ತೇರದಾಳ ಪಟ್ಟಣದ ಡಾ.ಪದ್ಮಜೀತ ನಾಡಗೌಡ ಪ್ರತಿಷ್ಠಾನದಿಂದ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಖ್ಯಾತ ನೇತ್ರ ತಜ್ಞ ಡಾ.ಪದ್ಮಜೀತ ನಾಡಗೌಡ.
ತೇರದಾಳ ಪಟ್ಟಣದಲ್ಲಿ ಡಾ.ಪದ್ಮಜೀತ ನಾಡಗೌಡ ಪೌಂಡೇಶನ್ ವತಿಯಿಂದ ಉಚಿತ ನೇತ್ರ ತಪಾಸನಾ ಶಿಬಿರ 
ಬಡವರ ಪಾಲಿಗೆ ಆಶಾಕಿರಣವಾದ ಸಂಸ್ಥೆಯ ಸಮಾಜಮುಖಿ ಕಾರ್ಯಗಳು : ಒಟ್ಟು 7 ದಿನಗಳ ಉಚಿತ ತಪಾಸಣಾ ಶಿಬಿರ
ತೇರದಾಳ : ಜಗತ್ತಿನ ಎಲ್ಲ ದಾನಗಳಲ್ಲಿ ನೇತ್ರದಾನ ಸರ್ವಶ್ರೇಷ್ಠ, ನೇತ್ರತಜ್ಞನಾಗಿ ಸಾವಿರಾರು ಜನರಿಗೆ ದೃಷ್ಠಿ ಸೇವೆಯನ್ನು ನೀಡುವ ಸದಾವಕಾಶವನ್ನು ಕಲ್ಪಿಸಿದ ದೇವರಿಗೆ ಚಿರಋಣಿ, ದೇವರು ವರವಾಗಿ ನೀಡಿದ ನನ್ನ ವೃತ್ತಿ ಬದುಕಿನಲ್ಲಿ ಬಡಜನಿರಿಗೆ ಸಾಧ್ಯವಾದಷ್ಟು ಸೇವೆಯನ್ನು ನೀಡಲು ಸಂಕಲ್ಪಿಸಿದ್ದು ಈ ನಿಟ್ಟಿನಲ್ಲಿ ತೇರದಾಳ ಮತಕ್ಷೇತ್ರದಾದ್ಯಂತ ಕಡು ಬಡವರಿಗೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಿದ್ದು ಭಾಗವಾಗಿ ತೇರದಾಳ ಪಟ್ಟಣದಲ್ಲಿ ಒಟ್ಟು ಏಳು ದಿನಗಳ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದ್ದು ಸಾರ್ವಜನಿಕರು ಮುಕ್ತ ಮನಸ್ಸಿನಿಂದ ನಮ್ಮ ಸೇವೆಯನ್ನು ಸ್ವೀಕರಿಸಿ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
   ಪಟ್ಟಣದ ಬಸ್ ನಿಲ್ದಾಣ ಹತ್ತಿರವಿರುವ ಡಾ.ಪದ್ಮಜೀತ ನಾಡಗೌಡ ಪೌಂಡೇಶನ್ ಜನಸೇವಾ ಕೇಂದ್ರದಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಮತಕ್ಷೇತ್ರದಲ್ಲಿ ಸಾವಿರಾರು ನಿರ್ಗತಿಕ ಕಡು ಬಡವರು ದೃಷ್ಠಿ ದೋಷವಿದ್ದರೂ ಕೂಡ ಹಣಕಾಸಿನ ತೊಂದರೆಯಿಂದ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಅಸಮರ್ಥರಾಗಿದ್ದು ಜನಪ್ರತಿನಿಧಿಗಳು ತಮ್ಮ ವಾರ್ಡನಲ್ಲಿರುವ ಇಂತಹ ಕಡು ಬಡ ಕುಟುಂಬಗಳನ್ನು ಗುರುತಿಸಿ ಶಿಬಿರದಲ್ಲಿ ಚಿಕಿತ್ಸೆ ಪಡೆಯುವಂತೆ ಪ್ರೇರೇಪಿಸಬೇಕೆಂದು ತಿಳಿಸಿದ ಅವರು ಶಿಬಿರಾರ್ಥಿಗಳಿಂದ ಸಾಮಾನ್ಯ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಸೇರಿದಂತೆ ಯಾವುದೇ ರೀತಿಯ ಶುಲ್ಕವನ್ನು ಪಡೆಯುವುದಿಲ್ಲ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿದೆಯಂದು ತಿಳಿಸಿದರು.
