ರಬಕವಿ - ಮಹಾಮಾರಿ ಕರೋನಾ ತೊಲಗಿಸಲು ಪ್ರತಿಯೊಬ್ಬರು ಎರಡು ಡೋಸ್ ಲಸಿಕೆ ಪಡೆಯಬೇಕು.ಭಾರತದ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರು ಭಾರತದಿಂದ ಕೋವಿಡ್ ನಿರ್ಮೂಲನೆ ಮಾಡುವ ಪಣ ತೊಟ್ಟಿರುವ ಹಿನ್ನೆಲೆ ಇಂದು ಅವರ 71 ನೇ ಜನ್ಮದಿನಾಚರಣೆ ನಿಮಿತ್ಯ ದೇಶಾದ್ಯಂತ ಬೃಹತ್ ಲಸಿಕಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪ್ರತಿಯೊಬ್ಬರಿಗೂ ಲಸಿಕೆ ದೊರಕಬೇಕು ಎಂಬ ಉದ್ದೇಶದಿಂದ ದೇಶದಲ್ಲಿ ಇಂದು ಒಂದೇ ದಿನ 1ಕೋಟಿ 70 ಲಕ್ಷಕ್ಕೂ ಅಧಿಕ ಮತ್ತು ಕರ್ನಾಟಕದಲ್ಲಿ 30 ಲಕ್ಷಗೂ ಅಧಿಕ ಲಸಿಕೆ ನೀಡುವ ಮತ್ತು ಜಿಲ್ಲೆಯಲ್ಲಿ 75 ಸಾವಿರ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಅದಕ್ಕಾಗಿ ಎಲ್ಲರಿಗೂ ಸುಲಭವಾಗಿ ಲಸಿಕೆ ದೊರೆಯುವ ವ್ಯವಸ್ಥೆ ಮಾಡಲಾಗಿದೆ.ವಿಶ್ವಗುರು ಭಾರತ ದೇಶವಾಗಬೆಕೇಂಬ ಉದ್ದೇಶದಿಂದ ಅವಿರತವಾಗಿ ಶ್ರಮಿಸುತ್ತಿರುವ ಮೋದಿಜಿಯವರ ಕನಸು ನನಸು ಮಾಡಲು ಪ್ರತಿಯೊಬ್ಬ ನಾಗರಿಕ ಎರಡು ಡೋಸ್ ಲಸಿಕೆ ಪಡೆಯುವುದರೊಂದಿಗೆ ಅವರ ಗುರಿ ಸಾಕಾರಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕಾಪ್ಟನ್ ಕೆ.ರಾಜೇಂದ್ರ ಅವರು ಹೇಳಿದರು.
ಗುರುದೇವ ಬ್ರಹ್ಮಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಸಮುದಾಯ ಆರೋಗ್ಯ ಕೇಂದ್ರ ರಬಕವಿ-ಬನಹಟ್ಟಿ ವತಿಯಿಂದ ಹಮ್ಮಿಕೊಂಡ ಬೃಹತ್ ಲಸಿಕಾ ಅಭಿಯಾನ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು.
ಈ ಬೃಹತ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಬಾಗಲಕೋಟ ಜಿಲ್ಲಾಧಿಕಾರಿ ಕಾಪ್ಟನ್ ಡಾ:ಕೆ.ರಾಜೇಂದ್ರ, ಜಮಖಂಡಿ ಉಪ ವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ, ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ,ಸಿಇಓ ಸಂಜಯ ಹಿಪ್ಪರಗಿ,ಸಿಪಿಐ ಜೆ.ಕರುಣೇಶಗೌಡ,ಪೌರಾಯುಕ್ತ ಶ್ರೀನಿವಾಸ ಜಾಧವ, ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಬಾಳವ್ವ ಕಾಖಂಡಕಿ,ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಆರೋಗ್ಯ ಇಲಾಖೆಯ ಅಪ್ಪಾಜಿ ಹೂಗಾರ,ಡಾ:ಹುಡೆದಮನಿ ಹಾಗೂ ಶಿವಾನಂದ ಕಾಗಿ,ಪರಪ್ಪ ಪೂಜಾರಿ,ಪಿ.ಜಿ.ಕಾಖಂಡಕಿ, ರಬಕವಿ-ಬನಹಟ್ಟಿ ನಗರಸಭೆ ಕಂದಾಯ ನಿರೀಕ್ಷಕ ಬಿ.ಕೆ.ಮಠದ, ಮ್ಯಾನೇಜರ ಸುಭಾಸ ಕೂದಾನಪೂರ,ಬಿಲ್ ಕಲೆಕ್ಟರ್ ಭೀಮಶಿ ಬಾಡಗಿ,ಸಿ.ಎಚ್.ಓ ಸುಜಾತಾ ಕುಂಬಾರ,ಡಾಟಾ ಆಪರೇಟರ್ ಎಸ್.ವ್ಹಿ.ದಳವಿ,ಆಶಾ ಕಾರ್ಯಕರ್ತೆ ಎಸ್.ಬಿ.ಪೂಜಾರಿ, ಅಂಗನವಾಡಿ ಶಿಕ್ಷಕಿ ಎಸ್.ಕೆ.ಕಿಮ್ಮೂರಿ,ಆರ್.ಡಿ.ಮಾಂಗ,ಎಂ.ಐ.ಕರಡಿ,ಎಸ್.ಎಸ್.ಗಡೆಪ್ಪನ್ನವರ ಹಾಗೂ ಲಸಿಕೆ ಪಡೆಯಲು ಬಂದ ಅನೇಕ ಸಾರ್ವಜನಿಕರು ಇದ್ದರು.

Social Plugin