ಹಿಂದಿ ದಿವಸ ಆಚರಣೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಮಹಿಳಾ ಶಕ್ತಿ ಸಂಘದಿಂದ ರಾಜ್ಯಪಾಲರಿಗೆ ತೇರದಾಳ ಉಪತಹಶೀಲ್ದಾರ ಶ್ರೀಕಾಂತ ಮಾಯನ್ನವರ ಮೂಲಕ ಮನವಿ ಸಲ್ಲಿಸಿದರು. 

ಹಿಂದಿ ದಿವಸ ಆಚರಣೆ ಖಂಡಿಸಿ ರಾಜ್ಯಪಾಲರಿಗೆ ಮನವಿ 

ತೇರದಾಳ : ಕರ್ನಾಟಕದಲ್ಲಿ ಹಿಂದಿ ದಿವಸ ವಿರೋಧಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ತೇರದಾಳ ಘಟಕ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಮಹಿಳಾ ಶಕ್ತಿ ಸಂಘದ ನೇತೃತ್ವದಲ್ಲಿ ಪಟ್ಟಣದ ನಾಡಕಛೇರಿಗೆ ನಿಯೋಗದಲ್ಲಿ ತೆರಳಿದ ಕಾರ್ಯಕರ್ತರು ಕನ್ನಡ ಬಾವುಟಗಳನ್ನು ಹಿಡಿದು ಉಪತಹಶೀಲ್ದಾರ ಶ್ರೀಕಾಂತ ಮಾಯನ್ನವರ ಇವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

  ಈ ಸಂಧರ್ಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಪ್ರತಿಭಟನಾಕಾರರು ಗತಕಾಲದ ಇತಿಹಾಸ ಹೊಂದಿರುವ ನಮ್ಮ ಮಾತೃ ಭಾಷೆ ಕನ್ನಡ ಅನ್ಯ ಭಾಷೆಗಳ ಪ್ರಭಾವಕ್ಕೆ ಒಳಗಾಗದಂತೆ ಸಂರಕ್ಷಿಸುವ ನಿಟ್ಟಿನಲ್ಲಿ ಸಾವಿರಾರು ಕವಿಗಳು ,ಚಿಂತಕರು, ಸಾಹಿತಿಗಳು ಹಾಗೂ ಕನ್ನಡಾಭಿಮಾನಿಗಳು ತಮ್ಮದೇಯಾದ ಕೊಡುಗೆಯನ್ನು ನೀಡಿದ್ದು ಕರುನಾಡಿನಲ್ಲಿ ಕನ್ನಡವೇ ಪ್ರಧಾನವಾಗಿರಲಿ ಕನ್ನಡ ನೆಲದಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಥಮ ಪ್ರಾಧಾನ್ಯತೆಯಿರಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾತೃ ಭಾಷೆ ಬಾರದ ಹೊರ ರಾಜ್ಯದ ಅಧಿಕಾರಿಗಳನ್ನು ನೇಮಿಸುತ್ತಿದ್ದು ಕನ್ನಡ ಭಾಷೆಯನ್ನು ಅರಿಯದ ಅವರು ಜರನ್ನು ಹಿಂದಿಯಲ್ಲಿ ಮಾತನಾಡುವಂತೆ ಒತ್ತಾಯಿಸುತ್ತಿರುವುದು ಖಂಡನೀಯ ಕೂಡಲೆ ಕನ್ನಡಿಗ ಅಧಿಕಾರಿಗಳನ್ನು ನೇಮಿಸಬೇಕು ಅಡಳಿತ ಭಾಷೆ ಕನ್ನಡವಾಗಿರುವಂತೆ ಕಟ್ಟು ನಿಟ್ಟಿನ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದ ಅವರು ಪ್ರಾಚೀನ ಭಾಷೆಯ ಸಿರಿ ಸಂಸ್ಕøತಿಯನ್ನು ಹೊಂದಿರುವ ನಮ್ಮ ಮಾತೃ ಭಾಷೆ ಉಳಿಯಲಿ ಕನ್ನಡದ ಕಹಳೆ ಮೊಳಗಲಿ ಅನ್ಯ ಭಾಷೆಗಳನ್ನು ದೂರವಿಟ್ಟು ಪ್ರತಿಯೊಬ್ಬರು ಮಾತೃಭಾಷೆಯನ್ನು ಪ್ರೀತಿಸುವಂತಾಗಬೇಕೆಂದು ಕರೆ ನೀಡಿದರು.

 

  ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೇರದಾಳ ಘಟಕದ ಅಧ್ಯಕ್ಷ ಮೈನುದ್ದಿನ ಮೋಕಾಶಿ, ಡಾ.ಬಿ.ಆರ್ ಅಂಬೇಡ್ಕರ್ ಮಹಿಳಾ ಶಕ್ತಿ ಸಂಘದ ಅಧ್ಯಕ್ಷೆ ಅಂಬಿಕಾ ತೆಳಗಡೆ, ಕರವೇ ಉಪಾಧ್ಯಕ್ಷ ವಿಠ್ಠಲ ಸಿಂಗೆ, ಸದಸ್ಯರಾದ ರಾಜು ನಧಾಪ, ರಿಯಾಜ ಹನಗಂಡಿ, ದಯಾನಂದ ಹೊಸಕೋಟಿ, ಸುನೀಲ ಹಟ್ಟೆನ್ನವರ, ಗುಲಾಬ ಜಮಾದಾರ, ಲಕ್ಕಪ್ಪ ಭಜಂತ್ರಿ ಸೇರಿದಂತೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಹಾಗೂ ಮಹಿಳಾ ಸಂಘಗಳ ಸದಸ್ಯರು ಉಪಸ್ಥಿತರಿದ್ದರು. 

-----------------------