ಗಣೇಶೋತ್ಸವ ಅಂಗವಾಗಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಉಪ್ಪಿನಬೆಟಗೇರಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದರು. ಧರಣೇಂದ್ರ ಅಷ್ಟಗಿ, ಕಲ್ಲಯ್ಯ ವಿಭೂತಿಮಠ, ರಾಹುಲ್ ಅಷ್ಟಗಿ, ಮಡಿವಾಳಪ್ಪ ಸಿಂದೋಗಿ, ಮಂಜುನಾಥ ನವಲಗುಂದ, ಮಲ್ಲಯ್ಯ ತಿಗಡಿಮಠ ಇತರರಿದ್ದರು.
ಉಪ್ಪಿನಬೆಟಗೇರಿಗೆ ಗಣೇಶೋತ್ಸವ ಅಂಗವಾಗಿ ಸೋಮವಾರ ಭೇಟಿ ನೀಡಿದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಧರಣೇಂದ್ರ ಅಷ್ಟಗಿ, ಕಲ್ಲಯ್ಯ ವಿಭೂತಿಮಠ, ರಾಹುಲ್ ಅಷ್ಟಗಿ, ಮಡಿವಾಳಪ್ಪ ಸಿಂದೋಗಿ, ಮಂಜುನಾಥ ನವಲಗುಂದ ಇದ್ದರು.
ಉಪ್ಪಿನಬೆಟಗೇರಿ: ಕೋವಿಡ್ ನೆಪ ಹೇಳಿ ಹಿಂದೂ ಧರ್ಮದ ಹಬ್ಬಗಳ ಆಚರಣೆಗಳಿಗೆ ನಿಬರ್ಂಧ ಹೇರುತ್ತಿರುವುದು ಸರಿಯಲ್ಲ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಅವರು ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಶ್ರೀ ಸಿದ್ಧಿವಿನಾಯಕ ಹಾಗೂ ಆಂಜನೇಯ ದೇವಸ್ಥಾನದ ಬಳಿಯ ಶ್ರೀರಾಮನಗರ ಗಜಾನನ ಯುವಕ ಮಂಡಳದವರು ಹಮ್ಮಿಕೊಂಡಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋವಿಡ್ ನಿಯಮಗಳು ಕೇವಲ ಹಿಂದೂ ಧರ್ಮದ ಆಚರಣೆಗಳಿಗೆ ಮಾತ್ರ ಅನ್ವಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಚುನಾವಣೆ ವೇಳೆ ಸಭೆ, ಸಮಾರಂಭ, ಮೆರವಣಿಗೆ ಮಾಡುವ ರಾಜಕೀಯ ಪಕ್ಷಗಳಿಗೆ ಕೋವಿಡ್ ನಿಯಮ ಅನ್ವಯವಾಗುವುದಿಲ್ಲವೇ? ಎಂದು ಮುತಾಲಿಕ್ ಪ್ರಶ್ನಿಸಿದರು.
ಕೇಂದ್ರ ಮಂತ್ರಿಗಳ ಮಗಳ ಮದುವೆ ಸಮಾರಂಭದಲ್ಲಿ ಐದು ಸಾವಿರ ಜನ ಸೇರಿದ್ದರು. ಆಗ ಕೋವಿಡ್ ನಿಯಮಗಳು ಎಲ್ಲಿ ಹೋಗಿದ್ದವು? ಈಗ ಗಣಪತಿ ಆಚರಣೆಗೆ ಕೋವಿಡ್ ನಿಯಮದ ನೆಪ ಹೇಳಲಾಗುತ್ತಿದೆ. ಗಣೇಶೋತ್ಸವ ಆಚರಣೆ ನಮ್ಮ ಸಂಪ್ರದಾಯ. ನಾವು ಸಂಪ್ರದಾಯ ಬಿಟ್ಟು ಹೋಗುವುದಿಲ್ಲ. ಕೋವಿಡ್ ನಿಯಮಾವಳಿ ಪ್ರಕಾರವೇ ನಾವು ಗಣೇಶೋತ್ಸವ ಆಚರಿಸುತ್ತೇವೆ.
ಹಿಂದೂ ಧರ್ಮದ ಆಚರಣೆಗಳ ಮೇಲೆ ವಿನಾಕಾರಣ ನಿಬರ್ಂಧ ಹೇರುವುದು ಸರಿಯಲ್ಲ. ಅದನ್ನು ನಾವು ಸಹಿಸಿಕೊಳ್ಳುವುದೂ ಇಲ್ಲ. ಎಲ್ಲ ಹಿಂದೂ ಯುವಕರು ಮತಾಂತರದ ವಿರುದ್ಧ ಹೋರಾಟ ಮಾಡಬೇಕಿದೆ. ಮತಾಂತರ ಎನ್ನುವುದು ಪೆಡಂಭೂತದಂತೆ ಕಾಡುತ್ತಿದೆ. ಅದನ್ನು ವಿರೋಧಿಸುವ ಶಕ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ. ಉಪ್ಪಿನಬೆಟಗೇರಿ ಗ್ರಾಮದಲ್ಲಿ ಮೊದಲಿನ ಪದ್ಧತಿಯಂತೆ ಗಣಪತಿ ವಿಸರ್ಜನೆ ವಿಸರ್ಜನೆ ಮಾಡಿ ಎಂದು ಯುವಕ ಮಂಡಳಿಗಳ ಸದಸ್ಯರಿಗೆ ಮುತಾಲಿಕ್ ಅಭಯ ನೀಡಿದರು.
ಗ್ರಾಮದ ಹಿರಿಯರಾದ ಗಂಗಪ್ಪ ಜವಳಗಿ, ಗ್ರಾಪಂ.ಅಧ್ಯಕ್ಷೆ ಲಕ್ಷ್ಮೀ ಆಯಟ್ಟಿ, ಸದಸ್ಯ ಮಡಿವಾಳಪ್ಪ ಸಿಂದೋಗಿ, ಧರಣೇಂದ್ರ ಅಷ್ಟಗಿ, ಕಲ್ಲಯ್ಯ ವಿಭೂತಿಮಠ, ಮಂಜುನಾಥ ನವಲಗುಂದ, ರಾಹುಲ್ ಅಷ್ಟಗಿ, ಮಲ್ಲಯ್ಯ ತಿಗಡಿಮಠ, ರುದ್ರಯ್ಯ ಜವಳಿಮಠ, ಯಲ್ಲಪ್ಪ ಗುಡ್ಡದಮನಿ, ಆತ್ಮಾನಂದ ಕಿತ್ತೂರ, ಮಹಾದೇವ ದಿವಟಗಿ, ಈಶ್ವರ ಆಯಟ್ಟಿ, ಅಭಿನಂದನ ನವಲಗುಂದ, ಶಂಕರ ಕಿತ್ತೂರ, ಬಸಲಿಂಗ ನರಗುಂದ, ಮಂಜುನಾಥ ಆಯಟ್ಟಿ, ಸೇರಿದಂತೆ ಯುವಕ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮುತಾಲಿಕ್ ಅವರಿಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಗ್ರಾಮದ ಮೂರಕಲ್ ಅಗಸಿಯಿಂದ (ಮೊದಲ ಬಸ್ ನಿಲ್ದಾಣ) ಮುತಾಲಿಕ್ ಅವರು ಪಾದಯಾತ್ರೆ ಮೂಲಕ ಆಗಮಿಸಿದರು.
---------------------------------------



Social Plugin