ಕೇವಲ ಘೋಷಣೆಯಾಗಿ ಮಾತ್ರ ಉಳಿದ ತೇರದಾಳ ತಾಲೂಕು, ಹಳ್ಳಿಗಳ ವಿಂಗಡಣೆಗೆ ಆಗ್ರಹತೇರದಾಳ ಪಟ್ಟಣವನ್ನು ತಾಲೂಕಾ ಕೇಂದ್ರವಾಗಿ ಘೋಷಿಸಿದ 4 ನೇ ವರ್ಷದ ಸಂಭ್ರಮ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿರುವ ತೇರದಾಳ ವಿರಕ್ತಮಠದ ಶಿವಕುಮಾರ ಶ್ರೀಗಳು.
ತೇರದಾಳ : ತೇರದಾಳ ತಾಲೂಕಾ ಕೇಂದ್ರವಾಗಿ ಘೋಷಣೆಯಾಗಿ 4 ವರ್ಷ ಕಳೆದರು ಇಂದಿನವರೆಗೆ ಪ್ರಕ್ರೀಯೇ ಪ್ರಾರಂಭವಾಗದಿರುವುದು ವಿಷಾದನೀಯ, ಜನಪ್ರತಿನಿಧಿಗಳು ಮನಸ್ಸುಮಾಡಿ ಕೂಡಲೇ ತಾಲೂಕಾ ರಚನೆಗೆ ಅಗತ್ಯವಿರುವ ಹಳ್ಳಿಗಳ ಜೋಡಣೆ, ತಾಲೂಕಾಡಳಿತ ಕೇಂದ್ರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತೇರದಾಳ ವಿರಕ್ತಮಠದ ಶಿವಕುಮಾರ ಶ್ರೀಗಳು ಸರ್ಕಾರಕ್ಕೆ ಆಗ್ರಹಿಸಿದರು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ತೇರದಾಳ ತಾಲೂಕಾ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ ತಾಲೂಕಾ ಘೋಷಣೆಯ 4 ನೇ ವರ್ಷದ ಸಂಭ್ರಮಾಚರಣೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪೂಜ್ಯರು ತೇರದಾಳ ತಾಲೂಕು ಘೋಷಣೆಯಾಗಿ ಇಂದಿಗೆ ನಾಲ್ಕು ವಸಂತಗಳನ್ನು ಪೂರೈಸಿರುವ ಸಂತಸದಲ್ಲಿ ಈ ದಿನವನ್ನು ತಾಲೂಕಿನ ಹುಟ್ಟುಹಬ್ಬವಾಗಿ ಆಚರಿಸುತ್ತಿರುವುದು ಒಂದೆಡೆಯಾದರೆ ತಾಲೂಕಾ ರಚನೆಗೆ ಅಗತ್ಯವಿರುವ ಹಳ್ಳಿಗಳ ಜೋಡಣೆ, ಕಾರ್ಯಾಲಯಗಳು ಸೇರಿದಂತೆ ಯಾವುದೇ ಕಾರ್ಯಗಳು ಕಾರ್ಯಾರಂಭವಾಗದೇ ನೂತನ ತೇರದಾಳ ತಾಲೂಕು ಕೇವಲ ಘೋಷಣೆಯಲ್ಲಿ ಮಾತ್ರ ಉಳಿದಿರುವುದು ವಿಷಾದನೀಯ, ಸರಕಾರ ಹಾಗೂ ಜನಪ್ರತಿನಿಧಿಗಳು ಕೂಡಲೇ ಮುತವರ್ಜಿ ವಹಿಸಿ ತಾಲೂಕಾ ರಚನಾ ಪ್ರಕ್ರೀಯೆಗಳನ್ನು ಪ್ರಾರಂಭಿಸಬೇಕು ಈ ನಿಟ್ಟಿನಲ್ಲಿ ಈಗಾಲೇ ಶಾಸಕರಾದ ಸಿದ್ದು ಸವದಿಯವರಲ್ಲಿ ನಿವೇದನೆಯನ್ನು ಸಲ್ಲಿಸಿದ್ದು, ಸೌಹಾರ್ಧತೆಗೆ ಹೆಸರುವಾಸಿಯಾದ ಅಲ್ಲಮನಾಡಿಗೆ ತನ್ನದೇಯಾದ ಪೂರ್ವ ಇತಿಹಾಸದ ಹಿನ್ನೆಲೆ ಇದ್ದು ವಿಳಂಭಕ್ಕೆ ಆಸ್ಪದ ಕೊಡದೇ ಕಾಲಮಿತಿಯಲ್ಲಿ ಪ್ರಕ್ರೀಯೆಗಳನ್ನು ಪೂರ್ಣಗೊಳಿಸುವಂತೆ ಕಿವಿಮಾತು ಹೇಳಿದರು.
