ನಟ ವಿನೋದ್ ಪ್ರಭಾಕರ್ ತಮ್ಮ ಟೈಗರ್ ಟಾಕೀಸ್ ಸಂಸ್ಥೆಯ ಮೂಲಕ ನಿರ್ಮಿಸಿರುವ ಮೊದಲ ಚಿತ್ರ "ಲಂಕಾಸುರ". ನಿಶಾ ವಿನೋದ್ ಪ್ರಭಾಕರ್ ಈ ಚಿತ್ರದ ನಿರ್ಮಾಪಕರು. ವಿನೋದ್ ಪ್ರಭಾಕರ್ ಅವರೆ ಈ ಚಿತ್ರದ ನಾಯಕನಾಗೂ ನಟಿಸಿದ್ದಾರೆ.
ಖ್ಯಾತ ಗೀತರಚನೆಕಾರ ಚೇತನ್ ಕುಮಾರ್ ಬರೆದಿರುವ
"ಅಣ್ಣ ಗನ್ ಹಿಡ್ದು ನಿಂತ ಅಂದ್ರೆ ಭಸ್ಮಾಸುರ.
ಲಂಕಾಸುರ ಲಂಕಾಸುರ " ಎಂಬ "ಲಂಕಾಸುರ" ಚಿತ್ರದ ಟೈಟಲ್ ಟ್ರ್ಯಾಕ್ ಇತ್ತೀಚೆಗೆ A2 music ಮೂಲಕ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಟೈಟಲ್ ಟ್ರ್ಯಾಕ್ ಈಗಾಗಲೇ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದ್ದು, ಅಭಿಮಾನಿಗಳ ಮನ ಗೆದ್ದಿದೆ. ಟೈಟಲ್ ಟ್ರ್ಯಾಕ್ ಗೆ ಅಪಾರ ಜನಮನ್ನಣೆ ದೊರಕುತ್ತಿರುವುದಕ್ಕೆ ವಿನೋದ್ ಪ್ರಭಾಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಕನ್ನಡ ಕಲಾಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Social Plugin