ತೇರದಾಳ : ಸನ್ 2018-19 ನೇ ಹಂಗಾಮಿನಲ್ಲಿ ಪಟ್ಟಣದ ಸಾವರಿನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿ ಬಾಕಿ ಉಳಿದ ಹಣ ಪಾವತಿಗಾಗಿ ಜಾತಕ ಪಕ್ಷಿಯಂತೆ ಕಾಯ್ದು ಕುಳಿತ ರೈತರಿಗೆ ಕೊನೆಗೆ ಜನಪ್ರತಿನಿಧಿಗಳು ಹಾಗೂ ರೈತಪರ ಹೋರಾಟಗಾರರ ಹೋರಾಟದ ಫಲಶೃತಿಯಾಗಿ ಹಣ ಬಿಡುಗಡೆಗಾಗಿ ಬಾಕಿ ಉಳಿದ ರೈತರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಪಟ್ಟಿಯಲ್ಲಿರುವ ರೈತರು ಸಂದಾಯವಾಗಬೇಕಾದ ಮೊತ್ತದಲ್ಲಿ ವ್ಯತ್ಯಾಸವಾಗಿದ್ದಲ್ಲಿ ಪ್ರಕಟಣೆಯ ದಿನದಿಂದ 7 ದಿನಗಳೊಳಗಾಗಿ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆಯಂದು ಮಾನ್ಯ ತಹಶೀಲ್ದಾರ ರಬಕವಿ-ಬನಹಟ್ಟಿ ತಿಳಿಸಿರುತ್ತಾರೆ.
ಸನ್ 2018-19 ನೇ ಸಾಲಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ 1628 ರೈತರ ಒಟ್ಟು ಮೊತ್ತ 19,54,66,660 ಹಾಗೂ ಕಬ್ಬು ಕಟಾವು ಹಾಗೂ ಸಾಗಾಣಿ ಮಾಡಿದ 51,33,2016 ಮೊತ್ತ ಸೇರಿ ಒಟ್ಟು ಪಾವತಿಸಬೇಕಾದ 20,05,99,876 ಮೊತ್ತದ ಬಾಕಿ ರೈತರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು,ಸದರಿ ಪಟ್ಟಿಯನ್ನು ತಹಶೀಲ್ದಾರ ಕಾರ್ಯಾಲಯ,ವಿಶೇಷ ತಹಶೀಲ್ದಾರ ಕಛೇರಿ,ಕಾರ್ಖಾನೆಯ ನೋಟೀಸ್ ಫಲಕದಲ್ಲಿ ಅಂಟಿಸಿದ್ದು ಪಟ್ಟಿಯಲ್ಲಿ ತಮ್ಮ ಹೆಸರು, ಕಾರ್ಖಾನೆಗೆ ಪೂರೈಸಿದ ಕಬ್ಬಿನ ವಿವರ ಹಾಗೂ ಸಂದಾಯವಾಗಬೇಕಾದ ಮೊತ್ತವನ್ನು ನಮೂದಿಸಿದ್ದು ಸಂಬಂಧಿಸಿದ ರೈತರು ಪರಿಶೀಲಿಸಿ ಯಾವುದಾದರು ಆಕ್ಷೇಪಣೆಗಳಿದ್ದಲ್ಲಿ ಲಿಖಿತವಾಗಿ ಸಂಬಂಧಿಸಿದ ಪುರಾವೆಗಳನ್ನು ಲಗತ್ತಿಸಿ ಪೆಬ್ರುವರಿ 24 ರ ಸಂಜೆ 5:30 ಗಂಟೆಯೊಳಗಾಗಿ ತಹಶೀಲ್ದಾರರು ರಬಕವಿ ಬನಹಟ್ಟಿ ಇವರಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದ್ದು ತದನಂತರದಲ್ಲಿ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಲಾಗುವುದಿಲ್ಲವೆಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Social Plugin