ಈ ಹಿಂದೆ ಕಿಚ್ಚ ಸುದೀಪ್ ರವರ ನಟನೆಯ " "ಪೊಲೀಸ್ ಸ್ಟೋರಿ 3" ಸಿನಿಮಾವನ್ನು ಬಾಂಬೆ ಕರ್ನಾಟಕ ಪ್ರಾಂತ್ಯಕ್ಕೆ ಶುಕ್ರ ಫಿಲಂಸ್ ಸೋಮಣ್ಣ ಅವರು ಹಂಚಿಕೆ ಪಡೆದಿದ್ದರು. ಅಂದು ಚಿತ್ರ ಬಿಡುಗಡೆ ಹಿಂದಿನ ದಿನ ಗಾಂಧಿನಗರದ ವಿತರಕರೊಬ್ಬರು ಚಿತ್ರಮಂದಿರದ ಮಾಲೀಕರಿಗೆ ಕರೆಮಾಡಿ ಅವರ ಕೈಯಲ್ಲಿ ಚಿತ್ರ ಬಿಡುಗಡೆ ಮಾಡಲು ಆಗಲ್ಲಾ ಎಂದು ಹೇಳಿ ಅವರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು. ಕೂಡಲೇ ಶುಕ್ರ ಫಿಲಂಸ್ ಸೋಮಣ್ಣ ನವರಿಗೆ ಫೋನ್ ಮಾಡಿ ವಿಷಯವನ್ನು ತಿಳಿಸಿದ ಮಾಲೀಕರು, ಸೋಮಣ್ಣ ನವರ ಮೇಲೆ ನಮಗೆ ನಂಬಿಕೆ ಇದೆ, ನಾವು ಅವರ ಚಿತ್ರವನ್ನೇ ಹಾಕುವುದು ಎಂದು ಅವರ ಮುಖಕ್ಕೆ ಹೊಡೆದಂತೆ ಹೇಳಿ ಕಿಚ್ಚ ಸುದೀಪ್ ರವರ ನಟನೆಯ " "ಪೊಲೀಸ್ ಸ್ಟೋರಿ 3" ಹಾಕಿದರು. ಹುಬ್ಬಳ್ಳಿ ನಗರದಲ್ಲಿ ಚಿತ್ರಮಂದಿರಗಳು ಸಿಗದಂತೆ ಇನ್ನಿಲ್ಲದ ಕಸರತ್ತು ಮಾಡಿದರು, ಆಗ ಅವರ ನೆರವಿಗೆ ಬಂದದ್ದು ಶ್ರೀ ರಾಜು ಸೌಕತ್ ರವರು ಶ್ರೀ ರಾಯ್ಕರ್ ರವರಿಗೆ ಹೇಳಿ ಹುಬ್ಬಳ್ಳಿಯಲ್ಲಿ ಚಿತ್ರ ಬಿಡುಗಡೆಯಾಗಲು ಸಹಕಾರ ನೀಡಿದರು. ಅವರ ಉಪಕಾರ ಸೋಮಣ್ಣ ನವರು ಎಂದೆಂದಿಗೂ ಮರೆಯಲಾಗದು ಎನ್ನುತ್ತಾರೆ. ಕಿಚ್ಚ ಸುದೀಪ್ ರವರ ನಟನೆಯ  ಅಂದಿನ " "ಪೊಲೀಸ್ ಸ್ಟೋರಿ 3" ಯ ಬಿಡುಗಡೆಯ ಸಂದರ್ಭದಲ್ಲಿಯ ಹಾಗೂ ಇಂದಿನ " ಕೋಟಿಗೊಬ್ಬ 3" ಬಿಡುಗಡೆಯ ಸಂದರ್ಭದಲ್ಲಿ ತೊಂದರೆ ಕೊಡುವವರು ಇದ್ದಾರೆ, ಒಳ್ಳೆಯತನಕ್ಕೆ ಜಯ ಇದ್ದೆ ಇರುತ್ತೆ.