27 ರಂದು ಜೈನ ಪ್ರತಿಭಾ ಪುರಸ್ಕಾರ 
ತೇರದಾಳ : ರಬಕವಿ-ಬನಹಟ್ಟಿ, ತೇರದಾಳ ತಾಲೂಕಾ ಅಖಿಲ ಕರ್ನಾಟಕ ಜೈನ ಅಲ್ಪ ಸಂಖ್ಯಾತರ ನೌಕರರ ಸಂಘದ ಸಹಯೋಗದಲ್ಲಿ ಸನ್ 2020-21 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್.ಎಸ್ ಎಲ್.ಸಿ ಪರೀಕ್ಷೆಯಲ್ಲಿ ಪ್ರತಿಶತ 85 ಕ್ಕಿಂತ ಹೆಚ್ಚು ಅಂಕ ಗಳಿಸಿದ ಜೈನ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಪೆಬ್ರುವರಿ 27 ರಂದು ಮುಂಜಾನೆ 10 ಗಂಟೆಗೆ ಸಮೀಪದ ತಮದಡ್ಡಿ ಗ್ರಾಮದ ಶ್ರೀ1008 ಪಾಶ್ರ್ವನಾಥ ದಿಗಂಬರ ಜೈನ್ ಮಂದಿರಲ್ಲಿ ಆಯೋಜಿಸಲಾಗಿದೆಯಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಪಾಶ್ರ್ವನಾಥ ದಿಗಂಬರ ಜೈನ ಮಂದಿರದ ಅಧ್ಯಕ್ಷರಾದ ಬಾಬಲ್ಲಿ ಸಿದ್ದಪ್ಪ ಶಿರಗಾರ, ಅತಿಥಿ ಉಪನ್ಯಾಸಕರಾಗಿ ಕರ್ನಾಟಕ ವಿಧಾನ ಪರಿಷತ್ ಸದನದ ಅಧೀನ ಕಾರ್ಯದರ್ಶಿಯವರಾದ ಡಾ.ಅಜೀತ ಮುರಗುಂಡಿ, ಮುಖ್ಯ ಅತಿಥಿಗಳಾಗಿ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಪಿ ಹುಲ್ಲೋಳ್ಳಿ, ಮಾಜಿ ಜಿ.ಪಂ ಅಧ್ಯಕ್ಷರಾದ ಬಿ.ಎ ದೇಸಾಯಿ, ಶ್ರೀ ಪ್ರಭುಲಿಂಗೇಶ್ವರ ಶುಗರ್ಸ ನಿರ್ದೇಶಕರಾದ ದೇವಲ ದೇಸಾಯಿ, ಜಮಖಂಡಿ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರಾದ ಡಿ.ಆರ್ ಪಾಟೀಲ, ತೇರದಾಳ ಪದ್ಮಾ ಆಸ್ಪತ್ರೆಯ ಖ್ಯಾತ ವೈದ್ಯ ಹಾಗೂ ಎಸ್‍ಡಿಎಮ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ಎಮ್.ಎಸ್ ದಾನಿಗೊಂಡ, ಕರ್ನಾಟಕ ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯ ಸಂಚಾಲಕರಾದ ಖ್ಯಾತ ನೇತ್ರತಜ್ಞ ಡಾ.ಪದ್ಮಜೀತ ನಾಡಗೌಡಪಾಟೀಲ, ಖ್ಯಾತ ಉದ್ಯಮಿ ಹಜಾರೆ ಟೆಕ್ಸಟೈಲ್ಸ ಮಾಲೀಕರಾದ ಗಣಪತರಾವ್ ಹಜಾರೆ, ತೇರದಾಳ ತಾಲೂಕಾ ಹೋರಾಟ ಸಮಿತಿಯ ಅಧ್ಯಕ್ಷ ಬುಜಬಲ್ಲಿ ಕೆಂಗಾಲಿ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಪ್ರವೀಣ ನಾಡಗೌಡ ಸೇರಿದಂತೆ ಜೈನ ಸಮುದಾಯದ ಪ್ರಮುಖರು ಹಾಗೂ ಸಮಸ್ತ ನೌಕರ ಪ್ರತಿನಿಧಿಗಳು ಪಾಲ್ಗೊಳ್ಳುವುವರೆಂದು ಸಂಘದ ಗೌರವ ಅಧ್ಯಕ್ಷರಾದ ಶ್ರೀಮತಿ ಸುನೀತಾ ಅಳಗೊಂಡ ಹಾಗೂ ಅಧ್ಯಕ್ಷರಾದ ಧರೆಪ್ಪ ಖವಟಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
      ವಿದ್ಯಾರ್ಥಿಗಳು ಹೆಸರನ್ನು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮಹಾವೀರ ಸೌದತ್ತಿ : 9845803929, ಬಿ.ಬಿ ಲೋಕಾಪೂರ:9481084904, ಗಿರೀಶ ಚವಜ:9916230897, ಮಹಾವೀರ ಜಮಖಂಡಿ:9164423108, ಪಾರೀಸ ಗುರ್ಲಾಪೂರ: 9900842440, ಬಿ.ಬಿ ಕಲ್ಲೋಳ್ಳಿ :9620119946, ಜಿ.ಎಸ್ ಖೇಮನ್ನವರ:8105293108, ಪ್ರಭು ಜೈನರ : 9986236895 ಇವರನ್ನು ಸಂಪರ್ಕಿಸಲು ತಿಳಿಸಿದೆ.