ಭಾರತ ಸರಕಾರದವತಿಯಿಂದ 175 ಅಜಾದಿ ಕಾ ಸ್ವಾತಂತ್ರ ಅಮೃತ ಮಹೋತ್ಸವ - 75ಲಕ್ಷ ಸೂರ್ಯ ನಮಸ್ಕಾರ
ತೇರದಾಳ : ಆಯುಷ್ಯ ಮಂತ್ರಾಲಯ ಭಾರತ ಸರಕಾರದವತಿಯಿಂದ 175 ಅಜಾದಿ ಕಾ ಸ್ವಾತಂತ್ರ ಅಮೃತ ಮಹೋತ್ಸವದ ನಿಮಿತ್ಯ ಜಗತ್ತಿನಾದ್ಯಂತ ಆಯೋಜಿಸಲಾಗಿರುವ 75ಲಕ್ಷ ಸೂರ್ಯ ನಮಸ್ಕಾರ ಹಮ್ಮಿಕೊಂಡಿದ್ದಾರೆ. ಮಕರ ಸಂಕ್ರಮಣದ ನಿಮಿತ್ಯ ವಿಶೇಷ ಸೂರ್ಯನ ಕಿರಣಗಳು ದೇಹಕ್ಕೆ ಚೈತನ್ಯ ನೀಡುವ ಒಂದು ವಿಶೇಷವಾದ ಪ್ರಕೃತಿಯ ಕೊಡುಗೆಯಾಗಿದ್ದು ಈ ದಿನ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ, ಶಾಲೆ, ಕಾಲೇಜು ಹಾಗೂ ಆಶ್ರಮಗಳಲ್ಲಿ ಅಲ್ಲದೇ ತಾವು ಇದ್ದಲ್ಲಿಯೇ ಈ ಸೂರ್ಯ ನಮಸ್ಕಾರಗಳನ್ನು ಮಾಡಬಹುದು.
ಪಟ್ಟಣದ ಗುರುಕುಲ ಆವರಣದಲ್ಲಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಸಂಕ್ರಮಣದ ದಿನ ಅಂದರೆ ಜ.14ರಂದು ಸಾಮೂಹಿಕವಾಗಿ ಸೂರ್ಯ ನಮಸ್ಕಾರಗಳನ್ನು ಬೆಳಿಗ್ಗೆ 7ರಿಂದ 7-30ರ ವರೆಗೆ ಮಾಡಲಿದ್ದು ಸಾರ್ವಜನಿರು ಸಹ ಇಲ್ಲಿ ಭಾಗವಹಿಸಬಹುದು ಎಂದು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಲಿಂಗಾರೆಡ್ಡಿ ಬಿರಾದರ ತಿಳಿಸಿದ್ದಾರೆ. ಅಲ್ಲದೇ ತೇರದಾಳದ ಆಯುವೇದಿಕ್ ಮೆಡಿಕಲ್ ಕಾಲೇಜಿನ ಯೂಟ್ಯೂಬ ವರ್ಚುವಲ್ ಮುಖಾಂತರ ಸಹ ತಾವು ಸೂರ್ಯನಮಸ್ಕಾರ ಮಾಡಬಹುದು.
Social Plugin