ಹಳ್ಳೂರ 09:ಉತ್ತರ ಕರ್ನಾಟಕದ ದಿಟ್ಟ ರೈತ ಚಳುವಳಿಗಳ ಮುಂಚೂಣಿ ನಾಯಕ ಅಜಾತ ಶತ್ರು ಹೋರಾಟವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದವರು ಹಾಗೂ ಹಸಿರು ಕ್ರಾಂತಿ ದಿನ ಪತ್ರಿಕೆಯ ಸಂಸ್ಥಾಪಕ, ಸಂಪಾದಕರಾದ ಕಲ್ಯಾಣರಾವ ಮುಚಳಂಬಿ ಯವರು ಅಗಲಿಕೆಯಿಂದ ಪತ್ರಿಕಾ ರಂಗಕ್ಕೆ ಹಾಗೂ ರೈತ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪತ್ರಕರ್ತ ಹಾಗೂ ಸಮಾಜ ಸೇವಕ ಮುರಿಗೆಪ್ಪಾ ಮಾಲಗಾರ ಹೇಳಿದರು. ಶನಿವಾರದಂದು ಹಳ್ಳೂರ ಗ್ರಾಮದ ತೋಟಗೇರ ದೈವದ ಮನೆ ಹತ್ತಿರ ಬುಧವಾರ ನಿಧನರಾದ ಕಲ್ಯಾಣರಾವ ಮುಚಳಂಬಿ ಯವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿ ರಾಜ್ಯದ ರೈತ ಹೋರಾಟದಲ್ಲೇ ಪ್ರಾಮಾಣಿಕತೆಯಿಂದ ಇದ್ದು ತಮ್ಮ ಜೀವನದ ಬಹುತೇಕ ಸಮಯ ಕಳೆದ ಮುಚಳಂಬಿ ಅವರು ಪ್ರೋ ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ, ಪುಟ್ಟಣ್ಣಯ್ಯ ಸೇರಿದಂತೆ ವಿವಿಧ ಮಠಾಧಿಶರು, ರಾಜಕಾರಣಿಗಳಿಗೆ ಆಪ್ತರಾಗಿ ರೈತ ಹೋರಾಟಗಾರರಿಗೆ ಸಾಥ್ ನೀಡಿದವರು. ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆರೋಗ್ಯ ಲೆಕ್ಕಿಸದೆ ನಿರಂತರ ಹೋರಾಟ ಮಾಡುತ್ತಲೇ ಇದ್ದರು ಎಂದು ಹೇಳಿದರು. ಪತ್ರಕರ್ತ ಪ್ರವೀಣ ಮಾವರಕರ ಮಾತನಾಡಿ ಕನ್ನಡದ ಶಕ್ತಿ ಕೇಂದ್ರ ಪತ್ರಕರ್ತ ಹಾಗೂ ರೈತ ಹೋರಾಟಗಾರ ಕಲ್ಯಾಣರಾವ ಮುಚಳಂಬಿ ನಿಧನ ನಿಜಕ್ಕೂ ಸಮಸ್ತ ಕನ್ನಡ ನಾಡಿನ ಜನತೆಗೆ ಹಾಗೂ ನಾಡಿಗೆ ತುಂಬಲಾರದ ನಷ್ಟವಾಗಿದೆ. ಪತ್ರಿಕಾರಂಗ ಅಷ್ಟೇ ಅಲ್ಲದೆ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ರೈತ ಹೋರಾಟ ಅಂಗವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಮಯದಲ್ಲಿ ನಿಧನರಾಗಿದ್ದು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಎಂದರು. ಶ್ರದ್ದಾಂಜಲಿ ಸಭೆಯಲ್ಲಿ ಅಯ್ಯಪ್ಪ ಹಿರೇಮಠ. ಸುರೇಶ ಮಗದುಮ.ಸುರೇಶ ಕತ್ತಿ. ಯಮನಪ್ಪ ನೀಡೋಣಿ. ಕಿಶೋರ ಗಣಾಚಾರಿ. ಭೀಮಪ್ಪ ಡಬ್ಬನವರ.ಶಿವಪ್ಪ ನೀಡೋಣಿ. ಭೀಮಪ್ಪ ಸಪ್ತಸಾಗರ.ಸಂಗಪ್ಪ ನಾಯ್ಕ. ಹಣಮಂತ ಹಳ್ಳೂರ. ಗಿರಮಲ್ಲಪ್ಪ ಸಪ್ತಸಾಗರ. ಬಸವರಾಜ ಲೋಕಣ್ಣವರ. ಸಿದ್ದು ಮಹಾರಾಜ. ಸಂಗಪ್ಪ ದುರದುಂಡಿ. ಬಾಳಪ್ಪ ನಾಯ್ಕ.ಆನಂದ ಮೂಡಲಗಿ.ಈರಪ್ಪ ಅಂಗಡಿ. ರಾಮಪ್ಪ ಕೂಲಿಗೋಡ. ಶಂಕರ ಮೇಲಪ್ಪಗೋಳ. ಗಂಗಪ್ಪ ನೀಡೋಣಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.