ತೇರದಾಳ ಪಟ್ಟಣಕ್ಕೆ ಆಗಮಿಸಿದ ಬಾಗಲಕೋಟ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಅವರನ್ನು ಶ್ರೀಅಲ್ಲಮಪ್ರಭು ದೇವಸ್ಥಾನದ ಅರ್ಚಕರು ಶಾಲು ಹೊದಿಸಿ ಸನ್ಮಾನಿಸಿದರು.
ಕೋವಿಡ್ ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಭೇಟಿ
ತೇರದಾಳ : ಕೋವಿಡ್ ಲಸಿಕಾ ಅಭಿಯಾನದ ಪ್ರಯುಕ್ತ ಇಂದು ಬಾಗಲಕೋಟ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಇವರು ರಬಕವಿ-ಬನಹಟ್ಟಿ ತಾಲೂಕಿನ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಸಂದರ್ಭದಲ್ಲಿ ಪಟ್ಟಣದ ಶ್ರೀಅಲ್ಲಮಪ್ರಭು ದೇವಸ್ಥಾನಕ್ಕೆ ಬೇಟಿ ನೀಡಿ ದರ್ಶನಾಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಶಾಲು ಹೊದಿಸಿ ಸನ್ಮಾನಿಸಿದರು.
ಪಟ್ಟಣದ ಶ್ರೀಪ್ರಭುಲಿಂಗೇಶ್ವರ ದೇವಸ್ಥಾನದ ಹತ್ತರದಲ್ಲಿ ತೆರೆದ ಲಸಿಕಾ ಮೇಳಕ್ಕೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದ ಅವರು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಅಭಿನಂದಿಸಿದರು.
ಇದಕ್ಕಿಂತ ಪೂರ್ವದಲ್ಲಿ ಸಮೀಪದ ಹನಗಂಡಿ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಜನರು ನಿರ್ಭೀತರಾಗಿ ಸರಕಾರ ಉಚಿತವಾಗಿ ನೀಡುತ್ತಿರುವ ಲಸಿಕೆಯನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಡೆದುಕೊಂಡು ಕರೋನಾ ಮಹಾಮಾರಿಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವಂತೆ ತಿಳಿಸಿ ಕೆಲಹೊತ್ತು ಲಸಿಕಾ ಕೇಂದ್ರ ಸಿಬ್ಬಂದಿಯೊಂದಿಗೆ ಸಮಾಲೋಚಿಸಿದರು. ಈ ಸಂಧರ್ಭದಲ್ಲಿ ಹನಗಂಡಿ ಗ್ರಾಮದ ಮುಖಂಡ ಪ್ರಸನ್ನಕುಮಾರ ದೇಸಾಯಿ, ಗ್ರಾಮ ಪಂಚಾಯತ ಅಧ್ಯಕ್ಷ ಅನೀಲ ಗುಬಚೆ, ಸದಸ್ಯರಾದ ಧರೇಶ ಹುದ್ದಾರ, ಮಹಾವೀರ ಬಿದರಿ, ಕರೆಪ್ಪ ದಳವಾಯಿ ಸೇರಿದಂತೆ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳೊಂದಿಗೆ ತಂಡದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ, ಉಪತಹಶಿಲ್ದಾರ ಎಸ್.ಬಿ ಮಾಯನ್ನವರ, ತೇರದಾಳ ಪುರಸಭಾಧಿಕಾರಿ ಅಶೋಕ ಗುಡಿಮನಿ, ತೇರದಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಸುದರ್ಶನ ನಿಡೋಣಿ, ಪ್ರಭಾರ ಆಹಾರ ನಿರೀಕ್ಷಕ ಪಿ.ಎಸ್ ಮಠಪತಿ, ವೃತ್ತ ನಿರೀಕ್ಷಕ ಬಸವರಾಜ ತಾಳಿಕೋಟಿ ಸೇರಿದಂತೆ ಕಂದಾಯ, ಆರೋಗ್ಯ ಹಾಗೂ ಪೋಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ದೇವಸ್ಥಾನದ ಅರ್ಚಕರು ಹಾಜರಿದ್ದರು.
------------------------


Social Plugin