ತೇರದಾಳದ ಪಂಚಮಸಾಲಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳನ್ನು ಸತ್ಕರಿಸಲಾಯಿತು.
ತೇರದಾಳ ಪಂಚಮಸಾಲಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ ಬಸಪ್ಪ ಬಾ ಕಾಲತಿಪ್ಪಿ, ಉಪಾಧ್ಯಕ್ಷರಾಗಿ ಈಶ್ವರ ಯಲ್ಲಟ್ಟಿ ಆಯ್ಕೆ : ಸಮಾಜದ ಏಳ್ಗೆಗಾಗಿ ಶ್ರಮವಹಿಸುವುದಾಗಿ ಭರವಸೆ
ತೇರದಾಳ : ತೇರದಾಳ ಪಟ್ಟಣದ ಪಂಚಮಸಾಲಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಸಮಾರಂಭ ಜರುಗಿತು.
ಪಟ್ಟಣದ ಹೊರವಲಯದ ಬಸಪ್ಪ ಕಾಲತಿಪ್ಪಿಯವರ ತೋಟದ ಮನೆಯಲ್ಲಿ ಜರುಗಿದ ಪಂಚಮಸಾಲಿ ತೇರದಾಳ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಅಧ್ಯಕ್ಷರಾಗಿ ಬಸಪ್ಪ ಬಾ ಕಾಲತಿಪ್ಪಿ, ಉಪಾಧ್ಯಕ್ಷರಾಗಿ ಈಶ್ವರ ಯಲ್ಲಟ್ಟಿ ಹಾಗೂ ಸದಸ್ಯರಾಗಿ ಮುರಗೆಪ್ಪ ಪಾಟೀಲ, ಮಲ್ಲಪ್ಪ ಕಾಲತಿಪ್ಪಿ, ಪರಸಪ್ಪ ಕಾಲತಿಪ್ಪಿ, ಅಲ್ಲಪ್ಪ ಬೆಂಡವಾಡ ( ಉಗಾರ) ಮಗೆಪ್ಪ ತಾರದಾಳ, ಮಲ್ಲಪ್ಪ ಚನಮಲ್ಲಪ್ಪ ಕುಂಚಗನೂರ, ಅರ್ಜುನ ಖ್ಯಾತಗೊಂಡ ಸೇರಿದಂತೆ ಒಟ್ಟು 09 ಜನರನ್ನು ಪಧಾಧಿಕಾರಿಗಳಾಗಿ ಆಯ್ಕೆ ಮಾಡಿ ನೂತನ ಪದಾಧಿಕಾರಿಗಳಿಗೆ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ಭಾವಚಿತ್ರದ ಸ್ಮರಣಿಕೆ ನೀಡಿ ಸತ್ಕರಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಬಸಪ್ಪ ಬಾ ಕಾಲತಿಪ್ಪಿ ಸಮಾಜ ಬಾಂಧವರು ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿ ಸಮಾಜದ ಏಳ್ಗೆಗಾಗಿ ಶ್ರಮವಹಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾಜದ ನಿವೃತ್ ಯೋಧ ಈಶ್ವರ ಮಲ್ಲಪ್ಪ ತಾರದಾಳ ಇವರನ್ನು ಸಮಾಜದ ವತಿಯಿಂದ ಸತ್ಕರಿಸಲಾಯಿತು.
ಸಮಾರಂಭದಲ್ಲಿ ಸಮಾಜದ ಮುಖಂಡರಾದ ಶ್ರೀಶೈಲ್ ಕಾಲತಿಪ್ಪಿ, ಪ್ರಕಾಶ ಕಾಲತಿಪ್ಪಿ, ಬಸು ಕಾಲತಿಪ್ಪಿ, ಗುರುಪಾದ ಕಟಗೇರಿ, ಕೇದಾರಿ ಬೆಂಡವಾಡ, ಅಶೋಕ ತಾರದಾಳ, ಈರಪ್ಪ ತಾರದಾಳ, ಮಲ್ಲಪ್ಪ ಯಲ್ಲಟ್ಟಿ, ಲಕ್ಷ್ಮಣ ಯಲ್ಲಟ್ಟಿ, ಅಪ್ಪಾಸಾಬ ಖ್ಯಾತಗೊಂಡ, ಚನ್ನಪ್ಪ ಚೌಗಲಾ, ಮಹೇಶ ಕುಂಚಗನೂರ, ಬಸವರಾಜ ಕಾಲತಿಪ್ಪಿ, ಪ್ರಕಾಶ ಸ ಕಾಲತಿಪ್ಪಿ ಸೇರಿದಂತೆ ಸಮಾಜಬಾಂಧವರು ಪಾಲ್ಗೊಂಡಿದ್ದರು.

Social Plugin