ರಬಕವಿ-ಬನಹಟ್ಟಿ - ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಸುರಕ್ಷಿತವಾದ, ಶುದ್ಧ ಕುಡಿಯುವ ನೀರನ್ನು ಒದಗಿಸಲು ಮಳೆಯ ನೀರು ಕೊಯ್ಲು ಯೋಜನೆ, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಬೆಳೆ ಬೆಳೆಯುವ ವಿಧಾನ ಕುರಿತು ತರಬೇತಿ ನೀಡುವುದು, ಸಾವಯವ ಪದ್ಧತಿ ಬೇಸಾಯ ಅಳವಡಿಸಲು ತರಬೇತಿ, ಸ್ವಾವಲಂಬಿಗಳಾಗಿ ಬದುಕಲು ತರಬೇತಿ ಮತ್ತು ಸಹಾಯ, ಅರಿಸಿನ ಮತ್ತು ಕಬ್ಬು ಬೆಳೆಯುವ ವಿನೂತನ ಬೇಸಾಯ ಅಳವಡಿಕೆ ತರಬೇತಿ, ಪೌಷ್ಟಿಕ ಕೈತೋಟ ನಿರ್ಮಾಣ ಮುಂತಾದ ಸೌಲಭ್ಯಗಳನ್ನು ಕೊಡುಗೆಯಾಗಿ ನೀಡುವುದೇ ಆಯ್.ಸಿ.ಆಯ್.ಸಿ.ಆಯ್ ಪೌಂಡೇಶನ್ ಮುಖ್ಯ ಉದ್ದೇಶವಾಗಿದೆ ಎಂದು ಜಮಖಂಡಿ ವಿಭಾಗದ ಆಯ್.ಸಿ.ಆಯ್.ಸಿ.ಆಯ್ ಫೌಂಡೇಶನ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಪುಷ್ಪಾ ಕಾಟಿಗಲ್ ಅವರು ಹೇಳಿದರು 
  ಅವರು ಬುಧವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,ಸಾಲಿಮನಿ ತೋಟ ಹೊಸೂರ ಶಾಲೆಯ ಆವರಣದಲ್ಲಿ ಮಳೆ ನೀರಿನ ಕೊಯ್ಲು ಘಟಕ ಉದ್ಘಾಟನೆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
 ರೂ 7.5 ಲಕ್ಷ ವೆಚ್ಚದ ಮಳೆ ನೀರು ಕೊಯ್ಲು ಘಟಕ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಒದಗಿದ್ದು ಆಯ್.ಸಿ.ಆಯ್.ಸಿ.ಆಯ್ ಪೌಂಡೇಶನ್ ಕಾರ್ಯ ಶ್ಲಾಘನೀಯ ಅವರಿಗೆ ಶಿಕ್ಷಣ ಇಲಾಖೆಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಣ ಸಂಯೋಜಕರಾದ ಶ್ರೀ ಎಸ್.ಬಿ.ಬುರ್ಲಿ ಅವರು ಸಲ್ಲಿಸಿದರು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಮುಂದೆ ದೇಶ ಅಭಿವೃದ್ಧಿಗೆ ಶ್ರಮಿಸುವ ಪ್ರಜೆಗಳು, ಅದಕ್ಕಾಗಿ ಉತ್ತಮ ಆರೋಗ್ಯವಂತ ಮಗುವನ್ನು ದೇಶ ಸೇವೆಗಾಗಿ ನೀಡುವ ಉದ್ದೇಶದಿಂದ ಪೌಷ್ಟಿಕಾಂಶ ಆಹಾರಕ್ಕಾಗಿ ಪೌಷ್ಟಿಕ ಕೈತೋಟ ನಿರ್ಮಾಣದ ಪೌಂಡೇಶನ್ ಕಾರ್ಯ ಸ್ವಾಗತಾರ್ಹ ಎಂದು ಅವರು ಹೇಳಿದರು.
   ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಕಾಂತ ಹಿಂಡಿ ಮಳೆ ನೀರು ಕೊಯ್ಲು ಘಟಕ ಉದ್ಘಾಟಿಸಿದರು.ಅನೀಲ ಮಿರ್ಜಿ ನಿರೂಪಿಸಿ ವಂದಿಸಿದರು.
ಸಮಾರಂಭದಲ್ಲಿ ಜಮಖಂಡಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಶ್ರೀಮತಿ ಹಾದಿಮನಿ ಮೇಡಂ,ಇಸಿಓ ಎಸ್.ಬಿ.ಬುರ್ಲಿ, ಅಂಗನವಾಡಿ ಸುಪರವೈಜರ್ ಸಿ.ಜಿ.ಹಿರೇಮಠ,ಕೃಷಿ ಅಧಿಕಾರಿ ಕೆ.ಎ.ಜಮಖಂಡಿ,ಸಿ.ಆರ್.ಪಿ ಎಂ.ಎಂ.ಜಂಗ್ಲಿ,ಮುಖ್ಯ ಗುರುಮಾತೆ ಶ್ರೀಮತಿ ಎಸ್.ಬಿ.ಕಮ್ಮಾರ ಹಾಗೂ ರಾಮಣ್ಣ ಘಟ್ನಟ್ಟಿ,ವೆಂಕನಗೌಡ ಪಾಟೀಲ,ಸಂಜು ಆಲಗೂರ,ಪಾಂಡು ಹಿಪ್ಪರಗಿ,.ಬಿ.ಬಿ.ಕಲ್ಲೋಳ್ಳಿ, ಶ್ರೀಮತಿ ಬಿ.ಎನ್.ಮೋರಿ, ಪೌಂಡೇಶನ್ ಸಿಬ್ಬಂದಿ ವರ್ಗದವರಾದ ಅನೀಲ ಮಿರ್ಜಿ,ಶೀತಲ ಕೋನಗೊಂಡ,ಗಿರಮಲ್ಲಪ್ಪ ಹಳ್ಳೂರ ಹಾಗೂ ಜಿಲ್ಲಾ ಶ್ರೇಷ್ಠ ಕೃಷಿ ಪುರಸ್ಕೃತರಾದ ಮುತ್ತಪ್ಪ ಕಂಕಣವಾಡಿ ಹಾಗೂ ಅಂಗನವಾಡಿ ಶಿಕ್ಷಕಿಯರು,ಸಹಾಯಕರು,ಶಾಲೆಯ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.