ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿ ಸಂಕ್ರಮಣದ ಕಾರ್ಯಕ್ರಮಗಳು ರದ್ದು


ತೇರದಾಳ : ಪ್ರತಿ ವರ್ಷ ಮಕರ ಸಂಕ್ರಮಣದ ದಿನ ಪಟ್ಟಣದಲ್ಲಿ ಶ್ರೀಅಲ್ಲಮಪ್ರಭು ದೇವಸ್ಥಾನದ ವತಿಯಿಂದ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರು ಹಾಗೂ ಪಟ್ಟಣದ ಪ್ರಮುಖರು ಸೇರಿ ನಿರ್ಣಯಿಸಿ ರದ್ದುಪಡಿಸಲಾಗಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

  ರಾಜ್ಯದಲ್ಲಿ ಕೋವಿಡ್-19 ಹಾಗೂ ಒಮಿಕ್ರೋನ್ ಹೆಚ್ಚಳದ ಹಾವಳಿ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರವು  ರಾಜ್ಯದಲ್ಲಿ ಜಾತ್ರೆ, ಸಂತೆ ಸೇರಿದಂತೆ ಸಭೆ ಸಮಾರಂಭಗಳನ್ನು ರದ್ದು ಪಡಿಸಿದೆ. ಆ ಕಾರಣ ಪಟ್ಟಣದಲ್ಲಿ ಪ್ರತಿ ವರ್ಷ ಮಕರ ಸಂಕ್ರಮಣದ ನಿಮಿತ್ಯ ನಡೆಯುತ್ತಿದ್ದ ಶ್ರೀಅಲ್ಲಮಪ್ರಭು ದೇವಸ್ಥಾನದಲ್ಲಿನ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಮಾಡಲಾಗಿದೆ. ಅಂದು ದೇವಸ್ಥಾನದ ಆವರಣದಲ್ಲಿ ಸಾಂಕೇತಿಕವಾಗಿ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕರ ಸಮ್ಮುಖದಲ್ಲಿ ಮಾತ್ರ ನಡೆಯುವುದು ಎಂದು ದೇವಸ್ಥಾನದ ಅರ್ಚಕರು ಹಾಗೂ ಪಟ್ಟಣದ ಪ್ರಮುಖರು ಪತ್ರಿಕೆಗೆ ತಿಳಿಸಿದ್ದಾರೆ.