ವಿಶ್ವೇಶ್ವರಯ್ಯನವರ ಸಾಧನೆ ಅಗಾಧವಾದುದು

 
ತೇರದಾಳ : ಸರ್ ಎಂ.ವಿಶ್ವೇಶ್ವರಯ್ಯನವರು ದೇಶಕ್ಕೆ ನಿಡಿದ ಕೊಡುಗೆ ಅಪಾರ. ಅವರ ಸಾಧನೆಯನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಮೂಲಕ ಸಾಧಕರನ್ನಾಗಿಸಬೇಕೆಂದು, ಇಂಜಿನಿಯರರಿಗೆ ಸರ್.ಎಂ.ವಿಶ್ವೇಶ್ವರಯ್ಯನವರು ಸ್ಪೂರ್ತಿಯಾಗಿದ್ದಾರೆಂದು ಜೆ.ವಿ.ಮಂಡಳ ಅಧ್ಯಕ್ಷ ಟಿ.ಸಿ.ಪಡಸಲಗಿ ಹೇಳಿದರು.

ಪಟ್ಟಣದ ಶ್ರೀಬಾಹುಬಲಿ ವಿದ್ಯಾಪೀಠಾಂತರ್ಗತ ಜೆ.ವ್ಹಿ.ಮಂಡಳದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂಜಿನಿಯರ್ಸ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಜಗತ್ತು ಕಂಡ ಪ್ರತಿಭಾವಂತ ಇಂಜಿನಿಯರ್ಸಗಳಲ್ಲಿ ಒಬ್ಬರೆ ಒಬ್ಬ ಸರ್ ಎಮ್ ವಿಶ್ವೇಶ್ವರಯ್ಯನವರು ಮಾತ್ರ. ಅವರ ಅಪಾರ ಸಾಧನೆ, ಬುದ್ಧಿ ಶಕ್ತಿ, ಅವರ ಕಾರ್ಯದ ಚಾಕಚಕ್ಕತೆಯನ್ನು ವಿಶ್ಲೇಶಿಸಿದರು.

 ಪಾಲಿಟೆಕ್ನಿಕ್‍ನ ಚೇರಮನ್ನರಾದ ನಿಲೇಶ ದೇಸಾಯಿಯವರು, ಆಡಳಿತ ಮಂಡಳಿಯ  ಕಾರ್ಯಾಧ್ಯಕ್ಷರಾದ ಡಿ.ಆರ್.ಪಾಟೀಲ್, ಆಡಳಿತ ಮಂಡಳಿಯ ಸದಸ್ಯರಾದ ಡಾ. ಎಸ್.ಕೆ.ಕಾಗಿ ಇದ್ದರು.

        ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ವಿಜಯ ಶಿಗ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಸ್ವೀಕಾರ ಮಾಡಿಸಿ ದೇಶ ನಿರ್ಮಾಣದಲ್ಲಿ ಇಂಜಿನಿಯರ್ಸ ಕಾರ್ಯ ಮಹತ್ತರವಾದದ್ದು ಹೀಗಾಗಿ ಅವರು ಮಾಡು ಕಾರ್ಯದಲ್ಲಿ ಶ್ರಧ್ಧೆ, ಭಕ್ತಿ, ಮತ್ತು ಪ್ರಾಮಾಣಿಕರವಾಗಿ ಸೇವೆ ಸಲ್ಲಿಸಿ ದೇಶವನ್ನು ಅಭಿವೃದ್ದಿ ಪಥದಲ್ಲಿ ಮುನ್ನಡೆಸಬೇಕೆಂದು ಹೇಳಿದರು.

ವಿದ್ಯಾರ್ಥಿಗಳಾದ ನಾಗೇಶ ಚೌದರಿ, ಪವನ್ ಕಟಾವಕರ, ಸ್ವಾಗತಿಸಿ, ನಿರೂಪಿಸಿದರು.

----------------------------------