*ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಶ್ರಾವಣ ಸಾಧನ  ಸಪ್ತಾಹ ಮುಕ್ತಾಯ* 



ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಶ್ರಾವಣ ಮಾಸದ ಸಾಧನ ಸಪ್ತಾಹವು ಶ್ರಾವಣ ಶುದ್ದ ಪ್ರತಿಪದ  ಸೋಮವಾರ 9 ಆಗಸ್ಟ್ 2021 ರಂದು ಬೆಳಿಗ್ಗೆ ನಾಲ್ಕು ಗಂಟೆಗೆ ಶ್ರೀ ಕ್ಷೇತ್ರ ಇಂಚಗೇರಿ ಮಠದ ಸದ್ಗುರುಗಳಾದ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ದಾಸಬೋದ ಹಾಗೂ  ಗದ್ದುಗೆಗಳ ಪೂಜೆಯೋಂದಿಗೆ ಪ್ರಾರಂಭವಾಗಿ ಶ್ರಾವಣ ಬಹುಳ ದ್ವಾದಶಿ ಶನಿವಾರ 4 ಸೆಪ್ಟೆಂಬರ್ 2021 ರಂದು ಪುಷ್ಪ ವೃಷ್ಠಿ ಯೊಂದಿಗೆ ಮಂಗಲಗೊಂಡಿತು. ತಿಂಗಳ ಪರ್ಯಂತ ಜರುಗಿದ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಕಾಕಡಾರತಿ ನಂತರ ಹನ್ನೊಂದು ಗಂಟೆಯವರೆಗೆ ಧ್ಯಾನ ನಂತರ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರಿಂದ ಹಾಗೂ ವಿವಿಧಡೆಯಿಂದ ಆಗಮಿಸಿದ ಮಹಾತ್ಮರಿಂದ ಪುರಾಣ.  ಪ್ರವಚನ ಮಧ್ಯಾಹ್ನದ ಭಜನೆ ನಂತರ ಪ್ರಸಾದ ಸಾಯಂಕಾಲ ಐದು ಗಂಟೆಯವರೆಗೆ ಶ್ರಮದಾನ. ವಿಶ್ರಾಂತಿ. ಸಾಯಂಕಾಲ ಐದು ಗಂಟೆಗೆ ಭಜನೆ ಪುರಾಣ ಪ್ರವಚನ ನಂತರ ರಾತ್ರಿ ಎಂಟು ಗಂಟೆಗೆ ಶ್ರೀ ಸಂತ ತುಕಾರಾಮ ಮಹಾರಾಜರ ಬಾರಾ ಅಭಂಗ ಭಜನೆ ನಂತರ ಪ್ರಸಾದದೊಂದಿಗೆ ದಿನಚರಿ ಮುಗಿಸಿ. ಅತ್ಯಂತ ವೈಶಿಷ್ಟ್ಯವಾಗಿ ಜರುಗಿದ  ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿ ದಿನ ಶ್ರೀ ಸದ್ಗುರು ಸಮರ್ಥ ರಾಮದಾಸ ಮಹಾರಾಜರ ದಾಸಬೋದ. ಶ್ರೀ ಸಂತ ವಿನೋಬಾ ಭಾವೆ ಅವರ ಗೀತಾ ಪ್ರವಚನ. ಶರಣ ಶರಣೆಯರಿಂದ ಭಕ್ತಿ ಸಂಗೀತ. