ಭಾಗ (11)
ಸ್ವಾತಂತ್ರ್ಯ ಸಂಗ್ರಾಮ, ಗೋರಕ್ಷಾ ಹೋರಾಟ, ಸರ್ವೋದಯ ಭಕ್ತಿ-ಧರ್ಮ ಪ್ರಚಾರದ ಕೇಂದ್ರ ಬಿಂದುವಾಗಿರುವ ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಅನೇಕ ಧಾರ್ಮಿಕ ಗುರುಗಳು, ಹಿರಿಯರು,ರಾಜಕೀಯ ಮುಖಂಡರು, ತಜ್ಞರು, ವಿದ್ವಾಂಸರು ಭೇಟಿ ನೀಡಿದ್ದಾರೆ.
ಅವರಲ್ಲಿ ಪ್ರಮುಖರೆಂದರೆ ಹುಬ್ಬಳ್ಳಿಯ ಗಿರೀಶ ಆಶ್ರಮಕ್ಕೆ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಸುಭಾಷ್ ಚಂದ್ರ ಬೋಸ್. ಭೇಟಿ ನೀಡಿದ್ದರು. ಶ್ರೀ ಮಠಕ್ಕೆ ಗಾಂಧಿಜಿಯವರ ಮೊಮ್ಮಗ ಅರುಣ್ ಗಾಂಧಿ. ಅಂದಿನ ಕೇಂದ್ರ ಗೃಹ ಖಾತೆ ಸಚಿವರಾದ ಶ್ರೀ ಸರ್ದಾರ ಬೂಟಾ ಸಿಂಗ್, ಅಂದಿನ ಮುಖ್ಯ ಮಂತ್ರಿಗಳಾದ ಎಸ್. ಎಮ್ .ಕೃಷ್ಣ, ಶ್ರೀ ಎನ್. ಧರ್ಮಸಿಂಗ್, ಶ್ರೀ ಎಸ್. ಬಂಗಾರಪ್ಪನವರು.
ವಿಧಾನಪರಿಷತ್ ಸಭಾಪತಿಗಳಾಗಿದ್ದ ಶ್ರೀ ಟಿ. ಬಿ. ಕಲ್ಮಣಕರ, ಸಚಿವರಾಗಿದ್ದ ಶ್ರೀ ಕೆ. ಹೆಚ್ . ಪಾಟೀಲ, ಶ್ರೀ ಬಿ. ಬಸವಲಿಂಗಪ್ಪ, ಶ್ರೀ ಸಿ. ಎಸ್. ನಾಡಗೌಡ, ಶ್ರೀ ಎಂ. ಎಲ್. ಉಸ್ತಾದ.ಸದಾನಂದ ಗೌಡರು. VRL ಸಮೋಹ ಸಂಸ್ಥೆಯ ಅಧ್ಯಕ್ಷರಾದ ವಿಜಯ ಸಂಕೇಶ್ವರ. ಯಡೂರಪ್ಪ. ಲಕ್ಷ್ಮಣ ಸವದಿ ಗೋವಿಂದ ಕಾರಜೋಳ ಸೇರಿದಂತೆ ಅನೇಕ ಸಚಿವರು, ಶಾಸಕರುಗಳು ಭೇಟಿ ನೀಡಿದ್ದಾರೆ.
ಸರ್ವೋದಯದ ಶ್ರೀ ಸಿದ್ಧರಾಮ ಗುರುಜೀ, ವಿಜಯಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಅವರ ಶಿಶ್ಯರಾದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು (ವಿಜಾಪುರ), ಶ್ರೀ ರಾಧಕೃಷ್ಣಬಜಾಜ, ಸಂತ ವಿನೋಭಾ ಬಾವೆ ಅವರು ಹಾಗೂ ಅವರ ಸಹೋದರ ಶಿವಾಜಿ ಭಾವೆ ಹಾಗೂ ಅನೇಕ ಗಣ್ಯಾತಿ ಗಣ್ಯರು ಭೇಟಿ ನೀಡಿ ದರ್ಶನಾಶಿರ್ವಾದ ಪಡೆದಿರವರು .
ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಸಂದ ಗೌರವ ಪುರಸ್ಕಾರ .
ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರಿಗೆ ಗೌರವವಾಗಿ ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ "ಕರ್ನಾಟಕ ಏಕೀಕರಣ ಪ್ರಶಸ್ತಿ"ಯನ್ನು ರಾಜ್ಯ ಸರ್ಕಾರ ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ನೀಡಿ ಗೌರವಿಸಿತ್ತು.ಮುಂದುವರಿವದು.....🚩🙏

Social Plugin