ತೇರದಾಳ ಪಟ್ಟಣದ ಪುರಸಭೆ ಆವರಣದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾತನಾಡಿದರು. 
ಸಂವಿಧಾನ ಸಮರ್ಪಣಾ ದಿನಾಚರಣೆ
ತೇರದಾಳ : ನವೆಂಬರ್ 26 ಭಾರತ ದೇಶಕ್ಕೆ ಮಹತ್ವದ ಹಾಗೂ ಎಲ್ಲರೂ ಗೌರವ ಕೊಡುವ ದಿನವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಹೇಳಿದರು.
  ಪಟ್ಟಣದ ಪುರಸಭೆ ಆವರಣದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಾ.ಬಾಬಾಸಾಹೇಬ ಅಂಬೇಡ್ಕರರು ದೇಶಕ್ಕೆ ಸಂವಿಧಾನವನ್ನು ಅರ್ಪಣೆ ಮಾಡಿದ ದಿನವಾಗಿದೆ. ಬಹಳ ಪವಿತ್ರವಾದ ದಿನವನ್ನು ನಾವೆಲ್ಲರೂ ಗೌರವಿಸಬೇಕು. ಭಾರತದ ಸಂವಿಧಾನವು ಮೂಲಭೂತ ರಾಜಕೀಯ ತತ್ವಗಳನ್ನು ವ್ಯಾಖ್ಯಾನಿಸುವ ಚೌಕಟ್ಟನ್ನು ರೂಪಿಸುತ್ತದೆ. ಸಮಾನತೆಗೆ ಸಂಬಂದಿಸದಂತ ಸಾರ್ವಭೌಮತೆ, ಪ್ರಜಾಸತ್ಯಾತ್ಮತೆ ಈ ಮೂರು ಅಂಶಗಳಿಂದ ಸಂವಿಧಾನದ ಘನತೆ ಹೆಚ್ಚುತ್ತದೆ. ವ್ಯಕ್ತಿ ಹುಟ್ಟಿನಿಂದ ಸಾವಿನವರೆಗೂ ಬಹಳಷ್ಟು ಅವಕಾಶಗಳನ್ನು ಸಂವಿಧಾನದಲ್ಲಿ ಕೊಟ್ಟಿದೆ ಆ ಎಲ್ಲಾ ಸಂವಿಧಾನದ ಅಂಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭ್ರಾತೃತ್ವ ಭಾವನೆಯನ್ನು ಎಲ್ಲರಲ್ಲಿ ತುಂಬು ಕೆಲಸವಾಗಬೇಕಿದೆ ಎಂದರು.
  ಈ ಸಂದರ್ಭದಲ್ಲಿ ಸದಾಶಿವ ಹೊಸಮನಿ, ಜಿನ್ನಪ್ಪ ದೊಡಮನಿ, ಆನಂದ ನಡುವಿನಕೇರಿ, ಅಶೋಕ ಅಳಗೊಂಡ, ಸಚೀನ ಕೊಡತೆ, ವರ್ಧಮಾನ ಕಡಹಟ್ಟಿ, ಗೌತಮ ರೋಡಕರ, ಭೀಮಗೊಂಡ ಸದಲಗಿ, ಉಮೇಶ ದೊಡಮನಿ, ಪ್ರಕಾಶ ಹೊಸಮನಿ, ಲಕ್ಷ್ಮಣ ನಾಯಿಕ, ರೂಪಾ ಗೊಂಬೆ, ಮಹಾದೇವಿ ಮರೇಗುದ್ದಿ ಸೇರಿದಂತೆ ಪುರಸಭೆ ಸದಸ್ಯರು, ಸಿಬ್ಬಂದಿಯವರು ಸಾರ್ವಜನಿಕರು ಇದ್ದರು.