ತೇರದಾಳದ ಚಿನಗೀಶಾ ಶಾದಿ ಮಹಲ್‍ದಲ್ಲಿ ತೇರದಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ 75ನೇ ಸ್ವಾತಂತ್ರ್ಯ ದಿನೋತ್ಸವ ಹಾಗೂ ಮಹಾತ್ಮಾ ಗಾಂಧೀಜಿಯವರ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದರು.
ತೇರದಾಳದ ಶ್ರೀಗುರು ಬ್ರಹ್ಮಾನಂದ ಆಶ್ರಮದಲ್ಲಿ ತೇರದಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ 75ನೇ ಸ್ವಾತಂತ್ರ್ಯ ದಿನೋತ್ಸವ ಹಾಗೂ ಮಹಾತ್ಮಾ ಗಾಂಧೀಜಿಯವರ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯರನ್ನು ಸನ್ಮಾನಿಸಿದರು.

ತೇರದಾಳ : ಯಾರಾದರೂ ಸರಕಾರವನ್ನು ಪ್ರಶ್ನೆ ಮಾಡಿದರೆ ಅವರ ಮೇಲೆ ದೂರು ಸಲ್ಲಿಸಿ ಅವರನ್ನು ಜೈಲಿಗೆ ಕಳುಹಿಸುತ್ತಾರೆ. ಕೇಂದ್ರ ಸರಕಾರ ದೇಶದಲ್ಲಿನ ಎಲ್ಲ ಉದ್ದಿಮೆಗಳನ್ನು ಖಾಸಗೀರಣ ಮಾಡುತ್ತಿದ್ದು, ಬಂಡವಾಳುದಾರರ ಕೈಗೊಂಬೆಯಾಗಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
     ಪಟ್ಟಣದ ಚಿನಗೀಶಾ ಶಾದಿ ಮಹಲ್ ಹಾಗೂ ಶ್ರೀಗುರು ಬ್ರಹ್ಮಾನಂದ ಆಶ್ರಮದಲ್ಲಿ ತೇರದಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ 75ನೇ ಸ್ವಾತಂತ್ರ್ಯ ದಿನೋತ್ಸವ ಹಾಗೂ ಮಹಾತ್ಮಾ ಗಾಂಧೀಜಿಯವರ ಪುಣ್ಯಸ್ಮರಣೆಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಮೂಲ ಕಾಂಗ್ರೆಸ್ ಪಕ್ಷದವರು ತಮ್ಮ ಜೀವನವನ್ನು ಮುಡುಪಾಗಿಟ್ಟು ಸ್ವತಂತ್ರವನ್ನು ತಂದುಕೊಟ್ಟರು. ದೇಶದ ಅಭಿವೃದ್ಧಿಗಾಗಿ ದೇಶದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಂಡು ದೇಶದ ಅಭಿವೃದ್ಧಿ ಮಾಡಿದರು. ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಧಿಸಿ ಮತ್ತೊಮ್ಮೆ ಆರಿಸಿ ತರಬೇಕು ಎಂದರು.  
  ತೇರದಾಳ ಮತಕ್ಷೇತ್ರದ ಉಸ್ತುವಾರಿ ನಜೀರ ಕಂಗನೊಳ್ಳಿ ಹಾಗೂ ಮುಖಂಡ ಪ್ರವೀಣ ನಾಡಗೌಡ ಮಾತನಾಡಿ ನೂರಾರು ಜನರ ಮುಂದಾಳತ್ವದಲ್ಲಿ ನಮಗೆ ಸ್ವತಂತ್ರ ದೊರಕಿದೆ. ಪೆಟ್ರೋಲ್ ಡಿಸೇಲ್ ಹಾಗೂ ದಿನಸಿಗಳ ಬೆಲೆ ಏರಿಕೆಯಿಂದಾಗಿ ಬಡವರು ಹಾಗೂ ಮಧ್ಯಮ ವರ್ಗದವರು ಬದುಕುವುದು ದುಸ್ತರವಾಗಿದೆ ಎಂದರು. 
  ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮತ್ತು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರನ್ನು ಸನ್ಮಾನಿಸಿದರು. ಲಕ್ಷ್ಮಣ ದೇಸಾರಟ್ಟಿ, ನಗರ ಘಟಕ ಅಧ್ಯಕ್ಷ ಅಶೋಕ ಅಳಗೊಂಡ, ಮಲ್ಲಪ್ಪಣ್ಣ ದಾನಿಗೊಂಡ, ನೇಮಣ್ಣ ಸಾವಂತನವರ, ಅಶೋಕ ಹಾಡಕಾರ, ಕೃಷ್ಣಪ್ಪ ದೊಡಮನಿ, ಆದಿನಾಥ ಸಪ್ತಸಾಗರ, ಸುರೇಶ ಕಬಾಡಗಿ, ಶೆಟ್ಟೆಪ್ಪ ಸುಣಗಾರ, ಗೌತಮ ರೋಡಕರ, ಪೈಜುಲ್ಲಾ ಇನಾಮದಾರ, ಫಜಲ್ ಅತಾರಾವುತ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.
  ಅಶೋಕ ಅಳಗೊಂಡ ಸ್ವಾಗತಿಸಿದರು. ಶಿವಪ್ಪ ಖವಾಸಿ ನಿರೂಪಿಸಿ ವಂದಿಸಿದರು.