ತೇರದಾಳ ಪಟ್ಟಣದಲ್ಲಿ ತೇರದಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ಪುಣ್ಯಸ್ಮರಣೋತ್ಸವದ ನಿಮಿತ್ಯವಾಗಿ ಆಯೋಜಿಸಿದ ಹಿರಿಯ ನಾಗರಿಕರ ಸತ್ಕಾರ ಸಮಾರಂಭದಲ್ಲಿ ಹಿರಿಯ ನಾಗರಿಕರನ್ನು ಸತ್ಕರಿಸಲಾಯಿತು.
ಸ್ವಾತಂತ್ರ್ಯ ಹಿರಿಯ ನಾಗರಿಕರ ತ್ಯಾಗ ಬಲಿದಾನಗಳ ಫಲಶೃತಿ : ಉಮಾಶ್ರೀ 
ತೇರದಾಳ : ನಮ್ಮ ದೇಶಕ್ಕೆ ಸ್ವತಂತ್ರ್ಯ ತಂದುಕೊಡುವಲ್ಲಿ ಹಿರಿಯ ನಾಗರಿಕರ ತ್ಯಾಗ ಮತ್ತು ಬಲಿದಾನ ಅವಿಸ್ಮರಣೀಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆ ಹಿರಿಯ ನಾಗರಿಕರನ್ನು ಗೌರವಿಸುವುದು ಆದ್ಯ ಕರ್ತವ್ಯವಾಗಿದೆಯಂದು ಕರ್ನಾಟಕ ರಾಜ್ಯ ಸ್ತ್ರೀಶಕ್ತಿ ಸಂಘದ ರಾಜ್ಯಾಧ್ಯಕ್ಷೆ ಹಾಗೂ ಮಾಜಿ ಸಚಿವೆ ಶ್ರೀಮತಿ ಉಮಾಶ್ರೀ ಹೇಳಿದರು.
  ಪಟ್ಟಣದ ಶ್ರೀಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆದೇಶದನ್ವಯ ತೇರದಾಳ ಮತಕ್ಷೇತ್ರದಲ್ಲಿ ತೇರದಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ಪುಣ್ಯಸ್ಮರಣೋತ್ಸವದ ಹಾಗೂ ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರವರ ಪರಿನಿರ್ವಾನ್ ದಿವಸ್ ಆಚರಣೆ ನಿಮಿತ್ಯವಾಗಿ ಆಯೋಜಿಸಿದ ಹಿರಿಯ ನಾಗರಿಕರ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು ದೇಶವನ್ನು ಕಟ್ಟಿ ಬೆಳೆಸುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಅಗನ್ಯವಾಗಿದ್ದು, ದೇಶದ ಬಡವರ ಶ್ರೇಯೋಭಿವೃದ್ಧಿಗಾಗಿ ಕಾಮಧೇನು ಕಲ್ಪವೃಕ್ಷದಂತೆ ಕೆಲಸ ಮಾಡಿದ ಕೀರ್ತಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆಯೆಂದು ಹೇಳಿದರು. ಸಮಾರಂಭದಲ್ಲಿ ಮಹಾತ್ಮಾ ಗಾಂಧಿಜೀ ಹಾಗೂ ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಹಿರಿಯ ನಾಗರಿಕರನ್ನು ಸತ್ಕರಿಸಲಾಯಿತು.
  ಸಮಾರಂಭದಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ನಜೀರ ಕಂಗನೊಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ನಗರ ಘಟಕದ ಅಧ್ಯಕ್ಷ ಅಶೋಕ ಆಳಗೊಂಡ, ಮುಖಂಡ ಪ್ರವೀಣ ನಾಡಗೌಡ, ನೇಮಣ್ಣಾ ಸಾವಂತನವರ, ಸುರೇಶ ಕಬಾಡಗಿ, ಆಧಿನಾಥ ಸಪ್ತಸಾಗರ, ಶಿವಪ್ಪ ಖವಾಸಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.