ತೇರದಾಳ ಪಟ್ಟಣದಲ್ಲಿ ವಿರಕ್ತಮಠದ ಉತ್ತರಾಧಿಕಾರಿಯಾಗಿ ಆಯ್ಕೆಗೊಂಡಿರುವ ಬಳೂಟಗಿಯ ಶಿವಕುಮಾರ ದೇವರು ಪುರಪ್ರವೇಶ ಅದ್ದೂರಿಯಾಗಿ ಜರುಗಿತು.
ತೇರದಾಳ : ಪಟ್ಟಣದ ವಿರಕ್ತಮಠದ ಉತ್ತರಾಧಿಕಾರಿಯಾಗಿ ಆಯ್ಕೆಗೊಂಡಿರುವ ಬಳೂಟಗಿಯ ಶಿವಕುಮಾರ ದೇವರು ಪುರಪ್ರವೇಶ ಇಂದು ಬೆಳಿಗ್ಗೆ ಪಟ್ಟಣದ ಕಲ್ಲಟ್ಟಿ ಗಲ್ಲಿಯ ಶ್ರೀಗಂಗಾಧರ ಮಠದಿಂದ ಚಾಲನೆಗೊಂಡ ಪಟ್ಟಣದ ಪ್ರಮುಖ ಬೀದಿಗಳೊಂದಿಗೆ ಸಂಚರಿಸಿ ವಿರಕ್ತ ಮಠಕ್ಕೆ ಬಂದು ಪುರಪ್ರವೇಶ ಮೆರವಣಿಗೆ ಮುಕ್ತಾಯಗೊಂಡಿತು.
ಹಂದಿಗುಂದ ಸಿದ್ಧೇಶ್ವರ ಮಠದ ಶಿವಾನಂದ ಶ್ರೀಗಳು, ಚಿಮ್ಮಡ ವಿರಕ್ತಮಠದ ಪ್ರಭು ಶ್ರೀ, ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀ, ಶೇಗುಣಸಿ ಮಹಾಂತ ದೇವರು ಪುರ ಪ್ರವೇಶಕ್ಕೆ ಚಾಲನೆ ನೀಡಿದರು. ಮಾತೆಯರು ಕುಂಭ, ಆರತಿ ಮೆರವಣಿಗೆಗೆ ಮೆರಗು ತಂದಿದ್ದವು. ಸಕಲ ವಾದ್ಯ ಮೇಳಗಳೊಂದಿಗೆ ಬೆಳ್ಳಿರಥದಲ್ಲಿ ಶ್ರೀಗಳ ಪುರಪ್ರವೇಶ ಮೆರವಣಿಗೆ ವಿರಕ್ತ ಮಠಕ್ಕೆ ಬಂದು ಸಪನ್ನಗೊಂಡಿತು.
ಕಲ್ಲಟ್ಟಿಗಲ್ಲಿಯಿಂದ ಶ್ರೀಅಲ್ಲಮಪ್ರಭು ಅಗಸಿ ಬಾಗಿಲು, ಶ್ರೀಅಲ್ಲಮಪ್ರಭು ದೇವಸ್ಥಾನ, ಸಿದ್ಧೇಶ್ವರ ಗಲ್ಲಿ, ಜವಳಿ ಬಜಾರ, ಕಾಳಿನ ಬಜಾರ, ಗುಮ್ಮಟಗಲ್ಲಿಯ ಮುಖಾಂತರ ಸಾಗಿ ಶ್ರೀವಿರಕ್ತಮಠಕ್ಕೆ ಬಂದು ಸಂಪನ್ನಗೊಂಡಿತು. ಮೆರವಣಿಗೆ ಬರುವ ದಾರಿಯಲ್ಲಿ ನೀರು ಹಾಕಿ ರಂಗೋಲಿ ಹಾಕಿದ್ದರು. ಪಟ್ಟಣವನ್ನು ತೆಂಗಿನ ಪೊರಕೆ ಹಾಗೂ ತಳಿರು ತೋರಣಗಳಿಂದ ಸಿಂಗಸಲಾಗಿತ್ತು. ಪುರಪ್ರವೇಶ ಕಾರ್ಯಕ್ರಮದಲ್ಲಿ ಪಟ್ಟಣದ ಪ್ರಮುಖರು, ಮಾತೆಯರು, ಯುವಕರು ಸೇರಿದಂತೆ ಟ್ರಸ್ಟ್ ಕಮೀಟಿಯ ಪದಾಧಿಕಾರಿಗಳು ಹಾಗೂ ಸದ್ಭಕ್ತರು ಭಾಗವಹಿಸಿದ್ದರು.

Social Plugin