೆ ಬಂದು ಹೋಗುತ್ತಾರೆ. ಇಂದು ಸಹ ಬೆಳಗಿನ ಜಾವ ದೇವಸ್ಥಾನಕ್ಕೆ ಬಂದಾಗ ಅರ್ಚಕರಾದ ಗುಹೇಶ್ವರ ಪುರಾಣಿಕ ಅವರು ಶ್ಯಾಲು ಹೊದಿಸಿ ಸತ್ಕರಿಸಿ ಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿ ನಿರ್ಮಾಪಕರಾದ ಮಾಧವಾನಂದ ಶೇಗುಣಸಿ, ಮಲ್ಲಿಕಾರ್ಜುನ ಗಣಾಚಾರಿ, ಎಮ್.ಸಿ.ಕುಂಚಗನೂರು, ಮಹೇಶ ಕುಂಚಗನೂರ, ಹಾಗೂ ಪೋಲಿಸ್ ಸಿಬ್ಬಂದಿ ಎಮ್.ಆರ್.ಕೆಂಚನ್ನವರ ಸೇರಿದಂತೆ ಅರ್ಚಕರು ಹಾಗೂ ಇನ್ನಿತರರು ಇದ್ದರು.

Social Plugin