ತೇರದಾಳ ಪಟ್ಟಣದ ಗುರುಕುಲ ಆವರಣದಲ್ಲಿನ ನೂತನ ಸಮವಸರಣದಲ್ಲಿ ನಡೆದ ಪಂಚಕಲ್ಯಾಣ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಮಾಜಿ ಸಚಿವೆ ಉಮಾಶ್ರೀ.
ತೇರದಾಳ ಪಟ್ಟಣದ ಗುರುಕುಲ ಆವರಣದಲ್ಲಿನ ನೂತನ ಸಮವಸರಣದಲ್ಲಿ ನಡೆದ ಪಂಚಕಲ್ಯಾಣ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಉಮಾಶ್ರೀಯವರನ್ನು ಸನ್ಮಾನಿಸಿದರು.
ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಶ್ರೇಷ್ಠ ಧರ್ಮ ಈ ಜೈನ ಧರ್ಮ
ತೇರದಾಳ : ಧರ್ಮವನ್ನು ಎತ್ತಿ ಹಿಡಿಯುವಂತಹ ಕಾರ್ಯ ಮಾಡುತ್ತಿರುವ ಈ ಪಂಚಕಲ್ಯಾಣ ಪ್ರತಿಷ್ಠಾ ಧಾರ್ಮಿಕ ಕಾರ್ಯಕ್ರಮ ಇತರರಿಗೆ ಮಾದರಿಯಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತವೆ. ಧರ್ಮ ಕಾರ್ಯಗಳು ಜೀವನಕ್ಕೆ ನೆಮ್ಮದಿಯನ್ನು ನೀಡುತ್ತವೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಪಟ್ಟಣದ ಗುರುಕುಲ ಆವರಣದಲ್ಲಿನ ನೂತನ ಸಮವಸರಣದಲ್ಲಿ ಜರುಗಿದ ಶ್ರೀ1008 ಭ.ನೇಮಿನಾಥ ತೀರ್ಥಂಕರ ರತ್ನಮಯ ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ತಥಾ ಜೀರ್ಣೋದ್ಧಾರಗೊಂಡ ಶಿಖರದಲ್ಲಿ ಶ್ರೀ1008 ಭ ಅನಂತನಾಥ ತೀರ್ಥಂಕರರ ಜಿನಬಿಂಬ ವೇದಿಪ್ರತಿಷ್ಠಾ ಮಹಾಮಹೋತ್ಸವ ಮೂರನೇ ದಿನದ ಸಮಾರಂಭದ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಕಲುಷಿತಗೊಂಡ ಮನಸ್ಸುಗಳು ಹೊಸ ಚೈತನ್ಯವನ್ನು ಪಡೆಯುತ್ತವೆ. ಮುನಿಗಳ ದರ್ಶನದಿಂದ ನಮ್ಮ ಜೀವನ ಪಾವನವಾಗುತ್ತದೆ. ಇಂತಹ ಧಾರ್ಮಿಕ ಶುಭ ಕಾರ್ಯಗಳು ಈ ನಾಡಿನಲ್ಲಿ ನಿರಂತರವಾಗಿ ನಡೆಯುತ್ತಿರಬೇಕು. ಜೈನ ಧರ್ಮ ಪ್ರಪಂಚದಲ್ಲಿಯೇ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಎಲ್ಲರನ್ನು ಪ್ರೀತಿಸುವಂತ, ಅಹಿಂಸೆಯನ್ನು ಪ್ರತಿಪಾದಿಸಿದಂತ ಧರ್ಮ ಇದು. ಭೂಮಿಯಲ್ಲಿರುವ ಪ್ರತಿಯೊಂದು ಜೀವಿಯನ್ನು ಕಾಪಾಡು ಎಂದು ಹೇಳಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಶ್ರೇಷ್ಠ ಧರ್ಮ ಈ ಜೈನ ಧರ್ಮ ಎಂದು ಹೇಳಿದರು.
ಬೆಳಗಾವಿಯ ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿದರು. ಆಚಾರ್ಯ ಶಾಂತಸೇನಾ ಮುನಿ ಮಹಾರಾಜರು ಸಮಾರಂಭದ ಸಾನಿಧ್ಯ ವಹಿಸಿದ್ದರು. ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಗಳು ಉಪಸ್ಥಿತಿಯಲ್ಲಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ನಿರ್ದೇಶಕರಾದ ಸುರೇಶ ತಂಗಾ, ಪ್ರವೀಣ ನಾಡಗೌಡ, ಮಹಾವೀರ ಕೊಕಟನೂರ, ಅಶೋಕ ಅಳಗೊಂಡ, ಡಾ. ಜೆ.ಬಿ.ಆಲಗೂರ, ಭೀಮಗೊಂಡ ಸದಲಗಿ, ಮಲ್ಲಿನಾಥ ಬೋಳಗೊಂಡ, ಅಜೀತ ದೇಸಾಯಿ, ಸುಭಾಸ ಮಗದುಮ್ಮ, ಶಾಂತಿನಾಥ ಕೋರಿಗೇರಿ, ಶೀತಲ ಘೂಳನ್ನವರ, ಜಿನ್ನಪ್ಪ ಪರಮಗೊಂಡ, ಸಂಜು ಕಡಹಟ್ಟಿ, ಸುನೀಲ ಅಳಗೊಂಡ, ಡಾ. ಎಮ್.ಎಸ್.ದಾನಿಗೊಂಡ, ಮಲ್ಲಪ್ಪಣ್ಣ ದಾನಿಗೊಂಡ ಸೇರಿದಂತೆ ಹಿರಿಯರು, ಮುಖಂಡರು ಪಟ್ಟಣದ ಸುತ್ತಮುತ್ತಲಿನ ಶ್ರಾವಕ-ಶ್ರಾವಕೀಯರು ಇದ್ದರು. ಸಿ.ಕುಮುದಾನಾಗಭೂಷಣ ನಿರೂಪಿಸಿದರು.
ಇಂದಿನ ಉಪಹಾರ ಹಾಗೂ ಊಟ ವ್ಯವಸ್ಥೆಯನ್ನು ಡಾ.ಎಮ್.ಎಸ್.ದಾನಿಗೊಂಡ ಅವರು ಮಾಡಿದ್ದರು.

Social Plugin