ತೇರದಾಳದ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ದೇವಾಲಯದಲ್ಲಿ ನಾಡಹಬ್ಬ ದಸರಾ ನಿಮಿತ್ಯ ವಿಜಯದಶಮಿ ಶುಕ್ರವಾರದಂದು ಚೌಕಿ ಅಲಂಕಾರ ಪೂಜೆ ಗಮನ ಸೆಳೆಯಿತು.
ತೇರದಾಳ : ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ದೇವಾಲಯದಲ್ಲಿ ನಾಡಹಬ್ಬ ದಸರಾ ನಿಮಿತ್ಯ ವಿಜಯದಶಮಿ ಶುಕ್ರವಾರದಂದು ವಿಶೇಷ ಪೂಜಾಭಿಷೇಕ ನೆರವೇರಿತು. ಈ ವರ್ಷ ವಿಶೇಷವಾಗಿ ಚೌಕಿ ಅಲಂಕಾರ ಪೂಜೆ ನೆರವೇರಿಸಲಾಗಿದೆ ಎಂದು ಅರ್ಚಕರಾದ ನಿಂಗಯ್ಯ ಸ್ವಾಮಿಗಳು ತಿಳಿಸಿದರು.
ಈ ಚೌಕಿ ಅಲಂಕಾರವು ಸದ್ಭಕ್ತರ ಗಮನ ಸೆಳೆಯಿತು. ದೇವಾಲಯದ ಹಿಂಬದಿಯಿರುವ ಶ್ರೀಬಸವೇಶ್ವರ ದೇವಾಲಯದ ಮುಂಭಾಗ 3ದಿನಗಳವರೆಗೆ ಶಿವಪಂಚಾಕ್ಷರ ಮಂತ್ರ ಪಠಣ ಕಾರ್ಯವು ಶ್ರೀಅಲ್ಲಮಪ್ರಭುದೇವರ ದೇವಾಲಯ ಅರ್ಚಕರಿಂದ, ಸಕಲ ಸದ್ಭಕ್ತರಿಂದ ಯಶಸ್ವಿಯಾಗಿ ನೆರವೇರಿತು.
ಕಲ್ಲಟ್ಟಿಯಲ್ಲಿ ಶ್ರೀಆದಿಶಕ್ತಿ ತರುಣ ಮಂಡಳಿಯವರು ಶ್ರೀಆದಿಶಕ್ತಿದೇವಿ ಮೂರ್ತಿಪ್ರತಿಷ್ಠಾಪಿಸಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

Social Plugin