ಕಣ್ಹೇರಿ ಮಠದ ಸುಸಜ್ಜಿತ ಆಸ್ಪತ್ರೆಯಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ನುರಿತ ವೈದ್ಯರ ತಂಡದಿಂದ ಚಿಕಿತ್ಸೆ ಕೊಡುತ್ತಿದ್ದಾರೆ.
ಅವರ ಬಲಗಾಲಿಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು , ಮೂಳೆ ಮುರಿತವಾಗಿದೆ. ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದ್ದು , ಅದಕ್ಕಾಗಿ ಸ್ವಾಮೀಜಿಯವರ ಮನವೊಲಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಇಂದು ದಿನಾಂಕ 11-01-2022 ರಂದು ಮಧ್ಯಾಹ್ನ ಪುಣೆಯ ಶಿವಾಜಿನಗರ ಭಾಗದಲ್ಲಿ ಇರುವ ಸಂಚೇತಿ ಆಸ್ಪತ್ರೆಯ ನುರಿತ ವೈದ್ಯರ ತಂಡ ಕಣ್ಹೇರಿ ಮಠದ ಆಸ್ಪತ್ರೆಗೆ ಭೇಟಿ ಕೊಡಲಿದ್ದು, ಸ್ವಾಮೀಜಿಯವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಬರಲಿದೆ ಎಂದು ತಿಳಿದು ಬಂದಿದೆ.
ಇದೆಲ್ಲದರ ಮಧ್ಯೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಎಲ್ಲರೊಂದಿಗೆ ನಗೆ ಚಟಾಕಿ ಮಾಡುತ್ತ , ನಗುತ್ತ ಮಾತನಾಡುತ್ತಿದ್ದಾರೆ. ಒಟ್ಟಾರೆ ಸ್ವಾಮೀಜಿಯವರು ಬೇಗನೆ ಗುಣಮುಖರಾಗಲಿದ್ದಾರೆ.

Social Plugin