ತೇರದಾಳದ ಶ್ರೀಅಲ್ಲಮಪ್ರಭು ನೂತನ ದೇವಸ್ಥಾನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಬಡಕುಂದ್ರಿ ಗ್ರಾಮಸ್ಥರಿಂದ ದೇಣಿಗೆ ಸಮರ್ಪಣೆ
ತೇರದಾಳ : ಪಟ್ಟಣದ ಆರಾಧ್ಯ ದೈವ ಶ್ರೀಅಲ್ಲಮಪ್ರಭು ದೇವರ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣ ಕಾರ್ಯ ಸುಮಾರು 5ಕೋಟಿ ರೂ.ವೆಚ್ಚದಲ್ಲಿ ಭರದಿಂದ ಸಾಗುತ್ತಿದ್ದು, ಸಾಕಷ್ಟು ಭಕ್ತರು ದೇಣಿಗೆ ನೀಡುತ್ತಿದ್ದಾರೆ. ಅದರಂತೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಸದ್ಭಕ್ತರು ಗ್ರಾಮದಲ್ಲಿ ಕೂಡಿಸಿದ 2ಲಕ್ಷ 35 ಸಾವಿರ ರೂ.ಗಳನ್ನು ವಂತಿಗೆಯನ್ನು ಇಂದು ದೇವಸ್ಥಾನದ ಟ್ರಸ್ಟ್ ಕಮೀಟಿಯವರು ಹಾಗೂ ಅರ್ಚಕರ ಸಮ್ಮುಖದಲ್ಲಿ ಸಲ್ಲಿಸಿದರು. 
  ಈ ಸಂದರ್ಭದಲ್ಲಿ ಟ್ರಸ್ಟ್‍ನ ಉಪಾಧ್ಯಕ್ಷರಾದ ರಾಜೇಂದ್ರ ಗುಡಗುಂಟಿ, ಪ್ರವೀಣ ನಾಡೌಡ, ಅಪು ಮಂಗಸೂಳಿ, ಎಮ್.ಸಿ.ಕುಂಚಗನೂರ, ಬಡಕುಂದ್ರಿಯ ಶಿರಸಪ್ಪ ವಾಸೇದಾರ, ಪರಸಪ್ಪಪ ವಾಸೇದಾರ, ಪರಪ್ಪ ಮಗದುಮ್ಮ, ಚಿದಾನಂದ ಮಾನಗಾವಿ, ಅಪ್ಪುಗೌಡ ಪಾಟೀಲ, ಕೆಂಪಣ್ಣ ದೇಸಾಯಿ, ಅಜೀತ ವಾಸೇದಾರ, ಮಹಾನಿಂಗ ಜಡಿ, ಪ್ರಕಾಶ ಕಾಲತಿಪ್ಪಿ, ಬಾಬು(ಪರಯ್ಯ) ಭಾಂವಿ, ರಾಜು ಭಾಂವಿ, ಬಸಯ್ಯ ಭಾಂವಿ ಸೇರಿದಂತೆ ಬಡಕುಂದ್ರಿಯ ಗ್ರಾಮಸ್ಥರು ಹಾಗೂ ದೇವಸ್ಥಾನದ ಅರ್ಚಕರು ಇದ್ದರು.