ಬೈಂದೂರಿನ ಯೋಜನಾ ನಗರದಿಂದ - ಮದ್ದೋಡಿ- ಕೊರಾಡಿಯ ಹದಗೆಟ್ಟ ರಸ್ತೆಯನ್ನು ಪುನಃ ಡಾಂಬರೀಕರಣ ಮಾಡಲಾಗಿದೆ, 
ಎಂಟು ವರ್ಷದ ಹಿಂದೆ ಈ ರಸ್ತೆಯನ್ನು ಡಾಂಬರೀಕರಣ ಕೆಲಸ ಮಾಡಿದ ಗುತ್ತಿಗೆದಾರರು ಬಹಳ ಸುಂದರವಾಗಿ ಕಾಮಗಾರಿ ಮಾಡಿದ್ದರು, ಆದರೆ ಈಗ ಹಾಳಾದ ಈ ರಸ್ತೆಯನ್ನು ಪುನಃ ಡಾಂಬರೀಕರಣ ಮಾಡುವ ಕೆಲಸವನ್ನು ಮೊದಲು ಡಾಂಬರೀಕರಣ ಕೆಲಸ ಮಾಡಿದ ಗುತ್ತಿಗೆದಾರರ ಮಗ ಮಾಡಿದ್ದಾರೆ, ಆದರೆ ಈಗ ಮಗ ಮಾಡಿದ ರಸ್ತೆಯ ಗುಣಮಟ್ಟ ನೋಡಿದರೆ- ಇನ್ನಾರು ತಿಂಗಳಲ್ಲಿ ಇದೇ ರಸ್ತೆಗೆ ಪುನಃ ತೇಪೆ ಕಾಮಗಾರಿ ಮಾಡಲು ಟೆಂಡರ್ ಕರೆಯಬೇಕಾಗಬಹುದು ಎಂದು ಸ್ಥಳೀಯ ನಾಗರಿಕರು ಸಂದೇಹ ಪಡುತ್ತಿದ್ದಾರೆ, 
ಡಾಂಬರು ರಸ್ತೆಯಲ್ಲಿ ಡಾಂಬರಿಗಿಂತ ಜಲ್ಲಿ ಪುಡಿಯೇ ಹೆಚ್ಚು ಕಾಣಿಸುತ್ತದೆ, 
Karnataka Pwd transference act ಪ್ರಕಾರ ಯಾವುದೇ ನೂತನ ಕಾಮಗಾರಿ ಮಾಡುವಾಗ- ಕಾಮಗಾರಿ ಮಾಡುವ ಸ್ಥಳದಲ್ಲಿ ಕಾಮಗಾರಿಗೆ ಸಂಭಂಧಿಸಿದ ವಿವರಗಳನ್ನು ಫಲಕ ಪ್ರದರ್ಶನದ ಮಾಡಬೇಕು, ಆದರೆ ಇಲ್ಲಿ ಎಲ್ಲಿಯೂ ಫಲಕ ಪ್ರದರ್ಶನ ಮಾಡದೇ- ಕಾಮಗಾರಿ ವಿವರಗಳನ್ನು ಸಾರ್ವಜನಿಕರಿಂದ ಮುಚ್ಚಿಡಲಾಗಿದೆ, 

ಕಾಮಗಾರಿ ಸರಿಯಾದ ರೀತಿಯಲ್ಲಿ ಮಾಡದಿದ್ದರೂ- bill sanction ಕೂಡಲೇ ಆಗುತ್ತದೆ, ಯಾಕೆಂದರೆ ಇದು mla ರವರು ಆಶೀರ್ವಾದ ಮಾಡಿ ಕೊಡಿಸಿದ ಕೆಲಸ, ಎಂದು ಜನ ಆಡಿಕೊಳ್ಳುತ್ತಿದ್ದಾರೆ, ಅಲ್ಲದೇ ಸದ್ಯ mla ಗುದ್ದಲಿ ಪೂಜೆ ಮಾಡುತ್ತಿರುವ ಯಾವ ಕೆಲಸಗಲ್ಲಿಯೂ ಪಾರದರ್ಶಕತೆಯ ಕಾಮಗಾರಿಯ ವಿವರದ ಫಲಕಗಳು ಕಾಣುವುದೇ ಇಲ್ಲಾ...