ಶಿವಕುಮಾರ ಶ್ರೀ ಪುರಪ್ರವೇಶ... 
ತೇರದಾಳ : ಪಟ್ಟಣದ ವಿರಕ್ತಮಠದ ಉತ್ತರಾಧಿಕಾರಿಯಾಗಿ ಆಯ್ಕೆಗೊಂಡಿರುವ ಬಳೂಟಗಿಯ ಶಿವಕುಮಾರ ದೇವರು ಪುರಪ್ರವೇಶ ನ.11ರಂದು ಮುಂಜಾನೆ 9ಗಂಟೆಗೆ ನಡೆಯಲಿದೆ ಎಂದು ಕಮೀಟಿಯವರು ತಿಳಿಸಿದ್ದಾರೆ.
 ಕಲ್ಲಟ್ಟಿ ಗಲ್ಲಿ ಗಂಗಾಧರ ಮಠದಿಂದ ಕುಂಭ, ಆರತಿ ಸೇರಿದಂತೆ ಸಕಲ ವಾದ್ಯ ಮೇಳಗಳೊಂದಿಗೆ ಶ್ರೀಗಳ ಪುರಪ್ರವೇಶಕ್ಕೆ ಚಾಲನೆ ನೀಡಲಾಗುವುದು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ವಿರಕ್ತ ಮಠ ತಲುಪುವುದು. ನಂತರ ಮಠದಲ್ಲಿ ಧರ್ಮ ಸಭೆ ನಡೆಯಲಿದೆ. ಧರ್ಮ ಸಭೆಯ ಸಾನಿಧ್ಯವನ್ನು ಹಂದಿಗುಂದ ಸಿದ್ಧೇಶ್ವರ ಮಠದ ಶಿವಾನಂದ ಶ್ರೀಗಳು ವಹಿಸುವರು. ಚಿಮ್ಮಡ ವಿರಕ್ತಮಠದ ಪ್ರಭು ಶ್ರೀ ನೇತೃತ್ವ ವಹಿಸುವರು. ಹಾವೇರಿ ಹುಕ್ಕೇರಿ ಮಠದ ಶ್ರೀ, ಶೇಗುಣಸಿ ಮಹಾಂತ ದೇವರು, ಶಿವುಕುಮಾರ ದೇವರು, ಶಾಸಕ ಸಿದ್ದು ಸವದಿ, ಮಾಜಿ ಸಚಿವೆ ಉಮಾಶ್ರೀ ಉಪಸ್ಥಿತರಿರುವುರೆಂದು ಕಮೀಟಿಯವರು ತಿಳಿಸಿದ್ದಾರೆ.