ಈ ಸಂಧರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತೇರದಾಳ ತಾಲೂಕಾ ಹೋರಾಟ ಸಮಿತಿ ಅಧ್ಯಕ್ಷ ಭುಜಬಲಿ ಕೆಂಗಾಲಿ ರೈತ ಬಂದು ಜನಮೆಚ್ಚಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯರ ಕೃಪಕಟಾಕ್ಷೆಯಿಂದ ಐತಿಹಾಸಿಕ ಪರಂಪರೆಯುಳ್ಳ ನಮ್ಮ ತೇರದಾಳ ಪಟ್ಟಣ ತಾಲೂಕಾ ಕೇಂದ್ರವಾಗಿ ಘೋಷಿಸಿ ಇಂದಿಗೆ ನಾಲ್ಕು ವರ್ಷ ಪೂರೈಸಿದ ಸವಿನೆನಪಿಗಾಗಿ ಸಮಸ್ತ ನಾಗರಿಕರ ನೇತೃತ್ವದಲ್ಲಿ ಈ ಸಂಭ್ರಮಾಚರಣೆಯನ್ನು ಆಯೋಜಿಸಿದ್ದು, ಜನಪ್ರತಿನಿಧಿಗಳು ಪಕ್ಷಭೇದ ಮರೆತು ನಮ್ಮ ನಾಡಿಗೆ ಸೇರಬೇಕಾದ ನ್ಯಾಯಸಮ್ಮತ ಬೇಡಿಕೆಯನ್ನು ಪೂರೈಸಬೇಕೆಂದು ಆಗ್ರಹಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತೇರದಾಳ ತಾಲೂಕಾ ಹೋರಾಟ ಸಮಿತಿಯ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಮಾತನಾಡಿ ಪಟ್ಟಣವನ್ನು ತಾಲೂಕಾ ಕೇಂದ್ರವಾಗಿ ಮಾಡಬೇಕೆಂದು ನಮ್ಮ ಜನರ ದಶಕಗಳ ಬೇಡಿಕೆಯಾಗಿದ್ದು, ಈ ನಿಟ್ಟಿನಲ್ಲಿ ಹಿಂದೇಯೇ ಘೋಷನೆಯಾದ ನಮ್ಮ ತಾಲೂಕನ್ನು ಜನಪ್ರತಿನಿಧಿಗಳ ಷಡ್ಯಂತ್ರದಿಂದ ಕೈತಪ್ಪಿ ರಬಕವಿ-ಬನಹಟ್ಟಿಗೆ ಸ್ಥಳಾಂತರಗೊಂಡಿದ್ದು ಸಾಂಗ್ಲಿ ಸಂಸ್ಥಾನ ಕಾಲದಿಂದ ಹೋಬಳಿಯಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಪಟ್ಟಣವು ತಾಲೂಕಾ ಕೇಂದ್ರವಾಗಲು ಸಕಲ ಅರ್ಹತೆಗಳನ್ನು ಹೊಂದಿದ್ದು ಅಷ್ಟೇ ಅಲ್ಲದೇ ವಿಧಾನ ಸಭಾ ಕ್ಷೇತ್ರವನ್ನೂ ಕೂಡ ಒಳಗೊಂಡಿದ್ದು, ಈ ನಿಟ್ಟಿನಲ್ಲಿ ನಮ್ಮವರೇ ನಮ್ಮ ಬೆನ್ನಿಗೆ ಚೂರಿ ಇರಿದಾಗ ಆಪತ್ಭಾಂಧವರಾಗಿ ಆಗಮಿಸಿ ನಮ್ಮ ಬಹುದಿನಗಳ ಕನಸನ್ನು ಈಡೇರಿಸಿದ ರೈತ ಕಣ್ಮನಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ತಮ್ಮ ಸರಕಾರದ ಕಾಲಾವಧಿಯಲ್ಲಿ ತಾಲೂಕಾ ಕೇಂದ್ರವಾಗಿ ಘೋಷಿಸಿರುವುದೇ ಇಂದಿನ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಜೊತೆಯಲ್ಲಿ ಪಕ್ಷಾತೀತ, ಜ್ಯಾತ್ಯಾತೀತವಾಗಿ ನಮ್ಮವರು ಕೈಗೊಂಡ ಹೋರಾಟದ ಫಲಶೃತಿಯಾಗಿದೆಯಂದು ಸರ್ವರಿಗೂ ಕೃತಜ್ಞತೆಯನ್ನು ತಿಳಿಸಿದ ಅವರು ಈ ನಿಟ್ಟಿನಲ್ಲಿ ತಾಲೂಕಾ ಕೇಂದ್ರಕ್ಕೆ ಅವಶ್ಯವಾಗಿರುವ ಹಳ್ಳಿಗಳ ಜೋಡಣೆಯಾಗಬೇಕು, ಇಲ್ಲದಿದ್ದರೆ ತೇರದಾಳ ಜನತೆ ಮತ್ತೆ ಬೀದಿಗಿಳಿಯಬೇಕಾಗುತ್ತದೆಯಂದು ಎಚ್ಚರಿಸಿದ ಅವರು ಕೂಡಲೇ ಪ್ರಕ್ರೀಯೆಗಳನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿದರು.
ಬಸವರಾಜ ಹೊರಟ್ಟಿಯವರಿಗೆ ಮನವಿ: ಮಾನ್ಯ ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿಯವರಲ್ಲಿ ಈ ಕುರಿತು ಮನವಿಯನ್ನು ಸಲ್ಲಿಸಿದ್ದು ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರಕಾರದ ಗಮನಸೆಳೆಯುವುದಾಗಿ ಭರವಸೆ ನೀಡಿದ್ದಾರೆಯಂದು ಸಭೆಯಲ್ಲಿ ತಿಳಿಸಿದರು.
ಬಸವರಾಜ ಬಾಳಿಕಾಯಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಶಾಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಹಾಡಿದರು,ಸಭೆಯಲ್ಲಿ ತಾಲೂಕಾ ಹೋರಾಟ ವೇದಿಕೆ ವತಿಯಿಂದ ಶ್ರೀಗಳಿಗೆ ಸತ್ಕರಿಸಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಕಾಣಿಕೆಯನ್ನು ನೀಡಲಾಯಿತು.
ಸಮಾರಂಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಹನಮಂತ ರೋಡನ್ನವರ, ಕಲ್ಲಪ್ಪ ಕಬಾಡಗಿ, ಮಹಾಂತೇಶ ಖವಾಸಿ, ಅನ್ವರಸಾಬ ಸಂಗತ್ರಾಸ, ಉಸ್ಮಾನ ಥರಥರಿ, ಶಿವಪ್ಪ ಮಿರ್ಜಿ, ಯಾಸೀನ ಸಾತಬಚ್ಚೆ, ಅವಪ್ಪ ನೀಲನ್ನವರ, ದಸ್ತಗೀರ ಜಮಾದಾರ,ಶಶಿಕಾಂತ ವಲ್ಯಾಪೂರ, ರಿಯಾಜ ಮುಲ್ಲಾ, ರವಿ ಸಲಬನ್ನವರ, ಕರ್ನಾಟಕ ರಕ್ಷಣಾ ವೇದಿಕೆ ತೇರದಾಳ ಘಟಕದ ಉಪಾಧ್ಯಕ್ಷ ವಿಠ್ಠಲ ಸಿಂಗೆ, ಸದಸ್ಯರಾದ ರಾಜು ನಧಾಪ, ಹಬೀಬ ಅರತ್ತಾರ, ದಯಾನಂದ ಹೊಸಕೋಟಿ ಸೇರಿದಂತೆ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಾರ್ವಜನಿಕರು ಇದ್ದರು.
Social Plugin