ಬಂಡಿಗಣಿ 17: ಶ್ರೀ ಬಸವ ಗೋಪಾಲ ನೀಲಮಾಣಿಕ ಮಠ ಸುಕ್ಷೇತ್ರ ಬಂಡಿಗಣಿ ಮಠದ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಶ್ರೀಗಳ ಜನ್ಮ ದಿನಾಚರಣೆಯ ನಿಮಿತ್ಯ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೃಷ್ಣ ನದಿ ತೀರದ ಜನ್ಮಸ್ಥಳ ಸವದಿ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ ಪಾರಮಾರ್ಥಿಕ ಸಪ್ತಾಹ ಹಾಗೂ ಗಂಗಾದೇವಿ ಪೂಜೆ, ನೈವೇದ್ಯ, ಹಾಗೂ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮವು ದಾನೇಶ್ವರ ಶ್ರೀಗಳ ದಿವ್ಯ ಸಾನಿದ್ಯದಲ್ಲಿ ಶನಿವಾರ ರಾತ್ರಿ ಜಾಗರಣೆ, ಭಕ್ತಿ ಗೀತೆ, ಮುಂಡಿಗೆ ಪದಗಳು ಜರುಗುತ್ತವೆ. ರವಿವಾರದಂದು ಪಾರಮಾರ್ಥಿಕ ಸಪ್ತಾಹ ಜರುಗುವುದು. ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿರೆಂದು ಸವದಿ ಗ್ರಾಮದ ಬಸವ ಗೋಪಾಲ ಬಂಡಿಗಣಿ ಮಠದ ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ದಾನೇಶ್ವರ ಶ್ರೀಗಳು ಸವದಿ ಗ್ರಾಮದಲ್ಲಿ 1950 ರಂದು ಜನಿಸಿ ಬಂಡಿಗಣಿಯಲ್ಲಿ ಸ್ವತಃ ದುಡಿದು ಶ್ರೀ ಬಸವ ಗೋಪಾಲ ನೀಲಮಾಣಿಕ ಮಠ ಸ್ಥಾಪನೆ ಮಾಡಿ ವರ್ಷವಿಡಿ ಸಪ್ತಾಹ, ರಾಜ್ಯ ಹೊರ ರಾಜ್ಯಗಳಲ್ಲಿ ಅನ್ನದಾಸೋಹ ಮಾಡಿ ದಾಸೋಹದ ಪ್ರಖ್ಯಾತಿ ಪಡೆದಿದ್ದಾರೆ. ಆಧ್ಯಾತ್ಮ ಲೋಕದ ಸೂರ್ಯ, ಸದ್ಭಕ್ತರ ಪಾಲಿನ ಬೆಳಕು.ಸಾಧು-ಸಂತರಲ್ಲ.ಒಂದು ಜಾತಿ, ಮತ, ಪಂಥ,ವರ್ಗಕ್ಕೆ ಅಂಟಿಕೊಂಡ ಮಠಾಧೀಶರಲ್ಲ.ನಿಯಮ, ನಿಷ್ಠೆ, ಪೂಜೆ, ಆಚರಣೆಗಳನ್ನು ಮೀರಿ ನಿಂತವರು.ಪರಿಶುದ್ಧ ಮನಸ್ಸು,ನೀತಿ, ಧ್ಯಾನ, ಭಕ್ತಿ,ದಾನ-ಧರ್ಮದಿಂದ ಮಾತ್ರ ನನ್ನನ್ನು ಒಲಿಸಿಕೊಳ್ಳಲು ಸಾಧ್ಯ ಎಂಬುದನ್ನು ಭಕ್ತರಿಗೆ ತೋರಿಸಿದವರು.ಅನ್ನದಾಸೋಹ, ವಸ್ತ್ರ ದಾಸೋಹ, ಜ್ಞಾನ ದಾಸೋಹದ ಮೂಲಕ ಇತರ ಮಠಾಧೀಶರಿಗೆ ಅನುಕರಣೀಯ ಆದರ್ಶಪಥವನ್ನು ನಿರ್ಮಿಸಿದವರು.ಸುಳ್ಳು-ಕಳ್ಳತನ ಎರಡನ್ನು ಬಿಡಿರಿ,ದಾನ-ಧ್ಯಾನ ಎರಡನ್ನು ಮಾಡಿರಿ ಎಂದು ಸರಳ ಬೋಧನೆ ಮಾಡುವವರು.ಬಬಲಾದಿ ಮುಂಡಿಗಿ ಭಗವದ್ಗೀತೆ ಸಾರಾಂಶ ಕ್ರೋಢೀಕರಿಸಿ ಆಡುಭಾಷೆಯ ಸಿಡಿಲಿನಂತಹ ಅಮೃತ ನುಡಿಗಳನ್ನಾಡಿ ಜಗತ್ತು ಉದ್ದಾರ ಮಾಡಲು ಧಾರ್ಮಿಕ ಕಾರ್ಯ ಮಾಡುವವರು.ನಂಬಿದ ಭಕ್ತರನ್ನು ಒಡಲೋಳಿಟ್ಟು ಕಾಯ್ದು ಕಷ್ಟದಲ್ಲಿ ಹೆಣ್ಣಾಗಿ, ಗಂಡಾಗಿ ವಿವಿಧ ರೂಪಗಳಲ್ಲಿ ಧಾವಿಸಿ ಬಂದು ರಕ್ಷಿಸುವ ಸಾಕ್ಷಾತ್ ಪರಮಾತ್ಮರಿವರು.ದುಷ್ಟರನ್ನು ಮುಟ್ಟದೇ ಸಂಹರಿಸುವವರು.ನಂಬಿದ ಭಕ್ತರನ್ನು ಒಡಲೊಳಗಿಟ್ಟು ಕಾಯುವ ಕರುಣಾಮಯಿ,ದೀನದಯಾಳು ಸಾಕ್ಷಾತ್ ಮಹಾವಿಷ್ಣುವಿನ ಅವತಾರಿ ಪುರುಷರು ಕಲಿಯುಗದಲ್ಲಿ ನಡೆದಾಡುವ ದೇವರೇ ಆಗಿರುವ ಶ್ರೀ ಅನ್ನದಾನೇಶ್ವರ ಶ್ರೀಗಳ ಜನ್ಮ ದಿನಾಚರಣೆಯ ಹಾಗೂ ಸಪ್ತಾಹ ಕಾರ್ಯಕ್ರಮವು ರವಿವಾರ ದಂದು ಜರುಗುವುದು.

Social Plugin