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಈ ಸರ್ವ ಕಾರ್ಯಕ್ರಮಗಳು ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಜರುಗಿದವು. ಶನಿವಾರ  ದಿನಾಂಕ 4 ಸೆಪ್ಟೆಂಬರ್ 2021 ರಂದು ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಹೊರಟು  ಶ್ರೀ ಸದ್ಗುರು ಸಮರ್ಥ ಗುರುಲಿಂಗ ಜಂಗಮ ಮಹಾರಾಜರ ಶ್ರೀ ಸದ್ಗುರು ಸಮರ್ಥ ಭಾವೂಸಾಹೇಬ ಮಹಾರಾಜರ ಹಾಗೂ ಶ್ರೀ ಸದ್ಗುರು ಸಮರ್ಥ ಐನಾಥ ಪ್ರಭು ಮಹಾರಾಜರ ದೇವಸ್ಥಾನದಿಂದ ಶ್ರೀ ಸದ್ಗುರು ಸಮರ್ಥ ಗೀರಿಮಲ್ಲೇಶ್ವರ ಮಹಾರಾಜರ ಶ್ರೀ ಸದ್ಗುರು ಸಮರ್ಥ ಶಿವಪ್ರಭು ಮಹಾರಾಜರ ಹಾಗೂ ಶ್ರೀ ಸದ್ಗುರು ಸಮರ್ಥ ಗುರುಪುತ್ರೇಶ್ವರ ಮಹಾರಾಜರ ಶ್ರೀ ಸದ್ಗುರು ಸಮರ್ಥ ಜಗನ್ನಾಥ ಮಹಾರಾಜರ  ದೇವಸ್ಥಾನದವರೆಗೆ ನಂತರ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ ದೇವಸ್ಥಾನಕ್ಕೆ ಉತ್ಸವ ತಲುಪಿದ ನಂತರ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರು ತಮ್ಮ ಆಶೀರ್ವಚನದಲ್ಲಿ ಈ ಶ್ರಾವಣ ಮಾಸವು ಹೇಗೆ  ಅತ್ಯಂತ ಶ್ರೇಷ್ಠವಾದದ್ದು ಅಂತ ತಿಳಕೊಂಡು ನಿತ್ಯ ನೇಮ ಭಜನೆ ಧ್ಯಾನ ಪುರಾಣ ಪ್ರವಚನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ  ಧನ್ಯರಾಗುತ್ತೇವೋ  ಅದೇ ರೀತಿ ನಮ್ಮ ಜೀವನದಲ್ಲಿ ವರ್ಷದ ಹನ್ನೆರಡು ಶ್ರಾವಣ ಭಾವಿಸಿ ಪ್ರತಿ ದಿನ ಗುರುಗಳ ಕೊಟ್ಟ ಮಹಾ ಮಂತ್ರ ಅನುಷ್ಠಾನಕ್ಕೆ ತಂದರೆ ಗುರುಗಳ ಕೃಪೆಯಿಂದ ಜೀವನ್ಮುಕ್ತರಾಗುವದಲಿ ಸಂಶವಿಲ್ಲ  ಅಲ್ಪ ಅನುಷ್ಠಾನ ಅದ್ಭುತ ಪ್ರತಿ ಫಲ ಕೊಡುತ್ತದೆ ಎಂದು ತಿಳಿಸಿದರು. ಈ ಶ್ರಾವಣ ಸಪ್ತಾಹದ ಮುಕ್ತಾಯ ಸಮಾರಂಭದಲ್ಲಿ ವಿವಿಧೆಡೆಯಿಂದ ಆಗಮಿಸಿದ ಧಾರ್ಮಿಕ ಮುಖಂಡರು ಸಂತರು ಶರಣರು ಉಪಸ್ಥಿತರಿದ್ದರು. ಕರ್ನಾಟಕ ಮಹಾರಾಷ್ಟ್ರದ ಹಾಗೂ ಇತರೆ ರಾಜ್ಯಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು ಶ್ರೀ ಸಮರ್ಥ ಸದ್ಗುರು ರಾಮದಾಸ ಮಹಾರಾಜರ ದಾಸಬೋದದ ವಿಮಲ ಬ್ರಹ್ಮ ನಿರೂಪಣೆ ಹಾಗೂ ಪುಷ್ಪ ವೃಷ್ಠಿ ಯೊಂದಿಗೆ ಮಂಗಲಗೊಂಡಿತು
ವರದಿ ✍ ಭಾರತೇಶ. ಮ.ಹಾಸಿಲಕರ ಕಲಬುರಗಿ