ತೇರದಾಳ ಪಟ್ಟಣದಲ್ಲಿ ಒಟ್ಟು ಏಳು ಕ್ಯಾಂಪ್ : ತೇರದಾಳ ಪಟ್ಟಣದಲ್ಲಿ ವಾರ್ಡವಾರು ಒಟ್ಟು ಏಳು ದಿನಗಳ ಉಚಿತ ತಪಾಸಣಾ ಕ್ಯಾಂಪ್ ಗಳನ್ನು ಆಯೋಜಿಸಲಾಗಿದ್ದು ಫೆ. 12 ರಂದು ಕೆಎಚ್‍ಡಿಸಿ ಕಾಲನಿ ಹಾಗೂ ದೇವರಾಜ ನಗರದ 3,4,7 ನೇ ವಾರ್ಡಿನ ಜನರಿಗೆ ದೇವರಾಜ ನಗರದಲ್ಲಿರುವ ಅಡಿವೇಶ್ವರ ಮಹಾರಾಜರ ತುಂಗಳ ಮಠದಲ್ಲಿ, ಫೆ.19 ರಂದು ದೇವರಾಜ ನಗರದ 5,6,8,9 ನೇ ವಾರ್ಡ ಜನರಿಗೆ ಅಂಬೇಡ್ಕರ ಭವನ, ಫೆ. 26 ರಂದು ವಾರ್ಡ ನಂ 10,11 ಅಂಬೇಡ್ಕರ ಸರ್ಕಲ್,ವಾರ್ಡ ನಂ 12 ಹಳೇಪೇಟ ಗಲ್ಲಿ,ವಾರ್ಡ ನಂ: 13 ದಾಸರ ಮಡ್ಡಿ, ವಾರ್ಡ ನಂ: 15 ಸಮಗಾರ ಓಣಿ ಜನರಿಗೆ ಸಮಾಜ ಮಂದಿರ ದಾಸರ ಮಡ್ಡಿಯಲ್ಲಿ, ಮಾ, 5 ರಂದು ವಾರ್ಡ ನಂ: 14 ವಡ್ಡರ ಗಲ್ಲಿ,ವಾರ್ಡ ನಂ: 17 ಯಲ್ಲಮ್ಮನ ಗುಡಿ, ವಾರ್ಡ ನಂ: 18 ತಾಂಬೋಳಿ ಗಲ್ಲಿ,ವಾರ್ಡ ನಂ: 19 ಸಿದ್ದೇಶ್ವರ ಗಲ್ಲಿ ಜನರಿಗೆ ಬ್ರಹ್ಮಾನಂದ ಮಠದಲ್ಲಿ ಮಾ. 5 ರಂದು ವಾರ್ಡ ನಂ: 01 ಕುಂಬಾರ ಓಣಿ, ವಾರ್ಡ ನಂ:16 ಕಿಲ್ಲಾ ಭಾಗ,ವಾರ್ಡ ನಂ: 20 ಪ್ರಭುಧೇವರ ಗುಡಿ, ವಾರ್ಡ ನಂ: 21,22 ಕಲ್ಲಟ್ಟಿ ಗಲ್ಲಿ,ವಾರ್ಡ ನಂ: 23 ತಳವಾರ ಗಲ್ಲಿ ಜನರಿಗೆ ದೇಸಾರ ಬಾವಿ ಹತ್ತಿರ ತಳವಾರ ಓಣಿಯಲ್ಲಿ ಮಾ.26 ರಂದು 1,2,3 ಮತ್ತು 4 ನೇ ಕೆನಾಲ ವಸತಿ ಜನರಿಗೆ ಎ.2 ರಂದು ಕಲೂತಿ ನಗರದ ರಾಜಸಾಗರ ಅಯ್‍ಟಿಆಯ್ ತೇರದಾಳದಲ್ಲಿ ಉಳಿದ ಜನರಿಗೆ ಕೊನೆಯ ಅವಕಾಶವಾಗಿ ಕ್ಯಾಂಪ್‍ಗಳನ್ನು ಆಯೋಜಿಸಿದ್ದು ಸಾರ್ವಜನಿಕರು ವೇಳಾಪಟ್ಟಿಯಂತೆ ಮುಂಜಾನೆ 9 ರಿಂದ ಸಾಯಂಕಾಲ 6 ಗಂಟೆಯವರೆಗೆ ಚಿಕಿತ್ಸೆ ನೀಡಲಾಗುವುದೆಂದು ಹಾಗೂ ಶಸ್ತ್ರ ಚಿಕಿತ್ಸೆಗೆ ಉಚಿತ ಪ್ರಯಾಣ, ವಸತಿ ಹಾಗೂ ಊಟವನ್ನು ನೀಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಯವಾದಿ ಸಾಗರ ಚವಜ ಮಾತನಾಡಿ ಅಲ್ಲಮನಾಡಿನಲ್ಲಿ ಹಲವಾರು ನಿರ್ಗತಿಕರಿಗೆ ವರದಾನವಾಗಿರುವ ಡಾ.ಪದ್ಮಜೀತ ನಾಡಗೌಡ ಪ್ರತಿಷ್ಠಾನ ತನ್ನ ಬಹುಮುಖಿ ಸಾಮಾಜೀಕ ಕಾರ್ಯಗಳಿಂದ ಇಂದು ಮತಕ್ಷೇತ್ರದಾದ್ಯಂತ ಮನೆ ಮಾತಾಗಿದ್ದು, ಪ್ರತಿಷ್ಠಾನದ ಅಡಿಯಲ್ಲಿ ಕೇವಲ ಉಚಿತ ವೈದ್ಯಕೀಯ ಸೇವೆಯನ್ನು ಮಾತ್ರ ನೀಡದೇ ಪ್ರತಿಪಟ್ಟಣದಲ್ಲಿ ತನ್ನದೇಯಾದ ಜನಸೇವಾ ಕೇಂದ್ರಗಳನ್ನು ಪ್ರಾರಂಭಿಸಿ ಬಡಜನರಿಗೆ, ವಯೋವೃದ್ಧರಿಗೆ ಹಲವಾರು ಬಹುಮುಖಿ ಸೇವೆಗಳನ್ನು ನೀಡುತ್ತಿದ್ದು ಸಾರ್ವಜನಿಕರು ಇವುಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. 
    ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಲ್ಲಿನಾಥ ಬೋಳಗೊಂಡ, ನಿಲೇಶ ದೇಸಾಯಿ,ಸುರೇಶ ಕಬಾಡಗಿ, ಸಜೀತ ದಾನಿಗೊಂಡ, ಮಲ್ಲಪ್ಪ ನಾರಿಗೊಂಡ ಲಕ್ಷ್ಮಣ ಮಾಸ್ತಿ, ಗೌತಮ ರೋಡಕರ, ದಯಾನಂದ ಕಾಳೆ, ಪಿ.ಎಸ್ ಮಾಸ್ತಿ, ಮಾಶೂಂ ಇನಾಂದಾರ, ರಾಜೇಸಾಬ ನಗಾರ್ಜಿ, ಪ್ರಕಾಶ ನಾರವಗೋಳ, ಸಂಜು ಅಮ್ಮಣಗಿಮಠ ಸೇರಿದಂತೆ ಪ್ರಮುಖರು ಇದ್ದರು.