ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ಶ್ರೀ ಅಂಬಿಗರ ಚೌಡಯ್ಯ ದೇವಸ್ಥಾನದಲ್ಲಿ ಧ್ವಜಾರೋಹಣದೊಂದಿಗೆ 902 ನೇ ಜಯಂತ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. 22-ತೇರದಾಳ1
ಹಳಿಂಗಳಿಯಲ್ಲಿ ಸರಳವಾಗಿ ನಡೆದ ಅಬಿಗರ ಚೌಡಯ್ಯನವರ 902 ನೇ ಜಯಂತ್ಯೋತ್ಸವ 
ತೇರದಾಳ : ಅನುಭವ ಸಂಪುಟದ ನಿಜಶರಣ ಅಂಬಿಗರ ಚೌಡಯ್ಯನವರ 902 ನೇ ಜಯಂತ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.
     ಸಮೀಪದ ಹಳಿಂಗಳಿ ಗ್ರಾಮದ ಶ್ರೀಅಂಬಿಗರ ಚೌಡಯ್ಯ ದೇವಸ್ಥಾನ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಅಂಬಿಗರ ಚೌಡಯ್ಯ ದೇವಸ್ಥಾನದ ಸನ್ನಿದಿಯಲ್ಲಿ ಧ್ವಜಾರೋಹಣ ಹಾಗೂ ಚೌಡಯ್ಯನವರ ಭಾವಚಿತ್ರದ ಪೂಜಾ ಕಾರ್ಯಕ್ರಮದೊಂದಿಗೆ ನೆರವೇರಿಸಲಾಯಿತು.
  ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಗ್ರಾಮ ಪಂಚಾಯತ ಉಪಾಧ್ಯಕ್ಷ ಪ್ರದೀಪ ನಂದೆಪ್ಪನವರ ವಿಶ್ವಕ್ಕೆ ಮಾನವತೆಯ ತತ್ವವನ್ನು ಸಾರಿದ ಬಸವಣ್ಣನವರ ಸಮಕಾಲಿನ ಅಂಬಿಗರ ಚೌಡಯ್ಯನವರ ಕಾಯಕ ನಿಷ್ಠೆ ಹಾಗೂ ಅವರು ಸಾರಿದ ತತ್ವಗಳು ಸರ್ವಜನಾಂಗಕ್ಕೆ ಆದರನೀಯವಾಗಿವೆಯಂದು ತಿಳಿಸಿದರು.
   ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸರಳವಾಗಿ ಭಾವಚಿತ್ರದ ಮೆರವಣಿಗೆಯನ್ನು ಮಾಡಲಾಯಿತು.
   ಸಮಾರಂಭದಲ್ಲಿ ಹನಗಂಡಿ ಹುಚ್ಚೇಶ್ವರ ಆಶ್ರಮದ ಈಶ್ವರಯ್ಯಾ ಸ್ವಾಮಿಗಳು, ಮಾಜಿ ತಾ.ಪಂ ಸದಸ್ಯ ಹಾಗೂ ಹಳಿಂಗಳಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷರಾದ ಬಿ.ಬಿ ವೆಂಕಟಾಪೂರ, ಗ್ರಾ.ಪಂ ಸದಸ್ಯರಾದ ಬಸಪ್ಪ ಬಾಗಿ,ಪೂಜೇರಿ,ಅರ್ಜುನ ಪಣದಿ,ನಾಗರಾಜ ಪೂಜಾರಿ,ನಾಗಪ್ಪ ತಳವಾರ, ಮಹಾದೇವ ಬುಗಡಿ, ಶಿವರಾಯ ಕುಸಬಿ, ವಿಠ್ಠಲ ಬುಗಡಿ ಸೇರಿದಂತೆ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು. ರಾಜೇಸಾಬ ಕುರ್ಣಿ, ರೈತ ಸಂಘದ ಅಶೋಕ ದೇಸಾಯಿ, ಬಸಯ್ಯ ಮಠಪತಿ, ಸಮಾಜದ ಪ್ರಮುಖರಾದ ಮಹಾದೇವ ಬುಗಡಿ, ಹನಮಂತ ತಳವಾರ, ಕಲ್ಲಪ್ಪ ಕುಸಬಿ, ಹನಮಂತ ಕುಸಬಿ ಸೇರಿದಂತೆ ಇನ್ನಿತರರು ಇದ್ದರು.