ತೇರದಾಳದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಪಾಲಕರ ಸಭೆಯನ್ನು ವ್ಹಿ.ಬಿ.ಹಿರೇಮಠ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಮಕ್ಕಳಿಗೆ ಮನೆಯಲ್ಲಿ ಕಲಿಕಾ ವಾತಾವರಣ ಅವಶ್ಯಕ 
ತೇರದಾಳ : ರಜಾ ಅವಧಿಯಲ್ಲಿ ಮಕ್ಕಳಿಗೆ ಮನೆಯಲ್ಲಿ ಕಲಿಕಾ ವಾತಾವರಣ ನಿರ್ಮಿಸಿ ಕೊಡಿ, ಕೆಲಸದ ಅನುಭವದ ಜೊತೆಗೆ ಅಭ್ಯಾಸಕ್ಕೆ ಅನುಕೂಲ ಮಾಡಕೊಡಬೇಕು. ತಂದೆ-ತಾಯಿಗಳು ಕಂಡಿರುವ ಕನಸು ಇಡೇರಿಸಲು ಮಕ್ಕಳಿಗೆ ಮನೆಯಲ್ಲಿ ಕಲಿಕಾ ವಾತಾವರಣ ಅವಶ್ಯಕ ಎಂದು ಮುಖ್ಯಾಧಾಪಕ ವ್ಹಿ.ಎಸ್.ಯಳಗೂಡ ಹೇಳಿದರು.
  ಪಟ್ಟಣದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಪಾಲಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಆಗ ಆನ್‍ಲೈನ್ ತರಗತಿಗಾಗಿ ಮೊಬೈಲ್ ಮಕ್ಕಳ ಕೈಗೆ ಕೊಡಬೇಕಾಗಿತ್ತು. ಈಗ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡಿದ್ದು ಮಕ್ಕಳಿಗೆ ಮೊಬೈಲ್ ಕೊಡಬೇಡಿ. ಅಚಲವಾದ ನಿರ್ಧಾರದಿಂದ ಸಾಧಿಸಬೇಕು ಎನ್ನುವ ಛಲವಿರಬೇಕು, ಶಿಕ್ಷಣದಿಂದ ಜಗತ್ತನ್ನೇ ಗೆಲ್ಲಬಹುದು. ಮಗುವಿನ ಉತ್ತಮ ಭವಿಷ್ಯ ನಿರ್ಮಾಣವಾಗಲು ಶಿಕ್ಷಕರು ಹಾಗೂ ಪಾಲಕರ ಮಾರ್ಗದರ್ಶನ ಅವಶ್ಯ ಎಂದರು.
  ವಸತಿ ನಿಲಯ ಪಾಲಕ ವ್ಹಿ.ಬಿ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಇದಕ್ಕಿಂತ ಮುಂಚೆ ಮಕ್ಕಳಿಂದ ತಂದೆ-ತಾಯಿಗಳ ಪಾದ ಪೂಜೆ ನಡೆಯಿತು.
  ಲಕ್ಷ್ಮಣ ನಡುವಿನಮನಿ, ವಿದ್ಯಾರ್ಥಿ ಪ್ರತಿನಿಧಿ ಸುಪ್ರೀತ ಹೊಸಮನಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿದ್ದರು. ದಾನಮ್ಮ ಜಾಡಗೌಡರ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಮಲ್ಲು ಗೌಡರ ಸ್ವಾಗತಿಸಿ ನಿರೂಪಿಸಿದರು. ಪಾರೀಶ ಧರೆನ್ನವರ ವಂದಿಸಿದರು.