ಗಣರಾಜ್ಯೋತ್ಸವದ ಪೂರ್ವಭಾವಿ ಸಭೆ 

ತೇರದಾಳ : ಪಟ್ಟಣದ ಪುರಸಭೆಯ ನೂತನ ಕಟ್ಟಡದಲ್ಲಿ 72ನೇಯ ಗಣರಾಜ್ಯೋತ್ಸವದ ಕುರಿತು ಪೂರ್ವಭಾವಿ ಸಭೆಯನ್ನು ಶಾಸಕರ ನೇತೃತ್ವದಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಸಿದ್ದು ಸವದಿ ನಾಳೆ ಬರುವ ಜನೆವರಿ 26 ರಂದು ರಾಷ್ಟ್ರೀಯ ಹಬ್ಬವೆಂದೆ ಗುರುತಿಸಲ್ಪಡುವ ಗಣರಾಜ್ಯೋತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸುವ ಬಗ್ಗೆ ಪಟ್ಟಣದ ಪ್ರಮುಖರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಎಲ್ಲರು ಅಂದು ನಿಗದಿತ ಸಮಯಕ್ಕೆ ಸರಿಯಾಗಿ ಪಾಲ್ಗೊಂಡು ಈ ರಾಷ್ಟ್ರೀಯ ಹಬ್ಬವನ್ನು ಆಚರಿಸೋಣ ಎಂದರು. ರಾಜ್ಯದಲ್ಲಿ ಕೋವಿಡ್ ಕಾರಣದಿಂದ ಸರಕಾರವು ನಿಮ್ಮೆಲ್ಲರ ರಕ್ಷಣೆಗಾಗಿ ಕೋವಿಡ್ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು ಆ ನಿಯಮಗಳನ್ನು ಪಾಲಿಸಿ ರಾಷ್ಟ್ರೀಯ ಹಬ್ಬಕ್ಕೆ ಚ್ಯುತಿ ಭಾರದಂತೆ ಆಹಬ್ಬದ ಘನತೆ ಗೌರವವನ್ನು ಎತ್ತಿ ಹಿಡಿಯಬೇಕು ಎಂದರು. ಆ ದಿವಸ ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು, ಪಟ್ಟಣದ ತುಂಬೆಲ್ಲ ನೀರು ಸಿಂಪಡಿಸುವುದು, ಸರಕಾರಿ ಹಾಗೂ ಸಂಘ ಸಂಸ್ಥೆಗಳ ಕಟ್ಟಡಗಳಿಗೆ ವಿದ್ಯುತ್ ಅಲಂಕಾರ ಮಾಡಬೇಕು, ಸರಕಾರದ ನಿರ್ದೇಶನದಂತೆ ಹಣ್ಣು, ಹಾಲು, ತಟ್ಟೆ,ಶಾಲು ಇವುಗಳನ್ನು ನಿಷೇದಿಸಿದ್ದು ಇವುಗಳ ಬದಲಾಗಿ ಪ್ರಮಾಣ ಪತ್ರ ಅಥವಾ ಪುಸ್ತಕಗಳನ್ನು ನೀಡಿ ಗೌರವಿಸುವ ಬಗ್ಗೆ ನಿರ್ಣಹಿಸಲಾಯಿತು. ಅಧಿಕಾರಿಗಳು ಹಾಗೂ ಶಾಲಾ-ಕಾಲೇಜು-ಸಂಘ-ಸಂಸ್ಥೆಗಳು, ಸಾರ್ವಜನಿಕರು ತಮ್ಮ ತಮ್ಮ ಧ್ವಜಾರೋಹಣವನ್ನು ಮುಂಜಾನೆ ಸರಿಯಾಗಿ 7:05 ನಿಮಿಷಕ್ಕೆ ನೆರವೇರಿಸಿ ತಪ್ಪದೇ ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಗಂಣದಲ್ಲಿ ನೆರವೇರುವ 8:30 ಕ್ಕೆ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಿರಲೆಬೇಕು ಅಲ್ಲದೇ ಈ ಪೂರ್ವಭಾವಿ ಸಭೆಗೆ ಗೈರುಹಾಜರಿದ್ದವರಿಗೆ ನೋಟಿಸ್ ಜಾರಿ ಮಾಡಿ ಎಂದು ತಹಶೀಲ್ದಾರರಿಗೆ ಶಾಸಕರು ಖಡಕ್ಕಾಗಿ ಹೇಳಿದರು.

 ಗ್ರೇಡ್ ಟು ತಹಶಿಲ್ದಾರ್ ಎಸ್,ಬಿ.ಕಾಂಬಳೆಯವರು ಪ್ರಾಸ್ತಾವಿಕ ಮಾತನಾಡಿ ಧ್ವಜಾರೋಹಣದಂದು ನಡೆಯುವ ಕಾರ್ಯಕ್ರಮದ ಪೂರ್ವಸಿದ್ದತೆ ಅಂದರೆ ಕ್ರೀಡಾಂಗಣ ಸ್ವಚ್ಚತೆ, ಧ್ವಜಾರೋಹಣ ವ್ಯವಸ್ಥೆ, ವಾಹನ ಅಲಂಕಾರ, ವಿವಿಧ ಇಲಾಖೆಯಲ್ಲಿ ಸಾಧನೆ ಗೈದವರಿಗೆ ಸನ್ಮಾನ ಇತರೆ ಕೆಲಸ ಕಾರ್ಯಗಳನ್ನು ಸಂಭಂದ ಪಟ್ಟವರು ಸರಿಯಾಗಿ ಚಾಚೂ ತಪ್ಪದೇ ನಿರ್ವಯಿಸಬೇಕು ಎಂದು ಹೇಳಿದರು. 

 ಈ ಸಂಧರ್ಭದಲ್ಲಿ ತಹಶೀಲ್ದಾರ್ ಸಂಜಯ್ ಇಂಗಳೆ, ಸಿಪಿಆಯ್ ಜೆ.ಕರುಣೇಶಗೌಡ, ಉಪನೋಂದಣಾಧಿಕಾರಿ ಮುತ್ತಪ್ಪಗೋಳ್, ಕಂದಾಯ ನಿರೀಕ್ಷಕ ಮಠಪತಿ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿವರ್ಗ ಹಾಗೂ ಶಾಲೆಯ ಮುಖ್ಯ ಗುರುಗಳು, ಪುರಸಭೆ ಸದಸ್ಯರು, ಹಾಗೂ ಪಟ್ಟಣದ ಮುಖಂಡರು ಉಪಸ್ಥಿತರಿದ್ದರು.