ತೇರದಾಳ ಪಟ್ಟಣದ ಕಲ್ಲಟ್ಟಿ ಗಲ್ಲಿಯ ಆದಿಶಕ್ತಿ ತರುಣ ಮಂಡಳಿಯ 24ನೇ ವಾರ್ಷಿಕೋತ್ಸವ ಹಾಗೂ ದಸರಾ ಉತ್ಸವ ನಿಮಿತ್ಯ ಶ್ರೀಆದಿಶಕ್ತಿದೇವಿಯ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆಗೆ ವಿದ್ಯಾಧರ ಸವದಿ ಚಾಲನೆ ನೀಡಿದರು.
ತೇರದಾಳ : ಪಟ್ಟಣದ ಕಲ್ಲಟ್ಟಿ ಗಲ್ಲಿಯ ಆದಿಶಕ್ತಿ ತರುಣ ಮಂಡಳಿಯ 24ನೇ ವಾರ್ಷಿಕೋತ್ಸವ ಹಾಗೂ ದಸರಾ ಉತ್ಸವ ನಿಮಿತ್ಯ ಆದಿಶಕ್ತಿದೇವಿಯ ಪ್ರತಿಷ್ಠಾಪನೆ ಸಂದರ್ಭದಲ್ಲಿ ಆದಿಶಕ್ತಿ ದೇವಿ ಮೂರ್ತಿಯನ್ನು ಪಟ್ಟಣದ ಶ್ರೀನೀಲಕಂಠೇಶ್ವರ ದೇವಸ್ಥಾನದಿಂದ ಚಾಲನೆಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸಂಭ್ರಮ ಸಡಗರದಿಂದ ಕಲ್ಲಟ್ಟಿಗೆ ತರಲಾಯಿತು.
ಭಾಜಪ ಜಿಲ್ಲಾ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಸವದಿ ಹಾಗೂ ಮಂಡಳಿಯ ಸರ್ವ ಸದಸ್ಯರು ಹಾಗೂ ಪಟ್ಟಣದ ಪ್ರಮುಖರು ಶ್ರೀಆದಿಶಕ್ತಿ ದೇವಿ ಮೂರ್ತಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಸಂಸ್ಕೃತಿಯ ಪ್ರತೀಕವಾದ ದಸರಾ ಹಬ್ಬವು ನಾಡಿನ ಸಮಸ್ತ ಜನತೆಗೆ ಸುಖ, ಶಾಂತಿ, ಸಮೃದ್ಧಿಯನ್ನು ದಯಪಾಲಿಸಲೆಂದು ನಾಡಿನ ಜನತೆಗೆ ಶುಭ ಹಾರೈಸಿದರು.
ಶ್ರೀಆದಿಶಕ್ತಿ ತರುಣ ಮಂಡಳಿಯ ಅಧ್ಯಕ್ಷ ನಿವೃತ್ತ ಯೋಧರು ಈರಪ್ಪ ತಾರದಾಳ, ಮಹೇಶ ಅಥಣಿ, ಸದಾಶಿವ ಹೊಸಮನಿ, ಸಂಗಮೇಶ ಕಾಲತಿಪ್ಪಿ, ಬಸವರಾಜ ಮುದಕನ್ನವರ, ನಿಂಗಪ್ಪ ನಿಲಜಗಿ, ರಾಜು ಹೊಸಮನಿ, ನಿಂಗಪ್ಪ ಮಲಾಬದಿ, ಪರಪ್ಪ ಅಥಣಿ, ಅಲ್ಲಪ್ಪ ಇಂಗಳಗಿ, ನಾಗಪ್ಪ ಹೊಸಮನಿ, ಸಂಗಮೇಶ ನಿವರಗಿ, ಅಕ್ಷಯ ಗೌಡರ, ನಾಗರಾಜ ಮುದಕನ್ನವರ, ಪರಸಪ್ಪ ಹೊಸಮನಿ, ಸೇರಿದಂತೆ ಪಟ್ಟಣದ ಪ್ರಮುಖರು ಹಾಗೂ ಆದಿಶಕ್ತಿ ತರುಣ ಮಂಡಳಿಯ ಪದಾಧಿಕಾರಿಗಳು, ಯುವಕರು ಮೆರವಣಿಗೆಯಲ್ಲಿ ಭಾಗವಹಿದ್ದರು. ದಾರಿಯುದ್ದಕ್ಕೂ ಮಹಿಳೆಯರು ನೀರು ಹಾಕಿ ಸಕ್ಕರಿ ಪುಠಾಣಿ ನೈವಿದ್ಯೆ ಸಲ್ಲಿಸಿದರು.

Social Plugin