ತೇರದಾಳ ಸಮೀಪದ ಗೋಲಭಾವಿ ಗ್ರಾಮದ ಸರಕಾರಿಕನ್ನಡ ಹಿರಿಯ ಪ್ರಾಥಮಿಕ ಶಾಲೆ ತೋಟ 3 ರಲ್ಲಿ ಹಮ್ಮಿಕೊಂಡ ಸನ್ಮಾನಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಜಿಲ್ಲಾ ಮಟ್ಟದಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಕೆ.ಪಿ.ಪೂಜಾರಿಮಾತನಾಡಿದರು.
ಮಾಡಿದ ಕೆಲಸ ನಮ್ಮನ್ನು ಗುರುತಿಸುವಂತಾಗಬೇಕು
ತೇರದಾಳ : ನಾವು ಮಾಡುವ ಕೆಲಸಗಳು ಶೃದ್ಧಾಭಕ್ತಿಯಿಂದ ಕೂಡಿದಾಗ ಅದು ನಮ್ಮನ್ನು ಗುರುತಿಸಿದಾಗ ಅದು ಎತ್ತರ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆಎಂದು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಕೆ.ಪಿ.ಪೂಜಾರಿ ಹೇಳಿದರು.
ಅವರು ಸಮೀಪದ ಗೋಲಭಾವಿ ಗ್ರಾಮದ ಸರಕಾರಿಕನ್ನಡ ಹಿರಿಯ ಪ್ರಾಥಮಿಕ ಶಾಲೆ ತೋಟ 3 ರಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಶಿಕ್ಷಕ ವೃತ್ತಿ ಪವಿತ್ರವಾದುದು, ಮಗುವಿನ ಏಳಿಗೆಗಾಗಿ ಶಿಕ್ಷಕ ಸದಾ ಹಾತೊರೆಯುತ್ತಿರಬೇಕು. ವಿಶಾಲವಾದ ಹೃದಯವುಳ್ಳವರು ಪ್ರತಿಯೊಬ್ಬರ ಮನಸ್ಸನ್ನುಗೆಲ್ಲುವರು, ಪ್ರಶಸ್ತಿ ದೊರಕಿರುವುದು ಖುಷಿ ತಂದಿರುವುದರಜೊತೆ ಜವಾಬ್ದಾರಿಗಳು ಹೆಚ್ಚಿವೆಎಂದರು.
ಈ ಸಂದರ್ಭದಲ್ಲಿ ಗೋಲಭಾವಿ ಗ್ರಾಮದ ಸರಕಾರಿಕನ್ನಡ ಹಿರಿಯ ಪ್ರಾಥಮಿಕ ಶಾಲೆ ತೋಟ 3 ರ ಮುಖ್ಯಗುರು ಪಿ ಎಂ.ಅಜಕ್ಕನವರ, ಗೋಲಭಾವಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ತೋಟ 2 ರ ಮುಖ್ಯಗುರು ಎಸ್.ಬಿ.ಪುಲೋಜಿ ,ಶಿಕ್ಷಕ ಜಿ.ಬಿ.ಸಂಗೊಂದಿ, ಆರ್.ಟಿ.ಬಣಜವಾಡ, ಆರ್.ಎಸ್.ಭೋವಿ ಇದ್ದರು.

Social Plugin