ಕುಡಚಿ ಬಾಗಲಕೋಟ ರೈಲು ಮಾರ್ಗದ ಕಾಮಗಾರಿ ಖಜ್ಜಿಡೋಣಿಯಿಂದ ಪ್ರಾರಂಭಿಸುವಂತೆ ಒತ್ತಾಯಿಸಿ ತೇರದಾಳ ಪಟ್ಟಣದಲ್ಲಿ ಪತ್ರಚಳುವಳಿಯನ್ನು ನಡೆಸಲಾಯಿತು.
ರೈಲು ಮಾರ್ಗದ ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿ ಪತ್ರಚಳುವಳಿ
ತೇರದಾಳ : ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕುಡಚಿ ಬಾಗಲಕೋಟ ರೈಲು ಮಾರ್ಗದ ಕಾಮಗಾರಿಯನ್ನು ಖಜ್ಜಿಡೋಣಿಯಿಂದ ಪ್ರಾರಂಭಿಸಬೇಕು ಎಂದು ಪಟ್ಟಣದ ಕನ್ನಡ ಶಾಲೆಯ ಹತ್ತಿರ ಹಾಕಿದ ವೇದಿಕೆಯಲ್ಲಿ ಪತ್ರ ಚಳುವಳಿಯನ್ನು ರೈಲು ಹೋರಾಟ ಸಮೀತಿಯ ಅಧ್ಯಕ್ಷ ಕುತುಬುದ್ದೀನ ಖಾಜಿ ಹಾಗೂ ಸ್ಥಳಿಯ ರೈಲು ಹೋರಾಟ ಸಮೀತಿಯ ಪದಾಧಿಕಾರಿಗಳು ಪ್ರಾರಂಭಿಸಿದರು.
ರೈಲು ಮಾರ್ಗ ಕಾಮಗಾರಿ ಬಾಗಲಕೋಟೆಯಿಂದ ಪ್ರಾರಂಭವಾಗಿ ಖಜ್ಜಿಡೋಣಿಯವರೆಗೆ ಮಾತ್ರ ಕಾಮಗಾರಿಯು ಪೂರ್ಣಗೊಂಡು ಕಾಮಗಾರಿಯು ಸ್ಥಗಿತಗೊಂಡಿದೆ. ಹಲವಾರು ವರ್ಷಗಳಿಂದ ಖಜ್ಜಿಡೋಣಿಯಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು ಪ್ರಾರಂಭವಾಗಿಲ್ಲ. ಬಾಗಲಕೋಟ-ಕುಡಚಿ ರೈಲ್ವೆ ಸಂಚಾರ ಮಾರ್ಗ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಪತ್ರಚಳುವಳಿಯನ್ನು ಕೈಗೊಳ್ಳಲಾಗಿದೆ. ಈಗಾಗಲೇ ಹೋರಾಟ, ಸತ್ಯಾಗ್ರಹಗಳನ್ನು ಮಾಡಲಾಗಿದೆ. ರಾಜ್ಯ ಸರಕಾರ ಈ ಕಾಮಗಾರಿಗೆ ಬಿಡುಗಡೆ ಮಾಡಬೇಕಾದ ಹಣವನ್ನು ಬಿಡುಗಡೆ ಮಾಡಿದೆ. ಜಿಲ್ಲಾಡಳಿತ ಭೂಮಿಯನ್ನು ತಗೆದುಕೊಂಡಿದೆ. ಕಾಮಗಾರಿ ವಿಳಂಭವಾಗಲು ಕಾರಣಗೊತ್ತಾಗಿಲ್ಲ. ಈ ಕುರಿತು ರೈಲ್ವೆ ಜಿಲ್ಲಾ ಜನರಲ್ ಮ್ಯಾನೇಜರ್ ಅವರನ್ನು ಭೇಟಿ ಮಾಡಿದಾಗ ಭೂಮಿಯನ್ನು ಸ್ವಾದೀನ ಪಡಿಸಿಕೊಂಡರೆ ಸಾಲದು ಅದನ್ನು ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಬೇಕು ಅಂದಾಗ ಮಾತ್ರ ಕಾಮಗಾರಿಯು ಪ್ರಾರಂಭಿಸಲಾಗುವುದು ಎಂದಿದ್ದಾರೆ. ಸರಕಾರ ಜಿಲ್ಲಾಡಳಿತ ಮತ್ತು ರೈಲ್ವೆ ಆಡಳಿತವನ್ನು ಕರೆಯಿಸಿ ಸಮಕ್ಷಮ ಮಾತನಾಡಿ ಇರುವಂತ ಸಮಸ್ಯೆಯನ್ನು ಪರಿಹರಿಸಬೇಕು ಎಂದು ನಾವು ಪತ್ರ ಚಳುವಳಿಯನ್ನು ಜಿಲ್ಲೆಯಾದ್ಯಂತ ಕೈಗೊಳ್ಳಲಾಗಿದೆ. 800ಕೋಟಿ ರೂ. ಕಾಮಗಾರಿಗೆ ತಗಲುವ ವೆಚ್ಚ ಈಗ 3ಸಾವಿರ ಕೋಟಿ ವೆಚ್ಚವಾಗಿದೆ.
ಈ ರೈಲು ಮಾರ್ಗದಿಂದ ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದಲು ಬಾಗಲಕೋಟ-ಕುಡಚಿ ರೈಲು ಅವಶ್ಯಕವಾಗಿ ಬೇಕಾಗಿದ್ದು ಕಾರಣ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಬೇಗನೆ ಪ್ರಾರಂಭಿಸಬೇಕು ಎಂದು ಅವರು ಪತ್ರ ಚಳುವಳಿಯ ಮೂಲಕ ಒತ್ತಾಯಪಡಿಸಿದರು. ಈಗಾಗಲೇ ಸುಮಾರು 2000 ಪತ್ರಗಳನ್ನು ತೇರದಾಳ ಪಟ್ಟಣದಿಂದ ಬರೆಯಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ತೇರದಾಳ ಘಟಕದ ಅಧ್ಯಕ್ಷ ದಯಾನಂದ ಬಿಜ್ಜರಗಿ, ಬುಜಬಲಿ ಕೆಂಗಾಲಿ, ಕಲ್ಲಪ್ಪ ಕಬಾಡಗಿ, ಬಾಬು ಪೆಂಡಾರಿ, ಯಲ್ಲಪ್ಪ ನಾಗರೆಡ್ಡಿ, ಪ್ರಭು ಗುಮ್ಮನ್ನವರ, ಅಹಮದ್ ಥರಥರಿ, ಮಗೆಪ್ಪಾ ತಾರದಾಳ, ರಾಜು ಬುರ್ಶಿ ಸೇರಿದಂತೆ ಹಲವಾರು ಜನರು ವೇದಿಕೆಯಲ್ಲಿದ್ದರು.

Social Plugin