ತೇರದಾಳ ಪಟ್ಟಣದಲ್ಲಿ ಶಾಸಕರ ಸಂಪರ್ಕ ಕಚೇರಿಯನ್ನು ಉದ್ಘಾಟಿಸಿದ ಶಾಸಕ ಸಿದ್ದು ಸವದಿ ಹಾಗೂ ಮುಖಂಡರು.
ರಾಜ್ಯದಲ್ಲಿಯೇ ಮಾದರಿ ಮತಕ್ಷೇತ್ರ ನನ್ನ ಬಹುದಿನಗಳ ಸಂಕಲ್ಪ
ತೇರದಾಳ : ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ತೇರದಾಳ ನಗರಕ್ಕೆ 1 ಕೋಟಿ ರೂ ಅನುದಾನ ಮಂಜೂರಾಗಿದ್ದು, ಶೈಕ್ಷಣಿಕ ದೃಷ್ಠಿಯಿಂದ ಸರಕಾರಿ ಹೆಣ್ಣು ಮಕ್ಕಳ ಪ್ರೌಢ ಶಾಲೆಗೆ ಪ್ರಸ್ತಾವಣೆ ಸಲ್ಲಿಸಿದ್ದು, ಪದವಿ ಮಹಾವಿದ್ಯಾಲಯದ ಕಂಪೌಂಡ ಗೋಡೆ ನಿರ್ಮಿಸಲು 50 ಲಕ್ಷ ಅನುದಾನ ಮಂಜೂರಿಸಿದ್ದು ಹಾಗೂ ಪದವಿ ಮಹಾವಿದ್ಯಾಲಯಕ್ಕೆ ಅಗತ್ಯವಿರುವ 1 ಎಕರೆ ಹೆಚ್ಚಿನ ಭೂಮಿಯನ್ನು ಮಂಜೂರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಅಲ್ಪಸಂಖ್ಯಾತ ಮುರಾರ್ಜಿ ಶಾಲೆಗೆ 7 ಕೋಟಿ ಅನುದಾನ ಮಂಜೂರಾಗಿದ್ದು ಸದ್ಯದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಮತಕ್ಷೇತ್ರದ ಅಭಿವೃದ್ಧಿಗಾಗಿ ಸರಕಾರದಿಂದ ಗರಿಷ್ಠ ಪ್ರಮಾಣದಲ್ಲಿ ಅನುದಾನವನ್ನು ಮಂಜೂರಿಸಲು ಪ್ರಯತ್ನಿಸಿದ್ದು, ತೇರದಾಳ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಮತಕ್ಷೇತ್ರ ಮಾಡಬೇಕೆಂದು ನನ್ನ ಬಹುದಿನಗಳ ಸಂಕಲ್ಪವಾಗಿದೆ ಎಂದು ಶಾಶಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವ ಹಾಗೂ ಸಕಾಲದಲ್ಲಿ ಪರಿಹರಿಸುವ ಸದುದ್ದೇಶದಿಂದ ಪಟ್ಟಣದ ಹೃದಯ ಭಾಗದಲ್ಲಿರುವ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕರ ಸಂಪರ್ಕ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಜನಸೇವೆಯೇ ಜನಾರ್ದನ ಸೇವೆಯಂಬ ಉಕ್ತಿಯನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ತೇರದಾಳ ಪಟ್ಟಣದಲ್ಲಿ ಶಾಸಕರ ಸಂಪರ್ಕ ಕಛೇರಿಯನ್ನು ಪ್ರಾರಂಭಿಸಿದ್ದು, ಪ್ರತಿ ಸೋಮವಾರ ಬೆಳಿಗ್ಗೆ 10:00 ರಿಂದ 11:00 ಗಂಟೆಗೆ ಕಚೇರಿಯಲ್ಲಿ ಖುದ್ದಾಗಿ ಶಾಸಕರೆ ಸಾರ್ವಜನಿಕರ ಸಂಪರ್ಕಕ್ಕೆ ಲಭ್ಯವಿರುವುದಾಗಿ ತಿಳಿಸಿದ ಅವರು ಸಾರ್ವಜನಿಕರಿಗಾಗಿ ಕಚೇರಿ ದಿನದ 24 ಗಂಟೆ ಕಾರ್ಯಭಾರ ನಿರ್ವಹಿಸುವಂತೆ ಕ್ರೀಯಾ ಯೋಜನೆಯನ್ನು ರೂಪಿಸಿದ್ದು, ರಜೆ ರಹಿತವಾಗಿ ಪ್ರತಿದಿನ ಸಾರ್ವಜನಿಕರ ಅಹವಾಲುಗಳನ್ನು ಕಚೇರಿಯಲ್ಲಿ ಸ್ವೀಕರಿಸಲಾಗುವುದು. ಈ ನಿಟ್ಟಿನಲ್ಲಿ ಅಭಿವೃದ್ಧಿಯ ಜೊತೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವುದು ನನ್ನ ಕರ್ತವ್ಯವಾಗಿದ್ದು, ಸಾರ್ವಜನಿಕರು ಪಕ್ಷಾತೀತವಾಗಿ ನಿರ್ಭೀತರಾಗಿ ತಮ್ಮ ಅಹವಾಲುಗಳನ್ನು ಕಚೇರಿಗೆ ಸಲ್ಲಿಸಲು ಸೂಚಿಸಿದ ಅವರು ಜನರ ಸೇವೆಗೆ ಸದಾ ಸಿದ್ಧರಾಗಿರುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಮಹಾವೀರ ಕೊಕಟನೂರ, ಪ್ರಭಾರ ಅಧ್ಯಕ್ಷ ರಾಮಣ್ಣ ಹಿಡಕಲ್, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ತುಬಚಿ ಮುಖಂಡರಾದ ನಿಂಗಪ್ಪ ಮಾಲಗಾಂವಿ, ಸದಾಶಿವ ಹೊಸಮನಿ, ಶಂಕರ ಕುಂಬಾರ, ಬಾಳು ದೇಶಪಾಂಡೆ, ಸುರೇಶ ರೇಣಕೆ, ಈಶ್ವರ ಕಿತ್ತೂರ, ರಮೇಶ ಧರೆಣ್ಣವರ, ಪ್ರಭು ಬಾಗಿ, ಲಕ್ಕಪ್ಪ ಪಾಟೀಲ್, ಬಸಪ್ಪ ಮುಕರಿ, ಲಕ್ಷ್ಮಣ ನಾಯಕ್, ಸಚಿನ ಕೊಡತೆ, ಸಿದ್ದು ಅಮ್ಮಣಗಿ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Social Plugin