ತೇರದಾಳದ ಸಿದ್ದಪ್ಪ ಕಂಬಾರ ಅವರ ಮನೆಯ ಮೇಲೆ ಅನ್ಯ ಕೋಮಿನವರು ನಡೆಸಿದ ದಾಳಿಯ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಗೃಹ ಸಚಿವರಿಗೆ ತಹಶೀಲ್ದಾರ ಮುಖಾಂತರ ಮನವಿ ಸಲ್ಲಿಸಿದರು.
ತೇರದಾಳ : ಪಟ್ಟಣದ ಸಿದ್ದಪ್ಪ ಕಂಬಾರ ಅವರ ಮನೆಯ ಮೇಲೆ ಅನ್ಯ ಕೋಮಿನವರು ನಡೆಸಿದ ದಾಳಿಯ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಹಿಂದು ಬಾಂಧವರು ಗೃಹ ಸಚಿವರಿಗೆ ತಹಶೀಲ್ದಾರ ಸಂಜಯ ಇಂಗಳೆ ಮುಖಾಂತರ ಮನವಿ ಸಲ್ಲಿಸಿದರು.
  ನ.30ರಂದು ರಾತ್ರಿ ಗಂಟೆ ಸುಮಾರಿಗೆ ಸಿದ್ಧಪ್ಪ ಕಂಬಾರ ಇವರ ಮಗನಾದ ಲಕ್ಷ್ಮಣ ಕಂಬಾರ ಇತನ ಮೇಲೆ ಶ್ರೀಅಲ್ಲಮಪ್ರಭು ದೇವಸ್ಥಾನದ ಅಗಸಿ ಬಾಗಿಲು ಹತ್ತಿರ 2-3ಜನ ಅನ್ಯ ಕೋಮಿನ ಜನರು ಇವನನ್ನು ತಡೆದು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಕೋಮಿನ ವಿರುದ್ಧ ಚಿತ್ರ ಹಾಕಿದಿಯ ಅಂತ ಕೇಳಿದಾಗ ನನಗೆ ಗಮನಕ್ಕೆ ಬಾರದೆ ಈ ಚಿತ್ರ ಬಂದಿರುವುದು ಎಂದು ಹೇಳಿ ಅದನ್ನು ತಗೆಯುತ್ತೇನೆ ಅಂತಾ ಹೇಳಿ ಮನೆಗೆ ಹೋಗಿರುತ್ತಾನೆ.
  ಅದೇ ದಿನ ರಾತ್ರಿ 8-15ನಿಮಿಷಕ್ಕೆ ಅನ್ಯ ಕೋಮಿನ ಸುಮಾರು 200-300ಜನ ಸಿದ್ದಪ್ಪನ ಮನೆಗೆ ಬಂದು ಸಿದ್ದಪ್ಪ ಹಾಗೂ ಆತನ ಹೆಂಡತಿ ಹಾಗೂ ಸಿದ್ದಪ್ಪನ ಮಗನಾದ ಲಕ್ಷ್ಮಣ ಇವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸಿದ್ದಪ್ಪನ ಹೆಂಡತಿಯ ಮೇಲೂ ಸಹ ಮನ ಬಂದಂತೆ ಹೊಡೆದಿರುತ್ತಾರೆ. ಹಾಗೂ ಸಿದ್ದಪ್ಪ ಮತ್ತು ಅವನ ಮಗ ಲಕ್ಷ್ಮಣ ಇತನಿಗೂ ಕಲ್ಲು ಮತ್ತು ಕಬ್ಬಿನ ಸಲಾಕೆಯಿಂದ ಹೊಡೆದು ಗಾಯ ಮಾಡಿದ್ದಾರೆಂದು ಮನವಿಯಲ್ಲಿ ಬರೆದಿದ್ದಾರೆ. ಸಿದ್ದಪ್ಪ ಹಾಗೂ ಆತನ ಹೆಂಡತಿ ಮತ್ತು ಮಗ ಲಕ್ಷ್ಮಣ ಮೂವರು ಆಸ್ಪತ್ರೆಗೆ ತೋರಿಸಿ ಸ್ಥಳೀಯ ಪೋಲಿಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದಾರೆ. ಈ ಘಟನೆಯ ಕುರಿತು ದೂರು ಸಲ್ಲಿಸಿದ್ದರು ಪೋಲಿಸರು ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ. ಈ ವಿಷಯ ಕುರಿತು ಸೂಕ್ತ ತನಿಕೆಯಾಗಬೇಕು. ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ. 
   ಈ ಸಂದರ್ಭದಲ್ಲಿ ಉಪತಹಶೀಲ್ದಾರ ಎಸ್.ಬಿ.ಮಾಯನ್ನವರು. ರಾಮಣ್ಣ ಹಿಡಕಲ, ಪ್ರಭು ಬಾಗಿ, ರಮೇಶ ಕಿತ್ತೂರ, ಸಿದ್ದು ಅಮ್ಮಣಗಿ, ಸಂತೋಷ ಜಮಖಂಡಿ, ಕೇದಾರಿ ಪಾಟೀಲ, ಪ್ರಕಾಶ ಹೊಸಮನಿ, ಮನೋಜ ಯಾದವಾಡ, ಶ್ಯಾಮ ಸತ್ತೀಕರ, ಸಂತೋಷ ಜಮಖಂಡಿಹಿರೇಮಠ ಸೇರಿದಂತೆ ನೂರಾರು ಜನ ಹಿಂದೂ ಕಾರ್ಯಕರ್ತರು ಇದ್ದರು.